RCBಗೆ ಮತ್ತೆ ಕೊಹ್ಲಿಯೇ ನಾಯಕ : ಅಧಿಕೃತ ಘೋಷಣೆಯೊಂದೆ ಬಾಕಿ
ಆರ್ಸಿಬಿ ಕಪ್ ಗೆಲ್ಲದೇ ಹೋದಾಗಲೂ ಕೊಹ್ಲಿ ಮೇಲಿನ ಕ್ರೇಜ್ ಮಾತ್ರ ಕಡಿಮೆ ಆಗಿರಲಿಲ್ಲ. ಕೊಹ್ಲಿ ಫ್ಯಾನ್ಸ್ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದರು. ಆದರೆ ಕೊಹ್ಲಿಯನ್ನು ನಾಯಕತ್ವದಿಂದ ಇಳಿ ಫಾಫ್ ಡುಪ್ಲಿಸಿಸ್ ಅವರನ್ನು ನಾಯಕತ್ವ ಸ್ಥಾನಕ್ಕೆ ಕೂರಿಸಲಾಗಿತ್ತು. ಕಳೆದ ಬಾರಿಯೂ ಆರ್ಸಿಬಿ ಕಪ್ ತರುವಲ್ಲಿ ವಿಫಲವಾಯಿತು. ಈ ಬಾರಿಯೂ ಈಗಾಗಲೇ ಸಾಕಷ್ಟು ಮ್ಯಾಚ್ ಗಳಲ್ಲಿ ಸೋಲುಂಡಿದೆ. ಹೀಗಾಗಿ ನಾಯಕತ್ವ ಬದಲಾವಣೆಯ ಗಾಳಿ ಬೀಸುತ್ತಿದೆ. ಮತ್ತೆ ವಿರಾಟ್ ಕೊಹ್ಲಿಯೇ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಐದು ಪಂದ್ಯಗಳನ್ನು ಆಡಿದೆ. ಆದರೆ ಅದರಲ್ಲಿ ಒಂದೇ ಒಂದು ಮ್ಯಾಚನ್ನಷ್ಟೇ ಗೆದ್ದಿದೆ. ನಾಲ್ಕು ಮ್ಯಾಚ್ ಗಳನ್ನು ಸೋತು ಕನ್ನಡಿಗರ ಕನಸಿಗೆ ನೀರು ಎರಚಿದೆ. ಹೀಗಾಗಿ ನಾಯಕತ್ವ ಬದಲಾವಣೆಯ ಚರ್ಚೆಯಾಗಿದೆ.
ಸೋಲಿಗೆ ಕಾರಣ ಆರ್ಸಿಬಿ ಬ್ಯಾಟಿಂಗ್ ಹಾಗೂ ಬೌಲಿಂಗ್. ಅದರಲ್ಲೂ ಕ್ಯಾಪ್ಟನ್ ಫಾಫ್ ಐದು ಪಂದ್ಯದಲ್ಲೂ ಹೇಳಿಕೊಳ್ಳುವ ಪ್ರದರ್ಶನವನ್ನೇನು ನೀಡಿಲ್ಲ. ಇದರ ಜೊತೆಗೆ ಕ್ಯಾಪ್ಟನ್ ಫಾಫ್ ಈಗಾಗಲೆ ನಾಯಕತ್ವದ ಒತ್ತಡದ ಬಗ್ಗೆ ಸಾಕಷ್ಟು ಸಲ ಮಾತನಾಡಿದ್ದಾರೆ. ಹೀಗಾಗಿ ಮತ್ತೆ ನಾಯಕತ್ವವನ್ನು ಕೊಹ್ಲಿ ಹೆಗಲಿಗೆ ಏರಿಸಲಿದ್ದಾರೆ ಎನ್ನಲಾಗಿದೆ.
ನಾಳೆ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ಸೆಣೆಸಾಡಲಿದೆ. ಹೀಗಾಗಿ ನಾಳೆಯ ಪಂದ್ಯಕ್ಕೇನೆ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸುತ್ತಿವೆ. ಕೊಹ್ಲಿ ನಾಯಕತ್ವದಿಂದಾದ್ರು ಆರ್ಸಿಬಿ ಪಂದ್ಯಗಳನ್ನು ಗೆದ್ದು, ಕಪ್ ಎತ್ತಿಕೊಂಡು ಬರಲಿ ಎಂದು ಅಭಿಮಾನಿಗಳು ಹಾರೈಸಿತ್ತಿದ್ದಾರೆ.