Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಂಸ್ಕಾರಯುತ ವಿದ್ಯಾವಂತರು ಸಮಾಜಕ್ಕೆ ದೊಡ್ಡ ಸಂಪತ್ತು : ಚಂದ್ರಶೇಖರ ಸ್ವಾಮೀಜಿ

06:38 PM Jul 28, 2024 IST | suddionenews
Advertisement

ಸುದ್ದಿಒನ್, ಗುಬ್ಬಿ, ಜುಲೈ.28 : ಶಿಕ್ಷಣಕ್ಕೆ ಆದ್ಯತೆ ಕೊಟ್ಟ ನಾಡು ಸೌಖ್ಯವಾಗಿರುತ್ತದೆ. ಯಾರಲ್ಲಿ ಹಣ ಅಧಿಕಾರ ಇರುತ್ತದೆಯೋ ಅವರು ತ್ಯಾಗಿಗಳಾಗಿರಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಪ್ರೀತಿಸುವ ಗುಣವಂತರಾಗಬೇಕು ಸಂಸ್ಕಾರಯುತ ವಿದ್ಯಾವಂತರು ಸಮಾಜಕ್ಕೆ ದೊಡ್ಡ ಆಸ್ತಿ ಎಂದು ಗವಿಮಠ ಬೆಟ್ಟದಹಳ್ಳಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.

Advertisement

ಪಟ್ಟಣದ ಹೊರವಲಯ ಹೇರೂರು ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆದ ತಾಲೂಕು ವೀರಶೈವ ಲಿಂಗಾಯಿತ ನೌಕರರ ಸಮಾವೇಶ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು ಸಂಸ್ಕಾರ ಎಂದರೆ ಅರಿವು ಆಚಾರ ತಿಳುವಳಿಕೆ ಹೊರೆತು ದ್ಯಾನ ಪೂಜೆ ತಪಸ್ಸು ಮಾಡುವುದಲ್ಲ ಎಲ್ಲರನ್ನೂ ಅಪ್ಪಿಕೊಂಡು ಎಲ್ಲರಲ್ಲೂ ದೇವರನ್ನು ಕಾಣುವ ಅನ್ನ ಆಹಾರ ವಿದ್ಯೆ ನೀಡುವ ಧರ್ಮ ವೀರಶೈವ ಧರ್ಮ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ ಮಕ್ಕಳು ತಂದೆ ತಾಯಿಗಳನ್ನು ಗೌರವಿಸಬೇಕು. ಪೂರ್ವಿಕರ ಆಚಾರ ವಿಚಾರ ನಡೆ-ನುಡಿ ಮೈಗೂಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಮರೆಯಾಗುತ್ತಿವೆ. ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿದಾಗ ನಾವು ನಡೆದು ಬಂದ ದಾರಿ ಮರೆಯಬಾರದು ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಕೆ ಎಂ ರವೀಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ ಎಸ್ ಸಿದ್ದಲಿಂಗಪ್ಪ, ಪ್ರಾಂಶುಪಾಲ ಡಾ. ಪ್ರಸನ್ನ ಭಾ.ಜ.ಪ. ತಾಲೂಕ ಅಧ್ಯಕ್ಷ ಬಿಎಸ್ ಪಂಚಾಕ್ಷರಿ, ಕ, ಸಾ, ಪ, ತಾಲೂಕ್ ಅಧ್ಯಕ್ಷ ಎಚ್ ಸಿ ಯತೀಶ್, ಶಿವ ಬಸವ ನೌಕರರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎಸ್ ಯೋಗಾನಂದ ಮುಖಂಡರಾದ ಚಂದ್ರಶೇಖರ ಬಾಬು, ಪ್ರಭಣ್ಣ,ಹೇರೂರು ರಮೇಶ್, ಸೋಮಶೇಖರ್, ದಿವ್ಯ ಪ್ರಕಾಶ್, ಮನುಕೊಪ್ಪ, ಶಶಿಕಲಾ ಯೋಗೇಶ್, ಶಿಕ್ಷಕರಾದ ದಯಾನಂದ್, ಉಮೇಶ್, ನಂದೀಶ್, ಇತರರು ಇದ್ದರು.

Advertisement
Tags :
bengaluruChandrasekhara SwamijichitradurgaCulturededucatedgreat assetGubbipeoplesocietysuddionesuddione newstumakuruಗುಬ್ಬಿಚಂದ್ರಶೇಖರ ಸ್ವಾಮೀಜಿಚಿತ್ರದುರ್ಗತುಮಕೂರುಬೆಂಗಳೂರುವಿದ್ಯಾವಂತರುಸಂಪತ್ತುಸಮಾಜಸಂಸ್ಕಾರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article