For the best experience, open
https://m.suddione.com
on your mobile browser.
Advertisement

RCB ತಂಡದಿಂದ ಮೂವರಿಗೆ ಅನಾರೋಗ್ಯ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಟ ಹೇಗಿರುತ್ತೆ..?

09:45 PM Apr 01, 2023 IST | suddionenews
rcb ತಂಡದಿಂದ ಮೂವರಿಗೆ ಅನಾರೋಗ್ಯ   ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಟ ಹೇಗಿರುತ್ತೆ
Advertisement

ಬೆಂಗಳೂರು: ಈಗಾಗಲೇ IPL 2023 ಆರಂಭವಾಗಿದೆ. ನಟಿಮಣಿಯರ ಅದ್ದೂರಿ ಡ್ಯಾನ್ಸ್ ನೊಂದಿಗೆ ಐಪಿಎಲ್ ಗೆ ಆರಂಭ ಸಿಕ್ಕಿದೆ. ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಆಟ ಶುರುವಾಗಿದೆ. ಐಪಿಎಲ್ ನಲ್ಲಿ ಎಲ್ಲರು ಕಾತುರದಿಂದ ಕಾಯುವ ಪಂದ್ಯವೆಂದರೆ ಅದುವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆದ್ರೆ ಮೊದಲ ಪಂದ್ಯಕ್ಕೇನೆ ಆಟಗಾರರ ಕೊರತೆ ಉಂಟಾಗಿದೆ.

Advertisement
Advertisement

ಐಪಿಎಲ್ ನ ಐದನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಮೂವರು ಆಟಗಾರರು ಅಲಭ್ಯರಾಗುವುದು ಖಚಿತವಾಗಿದೆ. ರಜತ್ ಪಾಟೀದಾರ್, ಜೋಶ್ ಹ್ಯಾಝಲ್ವುಡ್ ಮತ್ತು ವನಿಂದು ಹಸರಂಗ ಅಲಭ್ಯರಾಗಲಿದ್ದಾರೆ.

Advertisement

ರಜತ್ ಪಾಟೀದಾರ್ ಸದ್ಯ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರಿಗೆ NCA ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಆಟಕ್ಕೆ ಹಾಜರಾಗಲಿದ್ದಾರೆ. ಹ್ಯಾಝಲ್ ವುಡ್ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ಕೂಡ ತಂಡವನ್ನು ಸೇರಿಕೊಂಡಿಲ್ಲ. ವನಿಂದು ಹಸರಂಗ್ ಸದ್ಯಕ್ಕೆ ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯವಾಡುತ್ತಿದ್ದಾರೆ. ಹೀಗಾಗಿ ಆರ್ಸಿಬಿ ತಂಡದ ಮೊದಲ ಪಂದ್ಯಕ್ಕೆ ಸಿಗುವುದು ಕಷ್ಟವಾಗಿದೆ.

Advertisement
Advertisement

Advertisement
Tags :
Advertisement