Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಕ್ಕಳು ಶಿಕ್ಷಣವಂತರಾಗಲು ಒಳ್ಳೆಯ ವಾತಾವರಣ ಕಲ್ಪಿಸಿ: ವಾಣಿ.ಕೆ. ಶಿವರಾಂ

07:17 PM Aug 05, 2024 IST | suddionenews
Advertisement

 

Advertisement

ಸುದ್ದಿಒನ್, ಗುಬ್ಬಿ, ಆಗಸ್ಟ್. ‌05 : ಪ್ರತಿಯೊಬ್ಬರೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವುದರ ಮೂಲಕ ಉನ್ನತ ಹುದ್ದೆಯನ್ನು ಅಲಂಕರಿಸಿ ಸಮುದಾಯದಲ್ಲಿ ತಾವು ಇರುವಿಕೆಯನ್ನು ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷೆ ವಾಣಿ.ಕೆ ಶಿವರಾಂ ತಿಳಿಸಿದರು.

ಪಟ್ಟಣದ ಎಸ್ ಎಂ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ
ಗುಬ್ಬಿ ತಾಲ್ಲೂಕು ಛಲವಾದಿ ಮಹಾಸಭಾದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ನಮ್ಮ ಮನೆಯವರ ಕನಸು ನನಸಾಗಬೇಕಾದರೆ ಛಲವಾದಿ ಸಮುದಾಯದ ಬಂಧುಗಳು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಮೂಲಕ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು. ಕೆ.ಶಿವರಾಂ ರವರ ಕೆಲಸದ ಅವಧಿಯಲ್ಲಿ ಛಲವಾದಿ ಜನಾಂಗಕ್ಕೆ ಸರ್ಕಾರದಿಂದ ಬರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ.
ಸಾಮಾಜಿಕವಾಗಿ,ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಪೋಷಕರು ಸಹಕರಿಸಿ ಉನ್ನತ ಹುದ್ದೆಯನ್ನು ಅಲಂಕರಿಸಲು ಪೂರಕ ವಾತಾವರಣವನ್ನು ಸೃಷ್ಟಿ ಮಾಡಿಕೊಡಬೇಕೆಂದು ತಿಳಿಸಿದರು.

ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನವರು ಮಾತನಾಡಿ ರಾಜ್ಯದಲ್ಲಿ ಬೇರೆ ಸಮಾಜದವರು ಉನ್ನತ ಮಟ್ಟಕ್ಕೆ ಬರಲು ಪ್ರಯತ್ನಿಸುತ್ತಿದ್ದು.ನಮ್ಮ ಜನಾಂಗದ ವತಿಯಿಂದಲೂ ಕೂಡ ಅನೇಕರು ಅನೇಕ ಭಾಗಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಹೀಗೆ ಜನಾಂಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರಬೇಕು.ಎನ್ನುವುದೇ ನಮ್ಮೆಲ್ಲರ ಆಶಯ ಎಂದು ತಿಳಿಸಿದರು.

ರಾಜ್ಯ ಜಂಟಿ ಕಾರ್ಯದರ್ಶಿ ಟಿ.ಆರ್. ನಾಗೇಶ್,
ಮಾತನಾಡಿ, 4000 ಸದಸ್ಯತ್ವವನ್ನು ಚಲವಾದಿ ಮಹಾಸಭಾ ಹೊಂದಿದ್ದು ಇನ್ನೂ ಹೆಚ್ಚಿನ ಸದಸ್ಯರನ್ನು ಸಂಘಟಿಸುವ ಗುರಿಯನ್ನು ಇಟ್ಟುಕೊಂಡಿದೆ. ಕೆ.ಶಿವರಾಂ ರವರ ಹಾಕಿಕೊಟ್ಟ ದಾರಿಯಲ್ಲಿ ಸಮುದಾಯದ ಬಂದುಗಳು ನಡೆಯಬೇಕು. ಛಲವಾದಿ ಭವನ ನಿರ್ಮಾಣಕ್ಕೆ ಶಾಸಕರು ಸ್ಥಳ ಒದಗಿಸಿ ಕೊಡಬೇಕು ಎಂದು ಮನವಿ ಮಾಡಿದರು.

ರಾಜ್ಯ ಖಜಾಂಚಿ ಮೈಕೋ ನಾಗರಾಜು ಮಾತನಾಡಿ, ಸಮುದಾಯದ ಬಗ್ಗೆ ಕಾಳಜಿ ಇಟ್ಟು ಕೊಂಡಾಗ ಮಾತ್ರ ಮುಖ್ಯ ವಾಹಿನಿಯಲ್ಲಿ ಬರಲು ಸಾಧ್ಯವಾಗುತ್ತದೆ ಎಂದರು.

ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಟಿ.ಈರಣ್ಣ ಮಾತನಾಡಿ, ಸಮುದಾಯದ ಸಂಘಟನೆಯಾದರೆ ಮಾತ್ರ ಸರ್ಕಾರದಿಂದ ದೊರೆಯುವಂತೆ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು ಆದ್ದರಿಂದ ಛಲವಾದಿ ಸಮುದಾಯದ ಬಂಧುಗಳು ಸಂಘಟಿತರಾಗಿ ಎಂದು ಕರೆ ನೀಡಿದರು.

ಗ್ರಾಮ ಪಂಚಾಯತಿ ಚುನಾಯಿತರಾದ ಸುಮುದಾಯದವರಿಗೆ ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದುರ್ಗ ಛಲವಾದಿ ಗುರುಪೀಠದ ಶ್ರೀ ಬಸವನಾಗಿ ದೇವ ಶರಣ ಸ್ವಾಮೀಜಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ನಿರ್ದೇಶಕರಾದ ಮಹಾದೇವಯ್ಯ, ಪದಾಧಿಕಾರಿಗಳಾದ,ಕಿಟ್ಟದಕುಪ್ಪೆ ನಾಗರಾಜು, ಸಾತೇನಹಳ್ಳಿ ರಮೇಶ್ , ಜಗನ್ನಾಥ್, ಜಯಣ್ಣ, ಹೆಚ್ ಕೆ ಮಧು, ಇರುಕಸಂದ್ರ ಮಂಜುನಾಥ್, ಗುಬ್ಬಿ ಸಚಿನ್,ಎಚ್ ಕೆ ಮಂಜುನಾಥ್ ಬಾಗೂರು ಗೋಪಾಲ್, ಲೋಕೇಶ್, ಉಮೇಶ್, ಆನಂದ್,ನಾಗರಾಜು, ಸಣ್ಣಪ್ಪ, ರಾಜು ಹಾಗೂ ಗುಬ್ಬಿ ತಾಲೂಕು ಛಲವಾದಿ ಮಹಾಸಭಾದ ಘಟಕದ ಹೋಬಳಿ ಪದಾಧಿಕಾರಿಗಳು ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement
Tags :
bengaluruchildrenchitradurgacreateeducatedenvironmentgoodsuddionesuddione newstumakuruVani K Shivaramಚಿತ್ರದುರ್ಗತುಮಕೂರುಬೆಂಗಳೂರುಮಕ್ಕಳುವಾಣಿ ಕೆ ಶಿವರಾಂವಾತಾವರಣಶಿಕ್ಷಣಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article