ತುಮಕೂರಿನಲ್ಲಿ ಮತ್ತೊಂದು ಅವಘಡ: ಹುಲಿಯೂರಮ್ಮ ಜಾತ್ರೆಯಲ್ಲಿ ಕೆಂಡ ಹಾಯುವಾಗ ಬಿದ್ದ ಅರ್ಚಕ..!
ತುಮಕೂರು: ದೇವರನ್ನು ಹೊತ್ತುಕೊಂಡು ಕೆಂಡ ಹಾಯುವಾಗ ಅರ್ಚಕರು ಬಿದ್ದಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದಲ್ಲಿ ನಡೆದಿದೆ. ದೇವರನ್ನು ಮಧು ಎಂಬ ಅರ್ಚಕರು ಹೊತ್ತುಕಿಂಡು ಕೆಂಡ ಹಾಯುವುದಕ್ಕೆ ಹೊರಟಿದ್ದರು. ಆದರೆ ಕಾಲು ಜಾರಿ ಕೊಂಡಕ್ಕೆ ಬಿದ್ದಿದ್ದಾರೆ. ಅರ್ಚಕ ಮಧುನನ್ನು ಸದ್ಯ ಕುಣಿಗಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದಲ್ಲಿ ಹುಲಿಯೂರಮ್ಮದೇವು ಜಾತ್ರಾ ಮಹೋತ್ಸವ ಸಾಗಿದೆ. ಜಾತ್ರೆಯಲ್ಲಿ ಬೆಂಕಿ ಕೆಂಡ ಹಾಯುವ ಸಂಒ್ರದಾಯವಿದೆ. ಕೆಂಡ ಹಾಕಿದಾಗ ಮೊದಲು ಅರ್ಚಕರು ಹಾದು ಹೋಗುತ್ತಾರೆ. ಬಳಿಕ ಭಕ್ತಾಧಿಗಳು ಕೊಂಡ ಹಾಯುವ ಸಂಪ್ರದಾಯ ಜಾತ್ರಗಳಲ್ಲಿ ಇದೆ. ಅದರಂತೆ ಹುಲಿಯೂರಮ್ಮ ಜಾತ್ರೆಯಲ್ಲಿ ಅರ್ಚಕ ಮಧು ದೇವರನ್ನು ಹೊತ್ತು ಕೆಂಡ ಹಾಯುವುದಕ್ಕೆ ಹೋದಾಗ ಕಾಲು ಜಾರಿ ಬಿದ್ದಿದ್ದಾರೆ.
ಕೆಂಡ ಹಾಯುವಾಗಲೇ ದೇವರ ಮೂರ್ತಿಯನ್ನು ಕೆಳಗೆ ಬೀಳಿಸಲಾಗಿದೆ. ಮಧುಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಕೆಂಡದಿಂದ ಮೇಲಕ್ಕೆ ಎತ್ತಿ, ಆಸ್ಪತ್ರೆಗೆ ಸೇರಿಸಲಾಗಿದೆ. ಇದೆ ವೇಳೆ ದೇವರ ಮೂರ್ತಿಯನ್ನು ಕೆಂಡದಿಂದ ಮೇಲಕ್ಕೆ ಎತ್ತಿದ್ದಾರೆ. ನಿನ್ನೆಯಷ್ಟೇ ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದಲ್ಲಿ ಇಂಥದ್ದೇ ಘಟನೆ ನಡೆದಿತ್ತು.
ಗ್ರಾಮದಲ್ಲಿ ದಂಡಿನಮಾರಮ್ಮ ಜಾತ್ರಾ ಮಹೋತ್ಸವ ನೆರವೇರಿತ್ತು. ಈ ಜಾತ್ರೆಯಲ್ಲಿ ಬೆಂಕಿಕೊಂಡ ಹಾಯುವಾಗ ಅರ್ಚಕ ವೆಂಕಟಪ್ಪ ಅವರು ಕೆಂಡದ ಮೇಲೆ ಓಡುತ್ತಿದ್ದಂತೆಯೇ ಮುಗ್ಗರಿಸಿ ಬಿದ್ದಿದ್ದರು. ಬಳಿಕ ಅವರ ಮಗ ಕೃಷ್ಟಮೂರ್ತಿ ಕೂಡ ಬೆಂಕಿಯ ಮೇಲೆ ಬಿದ್ದರು. ಸ್ಥಳೀಯರು ಅವರನ್ನು ರಕ್ಷಿಸಿದ್ದರು. ತೀವ್ರ ಸುಟ್ಟ ಗಾಯಗಳಾದ ಅರ್ಚಕರನ್ನು ಬಿಜಿಎಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಬೆನ್ನಲ್ಲೇ ಕುಣಿಗಲ್ ತಾಲೂಕಿನಲ್ಲಿಯೇ ಮತ್ತೊಂದು ಘಟನೆ ನಡೆದಿದೆ.