ಬಂದ ಆಫರ್ ಒಪ್ಪಿಕೊಂಡು ಬಿಜೆಪಿ ಸೇರುತ್ತಾರಾ ಸೌರವ್ ಗಂಗೂಲಿ..?
ಈ ತಿಂಗಳ ಅಂತ್ಯದಲ್ಲಿ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನದ ಅವಧಿ ಮುಕ್ತಾಯವಾಗಲಿದೆ. ಅವರ ಸ್ಥಾನಕ್ಕೆ ರೋಜರ್ ಬಿನ್ನಿ ಆಯ್ಕೆಯಾಗುವ ಸಾಧ್ಯತೆ ಇದೆ. ಆದರೆ ಈ ಮಧ್ಯೆ ಸೌರವ್ ಗಂಗೂಲಿ ಬಿಜೆಪಿ ಆಫರ್ ತಿರಸ್ಕರಿಸಿದ್ದಕ್ಕೆ ಇವತ್ತು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಕಾರಣವಾಯ್ತು ಎಂಬ ಆರೋಪ ಕೇಳಿ ಬರುತ್ತಿದೆ.
2019ರಲ್ಲಿ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರಿದ್ದರು. ಇದೀಗ ಅಧಿಕಾರಾವಧಿ ಮುಕ್ತಾಯವಾಗುತ್ತಿದೆ. ಅದರೆ ಎರಡನೇ ಅವಧಿಗೂ ಮತ್ತೆ ಅಧ್ಯಕ್ಷರಾಗುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಸಮಿತಿಯ ಪ್ರಕಾರ ಅದು ಸಾಧ್ಯವಿಲ್ಲದ ಕಾರಣ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ನಲ್ಲಿ ಬಿಸಿಸಿಐ ನಿಯಮವನ್ನು ಕೊಂಚ ಸಡಿಲಿಕೆ ತರಲಾಗಿತ್ತು. ಅದರಂತೆ ಕಾರ್ಯದರ್ಶಿಯಾಗಿ ಜೈಶಾ ಉಳಿದುಕೊಂಡರು, ದಾದಾಗೆ ಅವಕಾಶ ಮಿಸ್ ಆಯಿತು.
ಈ ಸಂಬಂಧ ಆರೋಪ ಮಾಡಿರುವ ತೃಣಮೂಲ ಕಾಂಗ್ರೆಸ್ ಅಮಿತ್ ಶಾ ಗಂಗೂಲಿ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ ಎಂದಿದೆ. ಅಮಿತ್ ಶಾ ಈ ಹಿಂದೆ ಗಂಗೂಲಿ ಅವರಿಗೆ ಬಿಜೆಪಿ ಸೇರಲು ಅವಕಾಶ ನೀಡಿದ್ದರಂತೆ. ಆಗ ಅದನ್ನು ಗಂಗೂಲಿ ಅವರು ನಯವಾಗಿಯೇ ತಿರಸ್ಕರಿಸಿದ್ದರಂತೆ ಇದೆ ಕಾರಣವಾಯ್ತು ಎನ್ನಲಾಗುತ್ತಿದೆ.
ಇನ್ನು ಸೌರವ್ ಗಂಗೂಲಿ ತಮ್ಮ ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಿದ್ದು, ಜೀವನ ಪರ್ಯಂತ ಆಟಗಾರರಾಗಲೂ ಅಥವಾ ಅಧ್ಯಕ್ಷರಾಗಲೂ ಯಾರಿಂದಲೂ ಸಾಧ್ಯವಿಲ್ಲ. ನನ್ನ ಅವಧಿಯಲ್ಲಿ ಕೆಲವೊಂದು ಕಠಿಣವಾದಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯ್ತು. ನನಗೆ ತೃಪ್ತಿ ಇದೆ ಎಂದಿದ್ದಾರೆ.