ಟೀಂ ಇಂಡಿಯಾ ಆಟಗಾರರು ಭಾರತಕ್ಕೆ ಬರಲು ಹರಸಾಹಸ..!
ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುತ್ತಿದ್ದಂತೆ ಭಾರತದಲ್ಲಿ ಸಂತಸ ಮನೆ ಮಾಡಿದೆ. ಆ ಸೆಲೆಬ್ರೆಷನ್ ಆಚರಿಸಲು ಆಟಗಾರರುಗಾಗಿ ಕಾಯುತ್ತಿದೆ. ಗೆದ್ದ ದಿನವೇ ಎಲ್ಲೆಡೆ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದರು. ಟೀಂ ಇಂಡಿಯಾ ಆಟಗಾರರು ಭಾರತಕ್ಕೆ ಗೆಲುವಿನ ಜೊತೆಗೆ ಬರುವುದೇ ಒಂದು ಸಂಭ್ರಮ ಅಲ್ಲವೇ. ಆದರೆ ಚಂಡಮಾರುತದ ಪರಿಣಾಮದಿಂದ ಟೀಂ ಇಂಡಿಯಾ ಆಟಗಾರರು ಭಾರತಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ.
ಬಾರ್ಬಡೋಸ್ ನಲ್ಲಿ ಬಾರೀ ಮಳೆಯಾಗುತ್ತಿದೆ. ಅದರಲ್ಲೂ ಬಿರುಗಾಳಿ ಸಹಿತ ಮಳೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಗಂಟೆಗೆ 130 ಕಿಲೋ ಮೀಟರ್ ನಷ್ಟು ಗಾಳಿ ಬೀಸುತ್ತಿದೆ. ಹೀಗಾಗಿ ರಸ್ತೆಯ ಮೇಲೆ ವಾಹನ ಸವಾರರಿಗೆ ಸಂಚಾರ ಸಂಕಷ್ಟ ತಂದೊಡ್ಡಿದೆ. ಒದರ ನಡುವೆ ವಿಮಾನ ಸಂಚಾರವೂ ರದ್ದಾಗಿದೆ. ವಾತಾವರಣ ಬದಲಾವಣೆಯಾಗಿರುವ ಕೆಲವೊಂದು ವಿಮಾನಗಳು ರದ್ದಾಗಿವೆ. ಹೀಗಾಗಿ ಟೀಂ ಇಂಡಿಯಾ ಬಾರ್ಬಡೋಸ್ ನಲ್ಲಿಯೇ ಉಳಿದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.
ಅಂದುಕೊಂಡ ದಿನವೇ ಟೀಂ ಇಂಡಿಯಾ ಪ್ರಯಾಣ ಬೆಳೆಸಿದ್ದರೆ ಇಷ್ಟೊತ್ತಿಗೆ ನ್ಯೂಯಾರ್ಕ್ ತಲುಪಬೇಕಿತ್ತು. ಆದರೆ ಚಂಡಮಾರುತದ ಪ್ರಭಾವ ಅದು ಸಾಧ್ಯವಾಗಿಲ್ಲ. ಬಾರೀ ಮಳೆ ಗಾಳಿ ಹಿನ್ನೆಲೆ ಭಾರತ ತಂಡವೂ ನ್ಯೂಯಾರ್ಕ್ ನಿಂದ ಬರುವ ಪ್ಲ್ಯಾನ್ ಚೆಂಜ್ ಆಗಿದೆ. ಇನ್ನು ವಿಶೇಷ ವಿಮಾನದ ಮೂಲಕ ನೇರವಾಗಿ ದೆಹಲಿ ತಲುಪುವ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆಯಂತೆ. ಆದರೆ ಅದಕ್ಕೂ ವಾತಾವರಣದಲ್ಲಿ ಸೌಮ್ಯತೆ ಬೇಕಾಗುತ್ತದೆ. ಸೈಕ್ಲೋನ್ ಕಡಿಮೆಯಾದ ಮೇಲೆ ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಈಗಾಗಲೇ ಮಾಡುತ್ತಿರುವ ಪ್ಲ್ಯಾನ್ ಪ್ರಕಾರ ಟೀಂ ಇಂಡಿಯಾ ಹೊರಟರೆ ಜುಲೈ 3ಕ್ಕೆ ತವರಿಗೆ ಬರಲಿದೆ.