10 ಸಾವಿರಕ್ಕೂ ದಾಟದೆ ಇದ್ದ ಕೊಬ್ಬರಿ ಈಗ 15 ಸಾವಿರಕ್ಕೆ ಮಾರಾಟ..!
ಕೊಬ್ಬರಿ ಬೆಳೆಗಾರರಿಗೆ ಸಂತಸವೋ ಸಂತಸ. ಈಗ ಕೊಬ್ಬರಿಗೆ ಒಳ್ಳೆ ಬೆಲೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಈ ಹಿಂದೆಲ್ಲಾ ಕೊಬ್ಬರಿ 10 ಸಾವಿರಕ್ಕೆ ಮಾರಾಟವಾಗಿದ್ದೇ ಹೆಚ್ಚು. ಹತ್ತು ಸಾವಿರದ ಒಳಗೆ ಮಾರಾಟವಾಗುತ್ತಿತ್ತು. ಆದರೆ ಈಗ ಕೊಬ್ಬರಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಕೊಬ್ಬರಿ ಧಾರಣೆ ಈಗ 15 ಸಾವಿರ ದಾಟಿದೆ. ಇದು ಕೊಬ್ಬರಿ ಬೆಳೆದ ರೈತರಿಗೆ ಸಂತಸ ತಂದಿದೆ. ತೆಂಗು ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ. ಯಾಕಂದ್ರೆ ಯಾವುದೇ ಬೆಳೆಯನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದರಲ್ಲೂ ಈ ಬಾರಿ ಮಳೆ ಇಲ್ಲದೆ, ರೋಗದ ನಡುವೆಯೂ ತೆಂಗನ್ನು ಉಳಿಸಿಕೊಂಡಿದ್ದಾರೆ.
ತಿಪಟೂರು ಮಾರುಕಟ್ಟೆಯಲ್ಲಿ ಈಚೆಗೆ ಮಾರಾಟವಾದ ಕೊಬ್ಬರಿ ಬೆಲೆ ಎಂದರೆ ಕನಿಷ್ಠ 13,088 ಆದರೆ, ಗರಿಷ್ಠ 15,022 ರೂಒಅಯಿ ಆಗಿದೆ. ಇನ್ನು ಅರಸೀಕೆರೆ ಮಾರುಕಟ್ಟೆಯಲ್ಲು ಕನಿಷ್ಠ 11 ಸಾವಿರಕ್ಕೆ ಮಾರಾಟವಾದರೆ ಗರಿಷ್ಠ 15 ಸಾವಿರ ರೂಪಾಯಿ ಆಗಿತ್ತು. ಕೆ ಆರ್ ಪೇಟೆ ಮಾರುಕಟ್ಟೆಯಲ್ಲಿ ಕನಿಷ್ಠ 9,851 ರೂಪಾಯಿ ಆದರೆ ಗರಿಷ್ಠ ಬೆಲೆಯಲ್ಲಿ 10 ಸಾವಿರಕ್ಮೆ ಮಾರಾಟವಾಗಿದೆ.
ಇನ್ನು ತುರುವೆಕೆರೆಯಲ್ಲಿ 14,500 ಕನಿಷ್ಠ ಬೆಲೆ ಇದ್ದು, ಅದೇ ಬೆಲೆ ಗರಿಷ್ಠ ಬೆಲೆಯಲ್ಲೂ ಮಾರಾಟವಾಗಿದೆ. ಇನ್ನು ಮಧುಗಿರಿ ಮಾರುಕಟ್ಟೆಯಲ್ಲಿ ಕನಿಷ್ಠ 8 ಸಾವಿರಕ್ಕೆ ಮಾರಾಟವಾಗಿದ್ದರೆ, ಗರಿಷ್ಠ 9,900 ಬೆಲೆಗೆ ಮಾರಾಟವಾಗಿದೆ. ಕಳೆದ ಕೆಲವು ವರ್ಷಗಳಿಂದ ಕೊಬ್ಬರಿ ಬೆಲೆಯಲ್ಲು ಇಳಿಕೆಯಾಗಿತ್ತು. ತೆಂಗು ಬೆಳೆಗಾರರು ಇದರಿಂದ ಸಾಕಷ್ಟು ನಷ್ಟ ಅನುಭವಿಸಿದ್ದರು. ಮೊದಲೇ ನುಸಿ ರೋಗ ಸೇರಿದಂತೆ ಹಲವು ರೋಗಗಳು ಬಾಧಿಸುತ್ತಿವೆ. ಇದರ ನಡುವೆಯೂ ಬೆಳೆ ಉಳಿಸಿಕೊಳ್ಳುವುದು ರೈತರಿಗೆ ಸವಾಲಿನ ಕೆಲಸವೇ ಸರಿ.