ಗೌರಿಶಂಕರ್ ಅನರ್ಹತೆಯ ಭೀತಿಗೆ ಕೊಂಚ ರಿಲೀಫ್ : ಸುಪ್ರೀಂ ಕೋರ್ಟ್ ಗೆ ಹೋಗದೆ ಇದ್ದರೆ ಏನಾಗುತ್ತೆ..?
ತುಮಕೂರು: 2018ರ ಚುನಾವಣೆಯಲ್ಲಿ ನಕಲಿ ಬಾಂಡ್ ಹಂಚಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್, ಶಾಸಕರನ್ನು ಅನರ್ಹಗೊಳಿಸಿದ್ದರು. ಇದೀಗ ಮತ್ತೆ ಒಂದು ತಿಂಗಳುಗಳ ಕಾಲಾವಕಾಶ ನೀಡಿದೆ.
ಶಾಸಕ ಗೌರಿಶಂಕರ್ ಪರ ಅವರ ವಕೀಲರು ವಾದ ಮಂಡನೆ ಮಾಡಿದ್ದರು. ಒಂದು ತಿಂಗಳುಗಳ ಕಾಲ ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ಹೈಕೋರ್ಟ್ ವಕೀಲರ ಮನವಿಗೆ ಅಸ್ತು ಎಂದಿದೆ. ಒಂದು ತಿಂಗಳುಗಳ ಅವಕಾಶ ನೀಡಿದೆ. ಸದ್ಯಕ್ಕೆ ಶಾಸಕ ಗೌರಿಶಂಕರ್ ಅವರಿಗೆ ರಿಲೀಫ್ ಸಿಕ್ಕಿದೆ.
ಗೌರಿಶಂಕರ್ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ, ಹೈಕೋರ್ಟ್ ನೀಡಿರುವ ತೀರ್ಪಿಗೆ ತಡೆ ತರಬೇಕಾಗುತ್ತದೆ. ತಡೆ ತಂದರೆ ಮಾತ್ರ ಹಾಲಿ ಶಾಸಕರು ಸೇಫ್. ಇಲ್ಲವಾದಲ್ಲಿ ಮತ್ತೆ ಅನರ್ಹ ಭೀತಿ ಎದುರಿಸುತ್ತಾರೆ. ಬಿಜೆಪಿಯ ಅಭ್ಯರ್ಥಿ ಸುರೇಶ್ ಗೌಡ, ಗೌರಿ ಶಂಕರ್ ವಿರುದ್ಧ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಆದೇಶ ಹೊರಡಿಸಿದ್ದರು.