ಒಳ ಮೀಸಲಾತಿಗಾಗಿ ನಡೆಯುತ್ತಿರುವ ತಮಟೆ ಚಳುವಳಿಗೆ ಗುಬ್ಬಿಯಿಂದ ಬೈಕ್ ರ‍್ಯಾಲಿ
ವರದಿ ಮತ್ತು ಫೋಟೋ ಕೃಪೆ
ರಂಗಸ್ವಾಮಿ, ಗುಬ್ಬಿ
ಮೊ : 99019 53364
ಗುಬ್ಬಿ: ಇಂದು ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಶಿವಮೊಗ್ಗ ಅವರ ನೇತೃತ್ವದಲ್ಲಿ ರಾಜ್ಯದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ಬೃಹತ್ ತಮಟೆ ಚಳುವಳಿ ಹಮ್ಮಿಕೊಂಡಿದ್ದು ಈ ಒಂದು ಹೋರಾಟಕ್ಕೆ ತಾಲೂಕಿನಿಂದ ಬೈಕ್ ರ‍್ಯಾಲಿ ಮೂಲಕ ಭಾಗವಹಿಸುತಿದ್ದೇವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಮಾರಶೆಟ್ಟಿ ಹಳ್ಳಿ ಬಸವರಾಜು ತಿಳಿಸಿದರು.
ಮುಖಂಡ ಮಡೆನಹಳ್ಳಿ ದೊಡ್ಡಯ್ಯ ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತರ ಧ್ವನಿಯಾಗಿ ನಿಲ್ಲಬೇಕಿದೆ.ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ಧವಾದ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ರಾಜ್ಯ ಸರ್ಕಾರ ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಂಘಟನಾ ಸಂಚಾಲಕ ಜಿ ಅರಿವೇಸಂದ್ರ ಕೃಷ್ಣಪ್ಪ,ಆದಿ ಜಾಂಬವ ಯುವ ಬ್ರಿಗೇಡ್ ಶಿವರಾಜು,ಕುಂದು ಕೊರತೆ ವಿಭಾಗದ ಸಿ ಎಸ್ ಪುರ ಬೆಟ್ಟಸ್ವಾಮಿ, ತಾಲೂಕು ಉಸ್ತುವಾರಿ ನರೇಂದ್ರ ಕುಮಾರ್ ( ಕಪಾಲಿ ), ಕಾರ್ಮಿಕ ಒಕ್ಕೂಟದ ಸುರೇಶ್ ಕುಂದರನಹಳ್ಳಿ, ನಗರ ಸಂಚಾಲಕ ಕೃಷ್ಣಸ್ವಾಮಿ, ಆಂತರಿಕ ಶಿಸ್ತು ವಿಭಾಗದ ನಿಟ್ಟೂರ್ ಜಗದೀಶ್, ಹತಾವುಲ್ಲ ಆನಂದ ಮೂರ್ತಿ, ಮುಂತಾದವರಿದ್ದರು.