ಎಚ್ಐವಿ ಮುಕ್ತ ಮಗುವಿನ ಜನನದಿಂದ ಎಚ್ಐವಿ ಮುಕ್ತ ಸಮಾಜ ನಿರ್ಮಾಣ : ಡಾ.ರಂಗನಾಥ್
ಚಿತ್ರದುರ್ಗ, (ಮಾ.10) : ಎಚ್ಐವಿ ಮುಕ್ತ ಮಗುವಿನ ಜನನದಿಂದ ಎಚ್ಐವಿ ಮುಕ್ತ ಸಮಾಜದ ನಿರ್ಮಾಣ ಮಾಡಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಂಗನಾಥ್ ಹೇಳಿದರು.
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹೆಚ್ಐವಿ /ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ತಾಯಿಯಿಂದ ಮಗುವಿಗೆ ಎಚ್ಐವಿ ಸೋಂಕು ಹರಡುವಿಕೆ ನಿರ್ಮೂಲನಾ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
"ಎಲ್ಲೆಡೆಯೂ ಆರೋಗ್ಯ ಎಲ್ಲರಿಗೂ ಆರೋಗ್ಯ" ಎನ್ನುವ ರಾಷ್ಟ್ರೀಯ ಆರೋಗ್ಯ ಅಭಿಯಾನದ ಘೋಷಣೆಯೊಂದಿಗೆ ಹೆಚ್ಐವಿ /ಏಡ್ಸ್ ದಿನವನ್ನು ಸೋಂಕು ಮುಕ್ತ, ಕಳಂಕ/ ತಾರತಮ್ಯ ಮುಕ್ತ , ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿರುವುದು ಆದ್ಯ ಕರ್ತವ್ಯವಾಗಿದೆ ಏಕೆಂದರೆ ಎಚ್ಐವಿ ಸೋಂಕು ಒಂದು ಆರೋಗ್ಯದ ಸಮಸ್ಯೆ ಅಷ್ಟೇ ಅಲ್ಲ ಇದಕ್ಕೆ ಆರ್ಥಿಕ ಸಾಮಾಜಿಕ ಮಾನಸಿಕ ಹಾಗೂ ಸಾಂಸ್ಕೃತಿಕ ಆಯಾಮಗಳಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ತಿಳಿಸಿದರು.
ಪ್ರಾಸ್ತಾವಿಕ ನುಡಿಯನ್ನು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಯವರಾದ DAPCO (District AIDS Prevention Control Officers) ಡಾ.ಸುಧಾ ರವರು ಮಾತನಾಡಿ, ಮೊದಲಬಾರಿಗೆ ಎಲ್ಲಾ ತಾಲೂಕಿನಲ್ಲಿ ಪ್ರತಿ ತಿಂಗಳು ನಡೆಯುವ ಪ್ರಧಾನ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನದಡಿಯಲ್ಲಿ ಬಂದಿರುವ ಎಲ್ಲಾ ಗರ್ಭಿಣಿ ಸ್ತ್ರೀಯರಿಗೆ ಎಚ್ಐವಿ/ಏಡ್ಸ್ ಬಗ್ಗೆ ಮಾಹಿತಿ ಮತ್ತು ತಿಳುವಳಿಕೆ ನೀಡಿದರು.
ಪ್ರತಿ ಗರ್ಭಿಣಿ ಸ್ತ್ರೀ ಯು ಮೊದಲ 3 ತಿಂಗಳಲ್ಲಿ HIV ಸ್ಥಿತಿ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು . ಒಂದು ಪಕ್ಷ ಗರ್ಭಿಣಿ ಸ್ತೀ HIV ಸೋಂಕಿತರಾಗಿದ್ದಲ್ಲಿ ತಮ್ಮ ಗರ್ಭಾವಧಿಯಲ್ಲಿ, ಪ್ರಸೂತಿ ಸಮಯದಲ್ಲಿ, ಹಾಲುಣಿಸುವ ಸಮಯದಲ್ಲಿ, ತಾಯಿಯಿಂದ ಮಗುವಿಗೆ HIV ಸೋಂಕು ಹರಡದಂತೆ ಚಿಕಿತ್ಸೆಗೆ ಒಳಪಡಿಸಲು ತಿಳಿಸಲಾಯಿತು.
ಮಗುವಿನ ಜನ್ಮ ನೀಡಿದ ತಕ್ಷಣ ಮಗುವಿಗೆ ನೆವರೋಪಿನ್ ದ್ರಾವಣ ನೀಡುವುದರಿಂದ HIV ಸೋಂಕು ಬರದಂತೆ ತಡೆಗಟ್ಟಬಹುದು ಹಾಗೂ , ನಂತರ 6ವಾರ,6ತಿಂಗಳು, ಮತ್ತು 18ತಿಂಗಳವರಗೆ ಮಗುವಿನ ಅನುಸರಣೆ ಮಾಡಿ ಮಗುವಿಗೆ ಸೋಂಕು ಹರಡದಂತೆ ತಡೆಗಟ್ಟುವುದು, ಒಂದು ಪಕ್ಷ ಸೋಂಕಿತ ಮಗುವಾಗಿದ್ದಲ್ಲಿ ಆ ಮಗುವಿಗೆ ಶೀಘ್ರ ಚಿಕಿತ್ಸೆಗೆ ಒಳಪಡಿಸಲಾಗುವುದು
ಎಂದು ತಿಳಿಸಿದರು.
ಸೋಂಕಿತ ತಾಯಂದಿರಿಗೆ ತಮ್ಮ ಮಕ್ಕಳಿಗೆ HIV ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಮಾಹಿತಿ ಶಿಕ್ಷಣ ನೀಡಿದರು , ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ಸಂದರ್ಭದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಹರಿಶಿಣ, ಕುಂಕುಮ,ಹೂ,ಕುಪ್ಪಸ ಫಲತಾಂಬೂಲ, ನೀಡುವುದರೊಂದಿಗೆ ಸಾಂಕೇತಿಕವಾಗಿ ಸೀಮಂತ ಕಾರ್ಯಕ್ರಮ ಮಾಡಲಾಯಿತು.
ಈ ಹಿಂದೆ RCHO ಕಾರ್ಯಕ್ರಮದಡಿಯಲ್ಲಿ ಸೀಮಂತ ಮಾಡುವುದರ ಮೂಲಕ ಗರ್ಭಿಣಿಯರ ಆರೋಗ್ಯ ದಡಿಯಲ್ಲಿ ಹೆಚ್ಚಿನ ಆರೈಕೆ ಮಾಡಲಾಗುತ್ತಿತ್ತು, ಈಗಿನ ಕೋವಿಡ್ -19 ರಂತಹ pandamic ಪರಿ ಸ್ಥಿತಿಯಲ್ಲಿ ಪ್ರತಿ ಗರ್ಭಿಣಿ ಸ್ತ್ರೀಯು HIV /AIDS ಬಗ್ಗೆ ಮಾಹಿತಿ ಪಡೆದುಕೊಂಡು HIV ಮುಕ್ತ ಮಗುವಿನ ಜನನ ನೀಡಲು ಸಹಕಾರಿಯಾಗುವಂತೆ ಆರೋಗ್ಯ ಶಿಕ್ಷಣ ನೀಡಿದರು.
ಕಳೆದ ಏಳು ವರ್ಷಗಳಿಂದ ಎಚ್ಐವಿ ಸೋಂಕಿತ ಗರ್ಭಿಣಿ ಮಹಿಳೆಯಿಂದ ಹುಟ್ಟಿದ ಮಗುವಿಗೆ ಸೋಂಕು ಹರಡುವುದನ್ನು ತಡೆಗಟ್ಟುವ ಕಾರ್ಯಕ್ರಮದಡಿಯಲ್ಲಿ ಯಾವುದೇ ಮಗು ಸಹ ಸೋಂಕಿಗೆ ಒಳಗಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಎಂದು ಡಾ.C. O ಸುಧಾ DTO/DAPCO ಅಧಿಕಾರಿಗಳು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾಕ್ಟರ್ ಬಸವರಾಜ್, ನಿವಾಸಿ ವೈದ್ಯಾಧಿಕಾರಿ ಡಾ. ಆನಂದ್ ಪ್ರಕಾಶ್, ಎ.ಆರ್. ಟಿ. ವೈದ್ಯಾಧಿಕಾರಿ ಡಾ.ರೂಪಶ್ರೀ ಮತ್ತು ತಾಲೂಕು ಆರೋಗ್ಯಧಿಕಾರಿ ಡಾ.ಗಿರೀಶ್ ಹಾಗೂ ಎಲ್ಲಾ ಗರ್ಭಿಣಿ ಸ್ತ್ರೀಯರು, ICTC, PPTCT ಆಪ್ತ ಸಮಾಲೋಚಕರು, ಆಶಾ ಕಾರ್ಯಕರ್ತರು, ಜಿಲ್ಲಾ ಆಸ್ಪತ್ರೆ ಸಿಬ್ಬಂದಿಯವರು, ಅರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾರ್ಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಹಾಗೂ ಇತರರು ಹಾಜರಿದ್ದರು.