For the best experience, open
https://m.suddione.com
on your mobile browser.
Advertisement

ಭಾರತ ತಂಡದ ಸೋಲಿಗೆ ಕಾರಣವೇನು ? ನಾಯಕ ರೋಹಿತ್ ಶರ್ಮಾ ಹೇಳಿದ್ದೇನು ?

08:10 PM Mar 19, 2023 IST | suddionenews
ಭಾರತ ತಂಡದ ಸೋಲಿಗೆ ಕಾರಣವೇನು   ನಾಯಕ ರೋಹಿತ್ ಶರ್ಮಾ ಹೇಳಿದ್ದೇನು
Advertisement

Advertisement
Advertisement

ವಿಶಾಖಪಟ್ಟಣಂ : ಇಂದು (ಭಾನುವಾರ) ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಸೋಲಿನ ಹಿಂದಿನ ಕಾರಣವನ್ನು ನಾಯಕ ರೋಹಿತ್  ಶರ್ಮಾ ಬಹಿರಂಗಪಡಿಸಿದ್ದಾರೆ .

Advertisement

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 26 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟಾಯಿತು. ಬಳಿಕ ಆಸ್ಟ್ರೇಲಿಯ 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ಇದರೊಂದಿಗೆ ಮೂರು ಏಕದಿನ ಸರಣಿ 1-1ರಲ್ಲಿ ಸಮಬಲವಾಯಿತು. ಕೊನೆಯ ಏಕದಿನ ಪಂದ್ಯ ಬುಧವಾರ ಚೆಪಾಕ್‌ನಲ್ಲಿ ನಡೆಯಲಿದೆ.

Advertisement
Advertisement

ಏಕದಿನ ಪಂದ್ಯದಲ್ಲಿ ಭಾರತದ ಸೋಲಿನ ಬಗ್ಗೆ ನಾಯಕ ರೋಹಿತ್ ಶರ್ಮಾ ಮಾತನಾಡಿ, ಪಂದ್ಯದಲ್ಲಿ ನಮಗೆ ಸಾಕಷ್ಟು ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕೆ ಸತತವಾಗಿ ನಾವು ವಿಕೆಟ್‌ಗಳನ್ನು ಕಳೆದುಕೊಂಡೆವು.

ಮೊದಲ ಓವರ್‌ನಲ್ಲಿ ಸುಭಮನ್ ಗಿಲ್ ವಿಕೆಟ್ ಪಡೆದ ನಂತರ, ಕೊಹ್ಲಿ ಮತ್ತು ನಾನು ಸೇರಿ 30-35 ರನ್ ಗಳಿಸಿದೆವು.ಆ ನಂತರ ನಾನು ಔಟಾದೆ. ಹೀಗೆ ನಮ್ಮ ತಂಡದ ಆಟಗಾರರು ಒಬ್ಬರ ನಂತರ ಒಬ್ಬರು ಔಟಾದೆವು. ಎಷ್ಟು ಪ್ರಯತ್ನಿಸಿದರೂ ರನ್ ಗಳಿಕೆಯಲ್ಲಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. "ಇದು ಕೇವಲ 117 ರನ್ ಗಳಿಸುವ ಪಿಚ್ ಅಲ್ಲ. ಆದರೆ ನಮಗೆ ಸಾಕಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು.

ಪಿಚ್ ಬ್ಯಾಟಿಂಗ್ ಗೆ ಹೊಂದಿಕೊಳ್ಳುವಂತಿತ್ತು.  ಆದರೆ ಹೆಚ್ಚುವರಿ ಬೌನ್ಸ್ ಟೀಂ ಇಂಡಿಯಾಗೆ ಆಘಾತ ನೀಡಿತು. ಆಸೀಸ್‌ನ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಚೆಂಡನ್ನು ಸ್ವಿಂಗ್ ಮಾಡುತ್ತಾ ಪಂದ್ಯದಲ್ಲಿ 5 ವಿಕೆಟ್ ಪಡೆದರು. ಈ ಮೂಲಕ ಭಾರತದ ಬ್ಯಾಟ್ಸ್‌ಮನ್‌ಗಳು ಸಂಕಷ್ಟಕ್ಕೆ ಸಿಲುಕಿದರು.

ನಂತರ ಅದೇ ಪಿಚ್‌ನಲ್ಲಿ ಆಸ್ಟ್ರೇಲಿಯಾದ ಆರಂಭಿಕರಾದ ಮಿಚೆಲ್ ಮಾರ್ಷ್ (ಔಟಾಗದೆ 66: 36 ಎಸೆತ 6x4, 6x6) ಮತ್ತು ಟ್ರಾವಿಸ್ ಹೆಡ್ (ಔಟಾಗದೇ 51: 30 ಎಸೆತ 10x4) ಉತ್ತಮ ಪ್ರದರ್ಶನ ನೀಡಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.

Advertisement
Tags :
Advertisement