ಕೊಹ್ಲಿ ಇನ್ಸ್ಟಾಗ್ರಾಮ್ ನಿಂದ ದುಡಿಯುವುದು 300 ಕೋಟಿ
05:12 PM Oct 16, 2022 IST | suddionenews
Advertisement
Advertisement
ಟಿಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಕಿಂಗ್ ಇದ್ದಂತೆ. ಆದರೆ ಇದೀಗ ಕಿಂಗ್ ಕೊಹ್ಲಿ ಸೋಷಿಯಲ್ ಮೀಡಿಯಾ ಜಗತ್ತಿನ ಕಿಂಗ್ ಎಂಬುದು ಸಾಬೀತಾಗಿದೆ. ವಿರಾಟ್ ಕೊಹ್ಲಿ ಬರೀ ಸೋಷಿಯಲ್‌ಮೀಡಿಯಾ ಮೂಲಕವೇ 300 ಕೋಟಿ ಸಂಪಾದಿಸಿದ್ದಾರೆ.
ಕ್ರಿಕೆಟ್ ಜಗತ್ತಿನ ಶ್ರೀಮಂತ ಆಟಗಾರ ಕಿಂಗ್ ಕೊಹ್ಲಿಗೆ ಸೋಷಿಯಲ್‌ಮೀಡಿಯಾದಲ್ಲಿ ಅಷ್ಟೇ ಫಾಲೋವರ್ಸ್ ಇದ್ದಾರೆ. ಹೀಗಾಗಿ ಕೇವಲ ಇನ್ಸ್ಟಾಗ್ರಾಮ್ ಒಂದರಲ್ಲಿಯೇ ಕಳೆದ ವರ್ಷ 300 ಕೋಟಿ ಹಣ ಸಂಪಾದಿಸಿದ್ದಾರೆ. ಇನ್ಸ್ಟಾದಲ್ಲಿ ಕೋಟಿ ಕೋಟಿ ಹಣ ಸಂಪಾದಿಸುವ ಜಗತ್ತಿನ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ಕೊಹ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
Advertisement
ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಹಾಕುವ ಒಂದು ಕಮರ್ಷಿಯಲ್ ಪೋಸ್ಟಿನ ಬೆಲೆ 8.69 ಕೋಟಿಯಾಗಿದೆ. ಪ್ರತಿ ತಿಂಗಳು ಕೂಡ ಈ ಸ್ಪಾನ್ಸರ್ ಪೋಸ್ಟ್ ನಿಂದಾಗಿ ಕೊಹ್ಲಿ 25-30 ಕೋಟಿ ಹಣ ಗಳಿಸುತ್ತಾರೆ. ಬರೀ ಇನ್ಸ್ಟಾಗ್ರಾಮ್ ನಲ್ಲಿ ಮಾತ್ರ ಅಲ್ಲ ಟ್ವಿಟ್ಟರ್, ಫೇಸ್ ಬುಕ್ ನಲ್ಲೂ ಕೊಹ್ಲಿ ಕೋಟಿ ಕೋಟಿ ಹಣ ಗಳಿಸುತ್ತಾರೆ.