ತುಮಕೂರು ತಲುಪಿದ ಭಾರತ್ ಜೋಡೋ ಯಾತ್ರೆ : ಜೆಡಿಎಸ್ ನಾಯಕರು ಸಹ ಭಾಗಿ
ತುಮಕೂರು: ರಾಹುಲ ಗಾಂಧಿ ನೇತೃತ್ವದಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆ ಇದೀಗ ತುಮಕೂರು ಜಿಲ್ಲೆ ತಲುಪಿದೆ. ಇನ್ನು 6 ದಿನಗಳು ಐಕ್ಯತಾ ಯಾತ್ರೆ ತುಮಕೂರಿನಲ್ಲಿಯೇ ಸಾಗಲಿದೆ. ಆಗಸ್ಟ್ 10 ತನಕವೂ ಕಲ್ಪತರು ನಾಡು ತುಮಕೂರಿನಲ್ಲಿ ಯಾತ್ರೆ ಸಾಗಲಿದೆ. ಸ್ಥಳೀಯ ಶಾಸಕರು ರಾಹುಲ್ ಗಾಂಧಿಗೆ ಸಾಥ್ ನೀಡಿದ್ದಾರೆ.
ಈಗಾಗಲೇ ಬೆಳ್ಳೂರು ಟೌನ್ ನಿಂದ ಆರಂಭವಾದ ನಡಿಗೆ ತುರುವೆಕೆರೆ ತಾಲೂಕಿನ ಮಾಯಸಂದ್ರ ಪ್ರವೇಶ ಮಾಡಿ ಮುಂದಕ್ಕೆ ಸಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅನುಪಸ್ಥಿಯತಿಯಲ್ಲಿ ಯಾತ್ರೆಗೆ ಸ್ಥಳೀಯ ಶಾಸಕರು ಸಾಥ್ ನೀಡಿದ್ದಾರೆ. ಅಷ್ಟೆ ಅಲ್ಲದೆ ಜೆಡಿಎಸ್ ರೆಬೆಲ್ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಇಂದೇ ಕಾಂಗ್ರೆಸ್ ಕೂಡ ಸೇರ್ಪಡೆಯಾಗಿದ್ದಾರೆ.
ಇದರ ಜೊತೆಗೆ ಮಾಜಿ ಡಿಸಿಎಂ ಜಿ ಪರಮೇಶ್ವರ್, ಕೆ ಎನ್ ರಾಜಣ್ಣ ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ. ಕುಣಿಗಲ್, ಬೇಲೂರು, ಹೆಬ್ಬಾಳ, ಸರ್ವಜ್ಞನಗರ, ಸಕಲೇಶಪುರ, ಬಂಗಾರಪೇಟೆ, ಕುಂದಾಪುರ, ಉಡುಪಿ, ಕಾಪು, ಕಾರ್ಕಳ ಸೇರಿದಂತೆ ಒಟ್ಟು 12 ಕ್ಷೇತ್ರಗಳ ಕಾಂಗ್ರೆಸ್ ನಾಯಕರು ಇಂದಿನ ಪಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.