100 ಗ್ರಾಂ ಹೆಚ್ಚಾಗಿದ್ದಕ್ಕೆ ಒಲಂಪಿಕ್ಸ್ ನಿಂದ ಅನರ್ಹಗೊಂಡ ವಿನೇಶ್ ಪೋಗಾಟ್..!
ಇಲ್ಲಿಯವರೆಗೂ ಸೋಲನ್ನೇ ಕಾಣದ ಕುಸ್ತಿಪಟು ಯೂಯ್ ಸುಸಾಕಿ ಅವರನ್ನು ಸೋಲಿಸಿ, ಫೈನಲ್ ಪ್ತವೇಶ ಮಾಡಿದ್ದ ವೀನೇಶ್ ಪೋಗಾಟ್ ಗೆ ಶಾಕ್ ಆಗಿದೆ. ವೀನೇಶ್ ಪೋಗಾಟ್ ಒಲಂಪಿಕ್ಸ್ ನಿಂದಾನೇ ಅನರ್ಹರಾಗಿದ್ದಾರೆ. ಇದು ಭಾರತಕ್ಕೆ ಆಘಾತ ಉಂಟು ಮಾಡಿದೆ. ಕುಸ್ತಿ ಪಂದ್ಯದಲ್ಲಿ ಚಿನ್ನ ಗೆಲ್ಲುವ ಕನಸಿಗೆ ತಣ್ಣೀರು ಎರಚಿದಂತೆ ಆಗಿದೆ. ಪದಕ ಗೆದ್ದೇ ಗೆಲ್ಲುತ್ತಾರೆ ಎಂದುಕೊಂಡಿದ್ದ ಕನಸು ನುಚ್ಚು ನೂರಾಗಿದೆ.
ಪ್ರೀಸ್ಟೈಲ್ ಫೈನಲ್ ನಲ್ಲಿ ಅಮೆರಿಕಾದ ಸಾರಾ ಹಿಲ್ಡೆಬ್ರಾಂಡ್ ರನ್ನು ಎದುರಿಸಬೇಕಿತ್ತು. ಆದರೆ ಅದಕ್ಕೂ ಮುನ್ನ ವಿನೇಶ್ ಪೋಗಾಟ್ ರನ್ನು ಪ್ಯಾರೀಸ್ ಒಲಂಪಿಕ್ಸ್ ನಿಂದ ಅನರ್ಹಗೊಳಿಸಲಾಗಿದೆ. ಅತಿಯಾದ ತೂಕದ ಕಾರಣದಿಂದ ಅನರ್ಹಗೊಳಿಸಲಾಗಿದೆ. ಮಾಹಿತಿಗಳ 100 ಗ್ರಾಂನಷ್ಟು ತೂಕ ಹೆಚ್ಚಾಗಿತ್ತು ಎನ್ನಲಾಗಿದೆ. ಒಲಂಪಿಕ್ಸ್ ಆಡಳಿತ ಮಂಡಳಿಯಿಂದ ಅನರ್ಹಗೊಂಡ ಸುದ್ದಿಯನ್ನು ಅಧಿಕೃತಗೊಳಿಸಿದ್ದಾರೆ.
ನಿನ್ನೆ 50 ಕೆಜಿ ವಿಭಾಗದ ಕುಸ್ತಿಯಲ್ಲಿ ವೀರಾವೇಶದ ಆಟ ಪ್ರದರ್ಶನ ಮಾಡುವ ಮೂಲಕ ಫೈನಲ್ ಒ್ರವೇಶ ಮಾಡಿದ್ದರು. ಇದೀಗ ಇಂದು 100 ಗ್ರಾಂ ತೂಕ ಹೆಚ್ಚಾಗಿದ್ದಕ್ಕೆ ಅನರ್ಹಗೊಂಡಿದ್ದಾರೆ. ನಿನ್ನೆ ಪಂದ್ಯಕ್ಕೂ ಮುನ್ನ 50 ಕೆಜಿ ಒಳಗಡೆ ತೂಕವನ್ನು ಹೊಂದಿದ್ದರು. ಇಂದು ಬೆಳಗ್ಗೆ ನೋಡಿದರೆ 100 ಗ್ರಾಂನಷ್ಟು ಹೆಚ್ಚಳವಾಗಿತ್ತು. ನಿನ್ನೆ ಅಷ್ಟು ಸರಿಯಾದ ತೂಕ ಬ್ಯಾಲೆನ್ಸ್ ಮಾಡಿದ್ದ ವೀನೇಶ್ ಬೆಳಗ್ಗೆ ಹೆಚ್ಚಾಗಿದ್ದು ಹೇಗೆ ಎಂಬುದೇ ಪ್ರಶ್ನೆಯಾಗಿದೆ. ಊಟ, ಸ್ವೀಟ್ ಏನಾದರೂ ಹೆಚ್ಚಿಗೆ ತಿಂದರಾ ಎಂಬ ಚರ್ಚೆಗಳು ಶುರುವಾಗಿದೆ.
ಅದೆಲ್ಲದಕ್ಕಿಂತ ಹೆಚ್ಚಾಗಿ ಪೋಗಟ್ ಅವರಿಗೆ ಒಲಂಪಿಕ್ಸ್ ನಿಂದಲೂ ಏನಾದರೂ ಮೋಸ ಆಯ್ತಾ ಎಂಬ ಅನುಮಾನಗಳು ಹಲವರನ್ನು ಕಾಡುತ್ತಿದ್ದು, ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಫೈನಲ್ ಪ್ರವೇಶಿಸಿದ ಬಳಿಕ ವೀನೇಶ್ ಅವರಿಗೆ ಹೊಗಳಿಕೆಯ ಸುರಿಮಳೆಯೂ ಸಿಕ್ಕಿತ್ತು. ಈ ಹಿಂದೆ ಕುಸ್ತಿ ಫೆಡರೇಶನ್ ಅಧ್ಯಕ್ಷನ ವಿರುದ್ಧ ಹೋರಾಟ ನಡೆಸಿದ್ದರು.