For the best experience, open
https://m.suddione.com
on your mobile browser.
Advertisement

ಕೊಹ್ಲಿ ಹಾಕಿಸಿಕೊಂಡ ಹೊಸ ಟ್ಯಾಟೂ ಶೋಕಿಗಲ್ಲ.. ಟ್ಯಾಟೂ ಆರ್ಟಿಸ್ಟ್ ಹೇಳಿದ್ದೇನು..?

02:40 PM Apr 04, 2023 IST | suddionenews
ಕೊಹ್ಲಿ ಹಾಕಿಸಿಕೊಂಡ ಹೊಸ ಟ್ಯಾಟೂ ಶೋಕಿಗಲ್ಲ   ಟ್ಯಾಟೂ ಆರ್ಟಿಸ್ಟ್ ಹೇಳಿದ್ದೇನು
Advertisement

Advertisement
Advertisement

ಕಿಂಗ್ ಕೊಹ್ಲಿ ಅಂದ್ರೆ ಕ್ರೇಜ್.. ಕ್ರೇಜ್ ಅಂದ್ರೆ ಕಿಂಗ್ ಕೊಹ್ಲಿ ಅಂತ ಎಲ್ಲರಿಗೂ ಗೊತ್ತಲ್ವಾ. ಈಗ ಸಾಕಷ್ಟು ಸುದ್ದಿಯಾಗುತ್ತಾ ಇರೋದು ವಿರಾಟ್ ಕೊಹ್ಲಿ ಟ್ಯಾಟೂ ವಿಚಾರ. ಹೊಸ ಟ್ಯಾಟೂ ಹಾಕಿಸಿಕೊಂಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ಆ ಟ್ಯಾಟೂ ಅಷ್ಟು ಸುಲಭಕ್ಕೆ ಪ್ರದರ್ಶನವಾಗಿರಲಿಲ್ಲ. ಆದರೆ ಮೊದಲ ಮ್ಯಾಚ್ ನಲ್ಲಿಯೇ ಹೈಲೇಟ್ ಆಗಿತ್ತು.

Advertisement

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಲ್ಲರ ಕಣ್ಣಿಗೂ ಬಿದ್ದಿದೆ. ಮುಂಬೈ ವಿರುದ್ಧ ಆರ್ಸಿಬಿ ಚಿಂದಿ ಉಡಾಯಿಸಿತ್ತು. ವಿರಾಟ್ ಕೊಹ್ಲಿ ಅಬ್ಬರಕ್ಕೆ ಶಿಳ್ಳೆ ಚಪ್ಪಾಳೆ ಕೇಳಿ ಬಂದಿತ್ತು. ಇದೇ ಮ್ಯಾಚ್ ಸಮಯದಲ್ಲಿಯೇ ಕೊಹ್ಲಿ ಅವರು ಹಾಕಿಕೊಂಡಿದ್ದ ಟ್ಯಾಟೂ ಕೂಡ ದರ್ಶನವಾಗಿತ್ತು. ಇದೀಗ ಆ ಟ್ಯಾಟೂ ಹಿಂದಿನ ಕಥೆ ಅನಾವರಣವಾಗಿದೆ.

Advertisement

ಅವರ ಟ್ಯಾಟೂ ಆರ್ಟಿಸ್ಟ್ ಸನ್ನಿ ಭಾನುಶಾಲಿ ಮಾತನಾಡಿದ್ದಾರೆ. ಕೊಹ್ಲಿ ಅವರು ಹಳೆ ಹಚ್ಚೆ ಬದಲು ಹೊಸ ಹಚ್ಚೆ ಹಾಕಿಸಿಕೊಳ್ಳಲು ಬಯಸಿದರು‌. ಆಧ್ಯಾತ್ಮಿಕತೆ ಪ್ರತಿಬಿಂಬಿಸುವ ಹೊಸ ಹೆಜ್ಜೆ. ಎಲ್ಲರ ಜೊತೆ ಪರಸ್ಪರ ಸಂಬಂಧ ಮತ್ತು ಸೃಷ್ಟಿಯ‌ ಮೂಲವನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.

Tags :
Advertisement