For the best experience, open
https://m.suddione.com
on your mobile browser.
Advertisement

ಮೊದಲ ಪಂದ್ಯದಲ್ಲೇ RCB ಸೋತಿದ್ದೇಕೆ : ನಾಯಕ ಹೇಳಿದ್ದೇನು..?

05:56 PM Mar 24, 2024 IST | suddionenews
ಮೊದಲ ಪಂದ್ಯದಲ್ಲೇ rcb ಸೋತಿದ್ದೇಕೆ   ನಾಯಕ ಹೇಳಿದ್ದೇನು
Advertisement

ಐಪಿಎಲ್ ಮ್ಯಾಚ್ ಗಳು ಈಗಾಗಲೇ ಶುರುವಾಗಿವೆ. ಅದರಲ್ಲೂ ಮೊದಲ ಮ್ಯಾಚ್ ಸಿ ಎಸ್ ಕೆ ಎದುರು ಆರ್ಸಿಬಿ ಅಬ್ಬರಿಸಿತ್ತು. ಆದರೆ ಮೊದಲ ಪಂದ್ಯವನ್ನು ಸಂಪ್ರದಾಯದಂತೆ ದೇವರಿಗೆ ಅರ್ಪಿಸಿದ್ದರು. ಮಹಿಳೆಯರು ಮ್ಯಾಚ್ ಗೆದ್ದು ಕಪ್ ತಮ್ಮದಾಗಿಸಿಕೊಂಡಿದ್ದರು. ಹೀಗಾಗಿ ಆರ್ಸಿಬಿ ಮ್ಯಾಚ್ ಸೋತಿದ್ದಕ್ಕೆ ಕನ್ನಡಿಗರು ಬೇಸರ ಮಾಡಿಕೊಂಡಿದ್ದರು. ಇದೀಗ ಆರ್ಸಿಬಿ ಮ್ಯಾಚ್ ಸೋತಿದ್ದಕ್ಕೆ ಕಾರಣವನ್ನು ನಾಯಕ ಫಾಫ್ ತಿಳಿಸಿದ್ದಾರೆ.

Advertisement
Advertisement

Advertisement

ನೀವು ಯಾವಾಗ ಚೆನ್ನೈ ಸ್ಟೇಡಿಯಮ್​ನಲ್ಲಿ ಕ್ರಿಕೆಟ್​ ಆಡಿದ್ರೂ 6 ಓವರ್​ಗಳ ಬಳಿಕ ಬ್ಯಾಟಿಂಗ್​ ಮಾಡುವುದು ಕಷ್ಟ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರ ಒಳ್ಳೆಯ ಬೌಲರ್ಸ್​ ಇದ್ದಾರೆ. ಅವರು ಮಿಡಲ್​ ಆರ್ಡರ್​​ನಲ್ಲಿ ಚೆನ್ನಾಗಿ ಕಂಟ್ರೋಲ್​ ಮಾಡುತ್ತಾರೆ. ಮೊದಲು 10 ಓವರ್​ಗಳಲ್ಲಿ ಮಿಚ್​​ ಸರಿಯಾಗಿ ಇರಲಿಲ್ಲ. ಅವರು ಪ್ಲಾನ್​ ಮಾಡಿ ಚೇಸ್​ ಮಾಡಿದ್ರು. ನಾವು ಇನ್ನೊಂದಷ್ಟು ರನ್​ ಗಳಿಸಬೇಕಿತ್ತು. ಎರಡು ವಿಕೆಟ್​ ತೆಗೆದಿದ್ರೂ ನಾವು ಗೆಲ್ಲುತ್ತಿದ್ದೆವು. ದಿನೇಶ್​ ಕಾರ್ತಿಕ್​​, ಅನೂಜ್​ ರಾವತ್​​ ಅತ್ಯುತ್ತಮ ಬ್ಯಾಟಿಂಗ್​ ಮಾಡಿದ್ರು ಅನ್ನೋದು ಖುಷಿ ವಿಚಾರ. ನಮ್ಮ ಬ್ಯಾಟರ್​ಗಳು ರನ್​ ಗಳಿಸದೇ ಇದ್ದಿದ್ದೇ ಸೋಲಿಗೆ ಕಾರಣ ಎಂದರು ಫಾಫ್​​.

Advertisement
Advertisement

ಆರ್ಸಿಬಿ ಕ್ರೇಜ್ ಯಾವತ್ತಿಗೂ ಕಡಿಮೆಯಾಗಿಲ್ಲ. ಕಡಿಮೆ ಆಗುವುದು ಇಲ್ಲ. ಎಷ್ಟೇ ಮ್ಯಾಚ್ ಸೋತರು ನಮ್ಮ ಆರ್ಸಿಬಿ ಅಂತಾನೇ ಹೊತ್ತು ಮೆರೆಸುತ್ತಾರೆ. ಪ್ರತಿ ಸಲ ಮ್ಯಾಚ್ ಬಂದರೂ ಈ ಸಲ ಕಪ್ ನಮ್ದೆ ಅನ್ನೋ ಸ್ಲೋಗನ್ ಕ್ರೋಸ್ ಕ್ರಿಯೇಟ್ ಮಾಡುತ್ತಾರೆ. ಕಪ್ ತಂದೇ ತರುತ್ತಾರೆ ಎಂಬ ನಂಬಿಕೆ ಇಡುತ್ತಾರೆ. ಅದೇ ಕ್ರೇಜ್ ಈಗಲೂ ಶುರುವಾಗಿದೆ.

Advertisement
Tags :
Advertisement