For the best experience, open
https://m.suddione.com
on your mobile browser.
Advertisement

T20 World Cup 2024 : ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಭಾರತ : ಮುಗಿಲು ಮುಟ್ಟಿದ ಕೋಟ್ಯಂತರ ಭಾರತೀಯರ ಸಂಭ್ರಮ

12:26 AM Jun 30, 2024 IST | suddionenews
t20 world cup 2024   ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಭಾರತ   ಮುಗಿಲು ಮುಟ್ಟಿದ ಕೋಟ್ಯಂತರ ಭಾರತೀಯರ ಸಂಭ್ರಮ
Advertisement

ಸುದ್ದಿಒನ್ : ಐಸಿಸಿ ಟ್ರೋಫಿಗಾಗಿ ಟೀಂ ಇಂಡಿಯಾ ಸುದೀರ್ಘ 11 ವರ್ಷಗಳ ನಿರೀಕ್ಷೆಗೆ ತೆರೆ ಎಳೆದಿದೆ. ಬಾರ್ಬಡೋಸ್ T20 ವಿಶ್ವಕಪ್ 2024 ರ ಫೈನಲ್ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳಿಂದ ಗೆದ್ದಿದೆ. ಇದರಿಂದ 11 ವರ್ಷಗಳ ಕಾಲ ಟ್ರೋಫಿಗಾಗಿ ನಡೆದ ಹೋರಾಟ ಗೆಲುವಿನಲ್ಲಿ ಅಂತ್ಯವಾಗಿದೆ. ಈ ಮೂಲಕ ಕೋಟ್ಯಂತರ ಭಾರತೀಯರು ಸಂಭ್ರಮದಲ್ಲಿ ಮಿಂದೆದ್ದರು.

Advertisement

ಕೋಟ್ಯಂತರ ಭಾರತೀಯರು ಈ ಗೆಲುವನ್ನು ಸಂಭ್ರಮಿಸಿದರು. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ನಾಯಕ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಭಾವುಕರಾದರು. ಬ್ಯಾಟಿಂಗ್ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವಿರಾಟ್ ಕೊಹ್ಲಿ 'ಪಂದ್ಯ ಶ್ರೇಷ್ಠ' ಪ್ರಶಸ್ತಿಗೆ ಭಾಜನರಾದರು.

Advertisement

177 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ದಕ್ಷಿಣ ಆಫ್ರಿಕಾ 12 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕ್ವಿಂಟನ್ ಡಿ ಕಾಕ್ (39) ಮತ್ತು ಟ್ರಿಸ್ಟಾನ್ ಸ್ಟಬ್ಸ್ (31) ತಂಡಕ್ಕೆ ಆಸರೆಯಾದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ಗುರಿಯತ್ತ ಸಾಗಿತು. ಸ್ಟಬ್ಸ್ ಔಟಾದಾಗ ದಕ್ಷಿಣ ಆಫ್ರಿಕಾ 8.5 ಓವರ್‌ಗಳಲ್ಲಿ 70/3 ಆಗಿತ್ತು.  ಆದರೆ ಆಗಷ್ಟೇ ಕ್ರೀಸ್ ಗೆ ಬಂದ ಹೆನ್ರಿಚ್ ಕ್ಲಾಸೆನ್ ವಿಧ್ವಂಸಕ‌ ಆಟ ಪ್ರದರ್ಶಿಸಿದರು. ಅದರಲ್ಲೂ ಅಕ್ಷರ್ ಪಟೇಲ್ 15 ನೇ ಓವರ್ ನಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ 24 ರನ್ ಗಳಿಸಿದರು. ಅವರು 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

Advertisement

ಇದರೊಂದಿಗೆ 30 ಎಸೆತಗಳಿಗೆ 30 ರನ್ ಬೇಕಾಯಿತು. ಬುಮ್ರಾ 16 ನೇ ಓವರ್ ಬೌಲ್ ಮಾಡಿ ಕೇವಲ 4 ರನ್ ನೀಡಿದರು. ಹಾರ್ದಿಕ್ ಪಾಂಡ್ಯ 17ನೇ ಓವರ್‌ನ ಮೊದಲ ಎಸೆತದಲ್ಲಿ ಹೆನ್ರಿಚ್ ಕ್ಲಾಸೆನ್ ಅವರನ್ನು ಔಟ್ ಮಾಡುವ ಮೂಲಕ ಪಂದ್ಯವನ್ನು ಗೆಲುವಿನತ್ತ ವಾಲಿಸಿದರು.  ಕ್ಲಾಸೆನ್ 27 ಎಸೆತಗಳಲ್ಲಿ 52 ರನ್ ಗಳಿಸಿ ಔಟಾದರು. ಆ ಓವರ್‌ನಲ್ಲಿ ಪಾಂಡ್ಯ ನೀಡಿದ್ದು ಕೇವಲ ನಾಲ್ಕು ರನ್. ಆ ಬಳಿಕ ಬುಮ್ರಾ 18ನೇ ಓವರ್ ಬೌಲ್ ಮಾಡಿ 2 ರನ್ ನೀಡಿ ಮಾರ್ಕೊ ಜಾನ್ಸೆನ್ ಅವರನ್ನು ಔಟ್ ಮಾಡಿದರು.

Advertisement
Advertisement

ದಕ್ಷಿಣ ಆಫ್ರಿಕಾಗೆ 2 ಓವರ್‌ಗಳಲ್ಲಿ 20 ರನ್ ಬೇಕಾಗಿತ್ತು. ಕೊನೆಯ ಎರಡು ಓವರ್‌ಗಳಲ್ಲಿ ಅದ್ಭುತವಾಗಿ ಬೌಲ್ ಮಾಡಿ ದಕ್ಷಿಣ ಆಫ್ರಿಕಾವನ್ನು 169/8ಕ್ಕೆ ಕಟ್ಟಿಹಾಕಿ ಕೊನೆಗೆ 7 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 176/7 ಗಳಿಸಿತು. ಆದರೆ ರೋಹಿತ್ ಶರ್ಮಾ (9), ರಿಷಬ್ ಪಂತ್ (0) ಮತ್ತು ಸೂರ್ಯಕುಮಾರ್ ಯಾದವ್ (3) ಅಲ್ಪ ಮೊತ್ತಕ್ಕೆ ಔಟಾದರು. ಇದರಿಂದ 34 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅಕ್ಷರ್ ಪಟೇಲ್ ಜೊತೆಗೂಡಿ ತಂಡಕ್ಕೆ ಆಸರೆಯಾದರು. ಪರಿಣಾಮ ಒಂದು ಹಂತದಲ್ಲಿ 13.2 ಓವರ್ ಗಳಲ್ಲಿ 106 ರನ್ ಗಳಿಸಿ 3 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 176/7 ಗಳಿಸಿತು. ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 76 ರನ್, ಅಕ್ಷರ್ ಪಟೇಲ್ 31 ಎಸೆತಗಳಲ್ಲಿ 47 ರನ್ ಮತ್ತು ಶಿವಂ ದುಬೆ 16 ಎಸೆತಗಳಲ್ಲಿ 27 ರನ್ ಗಳಿಸಿದರು.

Advertisement
Tags :
Advertisement