Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಂದ್ರಶೇಖರ್ ಸ್ವಾಮೀಜಿ ವರ್ಸಸ್ ಸಚಿವ ರಾಜಣ್ಣ : ತಾರಕ್ಕೇರಿದ ಮಾತುಗಳು..!

02:45 PM Jun 28, 2024 IST | suddionenews
Advertisement

 

Advertisement

ತುಮಕೂರು: ನಿನ್ನೆ ಕೆಂಪೇಗೌಡ ಜಯಂತಿಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಅವರು ಸಿಎಂ ಹುದ್ದೆಯ ಬಗ್ಗೆ ಮಾತನಾಡಿದ್ದರು. ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟು ಕೊಡಲುವಂತೆ ಸಿದ್ದರಾಮಯ್ಯ ಅವರ ಬಳಿ ತುಂಬಿದ ವೇದಿಕೆಯಲ್ಲಿ ಮನವಿ ಮಾಡಿದ್ದರು. ಅದೀಗ ಸಿದ್ದರಾಮಯ್ಯ ಬಣದಲ್ಲಿ ಬಾರೀ ಚರ್ಚೆಯಾಗಿದ್ದು, ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಸ್ವಾಮೀಜಿ ವಿರುದ್ಧ ಆಕ್ರೋಶಗೊಂಡಿದ್ದಾರೆ‌.

'ದೇಶದಲ್ಲಿ ಬಹಳ ಜನ ಸ್ವಾಮೀಜಿಗಳು ಇದ್ದಾರೆ. ನನಗೆ ಮಠ ಮಾಡಿಕೊಡುತ್ತೀನಿ ಅಂತ ಒಳ್ಳೆಯ ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ನಾನು ಪರಿಶೀಲನೆ ಮಾಡ್ತೀನಿ. ಬೆವರು ಸುರಿಸದೆ ಜೀವನ ಮಾಡುವಂತಹ ಸ್ವಾಮೀಜಿಗಳು ಸಲಹೆ ನೀಡಿದ್ದಾರೆ. ಅದನ್ನು ನಾನು ಪರಿಶೀಲನೆ ಮಾಡ್ತೀನಿ. ಸ್ವಾಮೀಜಿ ಸುಲಭವಾಗಿ ಜೀವನ ನಡೆಸುವ ಮಾರ್ಗ ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ‌. ನಾವೂ ನೋಡಿದ ಸ್ವಾಮೀಜಿ ಸಮಾಜಕ್ಕೆ ಒಳಿತನ್ನು ಬಯಸುವವರು. ಆದರೆ ಹೀಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಸರಿಯಲ್ಲ ಎಂದು ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಇನ್ನು ರಾಜಣ್ಣ ಅವರ ಬಗ್ಗೆ ಚಂದ್ರಶೇಖರನಾಥ ಸ್ವಾಮೀಜಿ ಹೇಳಿದ್ದು ಹೀಗೆ, ರಾಜಣ್ಣ ಆತ್ಮಪೂರ್ತಿಯಾಗಿ ಹೆಂಡತಿ, ಮನೆ, ಮಕ್ಕಳು ಎಲ್ಲವನ್ನು ಬಿಟ್ಟು ಬಂದರೆ ಅವರಿಗೊಂದು ಮಠ ಮಾಡಿಕೊಡುವುದು ನಮ್ಮ ಜವಾಬ್ದಾರಿ. ಆಯ್ತು ಅದನ್ನು ಪೀಠವನ್ನು ಕೊಡ್ತೀನಿ. ಅವರು, ತರ್ಲೆ, ಅವರ ಮಾತಲ್ಲಿ ತೂಕ ಇಲ್ಲ ಏನಿಲ್ಲ. ಅವನಿಗೆ ಯೋಗ್ಯತೆಯೇ ಇಲ್ಲ ಮಾತನಾಡುವುದಕ್ಕೆ. ಅವನ್ನ ನಾನು ನೋಡಿಲ್ಲ. ಅವನು ಯಾರು ಗೊತ್ತಿಲ್ಲ. ಚಪಲವಾದ ಬಾಯಿ ಏನಾದ್ರೂ ಹೊದರಬೇಕು ಹೊದರಿರ್ತಾನೆ ಎಂದಿದ್ದಾರೆ.

Advertisement
Tags :
bengaluruChandrasekhar SwamijichitradurgaMinister Rajannasuddionesuddione newsಕೆ ಎನ್ ರಾಜಣ್ಣಚಂದ್ರಶೇಖರ್ ಸ್ವಾಮೀಜಿಚಿತ್ರದುರ್ಗಬೆಂಗಳೂರುವರ್ಸಸ್ಸಚಿವ ಕೆ ಎನ್ ರಾಜಣ್ಣಸಚಿವ ರಾಜಣ್ಣಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article