ಇಂದು RCB ವರ್ಸಸ್ ಪಂಜಾಬ್ ಕಿಂಗ್ಸ್ : ಸ್ಪರ್ಧೆಯಲ್ಲಿ ಓಡೋದ್ಯಾರು..?
ಇಂದು ಮತ್ತೆ ಎರಡನೇ ಬಾರಿಗೆ ಆರ್ಸಿಬಿ ಅಖಾಡಕ್ಕೆ ಇಳಿಯುತ್ತಿದೆ. ಮೊದಲ ಮ್ಯಾಚ್ ನಂತು ಸಂಪ್ರದಾಯದಂತೆ ದೇವರಿಗೆ ಅರ್ಪಿಸಿದ್ದಾರೆ. ಇದೀಗ ಮತ್ತೆ ಪಂಜಾಬ್ ಕಿಂಗ್ಸ್ ಎದುರು ಸೆಣೆಸಾಡಲು ಸಿದ್ಧವಾಗಿದೆ. ಈ ಹೈವೋಲ್ಟೆಜ್ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಚೆನ್ನೈ ವಿರುದ್ದ ಸೋತಂತ ಆರ್ಸಿಬಿ ಇದೀಗ ತವರು ಕ್ಷೇತ್ರದಲ್ಲಿಯೇ ಗೆಲುವು ಸಾಧಿಸಲು ಪಣ ತೊಟ್ಟಿದೆ. ಪಂಜಾಬ್ ಸೋಲಿಸುವ ಯೋಜನೆ ಹಾಕಿಕೊಂಡಿದೆ.
ಪಂಜಾಬ್ ತಂಡವೂ ತನ್ನ ಮೊದಲ ಪಂದ್ಯದಲ್ಲಿಯೇ ಡೆಲ್ಲಿ ವಿರುದ್ಧ ಗೆದ್ದು ಬೀಗಿತ್ತು. ಸದ್ಯ ಪಂಜಾಬ್ ಸ್ಟ್ರೆಂಥ್ ಆಗಿರುವುದು ಸ್ಯಾಮ್ ಕರನ್ ಮತ್ತು ಲಿಯಾಮ್ ಲಿವೀಂಗ್ ಸ್ಟೋನ್. ಪಂಜಾಬ್ ತಂಡದಲ್ಲಿ ಶಿಖರ್ ಧವನ್ ನಾಯಕ ಸ್ಥಾನದಲ್ಲಿದ್ದು, ಜಾನಿ ಬೈರ್ ಸ್ಟೋವ್, ಜಿತೇಶ್ ಶರ್ಮಾ, ಶಶಾಂಕ್ ಸಿಂಗ್, ಹರ್ಪಿತ್ ಬ್ರಾರ್, ಹರ್ಚಲ್ ಪಟೇಲ್, ಕಗಿಸೋ ರಬಾಡ ರಾಹುಲ್ ಚಹಾರ್, ಆರ್ಶ್ ದೀಪ್ ಸಿಂಗ್ ಇದ್ದಾರೆ.
ಇನ್ನು ಆರ್ಸಿಬಿಯಲ್ಲಿ ನಾಯಕತ್ವವನ್ನು ಫಾಫ್ ಡು ಪ್ಲೆಸಿಸ್ ವಹಿಸಿಕೊಂಡಿದ್ದರೆ ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಗ್ಲೆನ್ ಮ್ಯಾಕ್ಸ್ ವೆಲ್, ಕ್ಯಾನೆರಾನ್ ಗ್ರೀನ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಕರ್ಣ್ ಶರ್ಮಾ, ಲಾಕಿ ಫರ್ಗೂಸನ್, ಮಯಾಂಕ್ ಡಾಗರ್, ಮೊಹಮ್ಮದ್ ಸಿರಾಜ್ ತಂಡದಲ್ಲಿದ್ದಾರೆ. ಘಟಾನುಘಟಿ ಆಟಗಾರರೇ ಆರ್ಸಿಬಿ ತಂಡದಲ್ಲೂ ಇದ್ದಾರೆ. ಮೊದಲ ಮ್ಯಾಚ್ ಅಂತು ಹೋಯ್ತು, ಅಟ್ಲೀಸ್ಟ್ ಎರಡನೇ ಮ್ಯಾಚ್ ಗೆಲ್ಲಲೇಬೇಕೆಂದು ಆರ್ಸಿಬಿ ಫ್ಯಾನ್ಸ್ ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಸತತ ಹದಿನಾಲ್ಕು ವರ್ಷದಿಂದ ಕಪ್ ಎತ್ತುವುದನ್ನು ನೋಡುವುದಕ್ಕೆ ಕಾದಿದ್ದೇ ಬಂತು. ಅದನ್ನ ಮಹಿಳೆಯರು ಈಡೇರಿಸಿದ್ದಾರೆ. ಈ ಸಲ ಬಾಯ್ಸ್ ಈಡೇರಿಸಲೇಬೇಕೆಂಬ ಮನವಿ ಮಾಡುತ್ತಿದ್ದಾರೆ ಫ್ಯಾನ್ಸ್.