ಸಿಎಂ ವಿಚಾರ ಹೈಕಮಾಂಡ್ ತೀರ್ಮಾನ ಮಾಡಲಿದೆ : ಹರಿಪ್ರಸಾದ್ ಮಾತಿಗೆ ಪರಮೇಶ್ವರ್ ಪ್ರತಿಕ್ರಿಯೆ
ತುಮಕೂರು: ದಲಿತ ಸಿಎಂ ಆಗಬೇಕೆಂಬ ಕೂಗು ರಾಜ್ಯದಲ್ಲಿ ಆಗಾಗ ಕೇಳಿಸುತ್ತಲೇ ಇರುತ್ತದೆ. ಅದರಲ್ಲೂ ಜಿ ಪರಮೇಶ್ವರ್ ಅಂಗಳದಲ್ಲಿ ಸಿಎಂ ವಿಚಾರ ಸ್ಪ್ರಿಂಗ್ ಆಗುತ್ತಲೇ ಇರುತ್ತದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗದೆ ಹತಾಶರಾಗಿರುವ ಬಿಕೆ ಹರಿಪ್ರಸಾದ್ ಆಗಾಗ ಸಿದ್ದರಾಮಯ್ಯ ಅವರ ಮೇಲೂ ಆಕ್ರೋಶ ಹೊರ ಹಾಕುತ್ತಿರುತ್ತಾರೆ. ಇತ್ತಿಚೆಗೆ ಗೃಹ ಸಚಿವ ಪರಮೇಶ್ವರ್ ಅವರ ಪರ ಬ್ಯಾಟ್ ಬೀಸಿದ್ದರು.
ಗೃಹ ಸಚಿವ ಪರಮೇಶ್ವರ್ ಗೆ ಸಿಎಂ ಆಗಲು ಅರ್ಹತೆ ಇರುವಂತ ವ್ಯಕ್ತಿ. ಪರಮೇಶ್ವರ್ ಗೆ ಈ ಬಾರಿ ಡಿಸಿಎಂ ಸ್ಥಾನವನ್ನಾದರೂ ನೀಡಬೇಕಿತ್ತು. ಇದು ನಾವೂ ತಲೆ ತಗ್ಗಿಸುವಂತ ವಿಚಾರ ಎಂದಿದ್ದರು. ಇದಕ್ಕೆಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿ, ಬಿಕೆ ಹರಿಪ್ರಸಾದ್ ಅವರು ಅಭಿಮಾನದಿಂದ ಈ ಮಾತನ್ನು ಹೇಳಿದ್ದಾರೆ.
ನಾನು ಸಿಎಂ ಆಗಬೇಕು ಎಂದು ಹೇಳಿದ ಬಿಕೆ ಹರಿಪ್ರಸಾದ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಬಹಳ ಮಂದಿಗೆ ನಾನು ಸಿಎಂ ಆಗಬೇಕು ಎಂಬ ಆಸೆ ಇದೆ. ಯಾರು ಸಿಎಂ ಆಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಹೈಕಮಾಂಡ್ ತೀರ್ಮಾನದ ಮೇರೆಗೆ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಲಾಗಿದೆ. ಡಿಕೆ ಶಿವಕುಮಾರ್ ಅವರನ್ನು ಡಿಸಿಎಂ ಮಾಡಲಾಗಿದೆ ಎಂದಿದ್ದಾರೆ.