CSK ತಂಡದ ನಾಯಕತ್ವ ಬದಲಾಗಿದ್ದೇಕೆ..? ಧೋನಿ,ಗಾಯಕ್ವಾಡ್ ಗೆ ಬಿಟ್ಟು ಕೊಟ್ಟಿದ್ದೇಕೆ..?
ಇಂದು ಎಲ್ಲರು ಕಾತುರದಿಂದ ಕಾಯುತ್ತಿರುವ ಐಪಿಎಲ್ ಆರಂಭವಾಗಲಿದೆ. ಆರಂಭದ ಪಂದ್ಯದಲ್ಲೇ ಸಿಎಸ್ಕೆ ವರ್ಸಸ್ ಆರ್ಸಿಬಿ ಪಂದ್ಯ ನಡೆಯಲಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ನಾಯಕತ್ವದ ಬದಲಾವಣೆಯಾಗಿದ್ದು, ಅಭಿಮಾನಿಗಳಿಗೆ ಶಾಕ್ ಆಗಿದೆ. ಆದರೆ ಋತುರಾಜ್ ಅವರನ್ನು ನಾಯಕತ್ವಕ್ಕೆ ನೇಮಿಸಿ, ತಾನೂ ಹಿಂದೆ ಸರಿದಿದ್ದರ ಹಿಂದೆ ಒಂದು ಕಾರಣವಿದೆ.
ಋತುರಾಜ್ ಗಾಯಕ್ವಾಡ್ ಅವರಿಗೆ 27 ವರ್ಷ. 2019ರಿಂದಾನೂ ಚೆನ್ನೈ ಪ್ರಾಂಚೈಸಿಯ ಭಾಗವಾಗಿದ್ದಾರೆ. ಕಳೆದ ವರ್ಷ ಐಪಿಎಲ್ ಅಂತ್ಯವಾದ ಬೆನ್ನಲ್ಲೇ ಧೋನಿ, knee ಸರ್ಜರಿಗೆ ಒಳಗಾಗಿದ್ದಾರೆ. ಇಂಜುರಿಯಿಂದ ಧೋನಿ ಇನ್ನು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ತಂಡದ ಮೇಲೆ ಸಂಪೂರ್ಣವಾಗಿ ಫೋಕಸ್ ಮಾಡುವುದಕ್ಕೆ ಆಗುವುದಿಲ್ಲ. ಹೀಗಾಗಿ ಋತುರಾಜ್ ಅವರಿಗೆ ವಹಿಸಲಾಗಿದೆ. ಧೋನಿ ಸುಮ್ಮನೆ ನೀಡಿದ್ದಲ್ಲ ಅಳೆದು ತೂಗಿಯೇ ನಾಯಕತ್ವವನ್ನು ನೀಡಿದ್ದಾರೆ. ಕಳೆದ ಐದು ಸೀಸನ್ ನಿಂದ ಚೆನ್ನೈ ಸೂಪರ್ ಕಿಂಗ್ಸ್ ಪ್ರಾಂಚೈಸಿಯಲ್ಲಿರುವ ಋತುರಾಜ್, ಸಿ ಎಸ್ ಕೆ ಕಲ್ಚರ್ ಗೆ ಅಡ್ಜೆಸ್ಟ್ ಆಗಿದ್ದಾರೆ. ನಾಯಕನಿಗೆ ಇರಬೇಕಾದ ಎಲ್ಲಾ ಕ್ವಾಲಿಟಿಗಳು ಋತುರಾಜ್ ಅವರಿಗೆ ಇದೆ. ಕೂಲ್ ಅಂಡ್ ಕಾಮ್ ವ್ಯಕ್ತಿತ್ವದ ಋತುರಾಜ್, ಒಳ್ಳೆ ಬ್ಯಾಟ್ಸ್ ಮನ್ ಎಂಬುದರ ಜೊತೆಗೆ ಗೇಮ್ ರೀಡರ್ ಕೂಡ. ಹೀಗಾಗಿಯೇ ಋತುರಾಜ್ ಗೆ ಕ್ಯಾಪ್ಟೆನ್ಸಿ ನೀಡಿದ್ದಾರೆ.
ಇನ್ನು ನಾಯಕತ್ವ ತೆಗೆದುಕೊಂಡ ಋತುರಾಜ್ ಗಾಯಕ್ವಾಡ್ ಅವರು ಮಾತನಾಡಿ, ಖುಷಿ ಆಗುತ್ತಿದೆ. ನಿಸ್ಸಂಶಯವಾಗಿ ಇದೊಂದು ದೊಡ್ಡ ಜವಬ್ದಾರಿ. ನಾನು ಈ ತಂಡವನ್ನು ಮುನ್ನಡೆಸಲು ಉತ್ಸುಕನಾಗಿದ್ದೇನೆ. ಪ್ರತಿಯೊಬ್ಬರು ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಆದ್ದರಿಂದ ನನಗೆ ಮಾಡಲು ಹೆಚ್ಚು ಕೆಲಸ ಇರುವುದಿಲ್ಲ ಎಂದಿದ್ದಾರೆ.