ಒಂದೇ ಓವರ್‌ನಲ್ಲಿ 7 ಸಿಕ್ಸರ್ ಬಾರಿಸಿದ ರುತುರಾಜ್ ಗಾಯಕ್ವಾಡ್ ; ವಿಡಿಯೋ ನೋಡಿ...!
ಇಂಡಿಯಾದ ಯುವ ಆಟಗಾರ ರುತ್ರಾಜ್ ಗಾಯಕ್ವಾಡ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಸೋಮವಾರ ಅಹಮದಾಬಾದ್‌ನ ಬಿ ಗ್ರೌಂಡ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದ ವೇಳೆ ಸೀಮಿತ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಏಳು ಸಿಕ್ಸರ್‍ಗಳನ್ನು ಬಾರಿಸುವ ಮೂಲಕ 43 ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.
ಉತ್ತರ ಪ್ರದೇಶ ವಿರುದ್ಧ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಗಾಯಕ್ವಾಡ್ ಒಂದು ಓವರ್‌ನಲ್ಲಿ ಏಳು ಸಿಕ್ಸರ್‌ಗಳನ್ನು ಸಿಡಿಸಿದ್ದರು.
ರುತುರಾಜ್ ಅವರು ಸರ್ ಗಾರ್ಫೀಲ್ಡ್ ಸೋಬರ್ಸ್, ರವಿ ಶಾಸ್ತ್ರಿ, ಹರ್ಷಲ್ ಗಿಬ್ಸ್, ಯುವರಾಜ್ ಸಿಂಗ್, ರಾಸ್ ವೈಟ್ಲಿ, ಹಜ್ತ್ರತುಲ್ಲಾ ಝಜೈ, ಲಿಯೋ ಕಾರ್ಟರ್, ಕೀರಾನ್ ಪೊಲಾರ್ಡ್ ಮತ್ತು ತಿಸಾರಾ ಪೆರೆರಾ ಅವರ ಪಟ್ಟಿಗೆ ಸೇರಿಕೊಂಡರು. ಇವರೆಲ್ಲರೂ ಒಂದು ಓವರ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ ದೇಶೀಯ 50 ಓವರ್‌ಗಳ ಪಂದ್ಯಾವಳಿಯ ವಿಜಯ್ ಹಜಾರೆ ಟ್ರೋಫಿಯ ಎರಡನೇ ಕ್ವಾರ್ಟರ್ ಫೈನಲ್‌ನಲ್ಲಿ ಸತತ ಏಳು ಸಿಕ್ಸರ್‌ಗಳಿಗೆ ಹೊಡೆದರು. ಆ ಓವರ್‌ನ ಒಂದು ಬಾಲ್ ನೋ ಬಾಲ್ ಆಗಿತ್ತು.ಅದನ್ನೂ ಸಹಾ ಗಾಯಕ್ವಾಡ್ ಸಿಕ್ಸರ್ ಬಾರಿಸಿದರು. ಅವರ ಇನಿಂಗ್ಸ್ ಆಧರಿಸಿ ಮಹಾರಾಷ್ಟ್ರ 50 ಓವರ್‌ಗಳಲ್ಲಿ ಐದು ವಿಕೆಟ್‌ಗೆ 330 ರನ್ ಗಳಿಸಿತು. ಗಾಯಕ್ವಾಡ್ 159 ಎಸೆತಗಳಲ್ಲಿ 16 ಸಿಕ್ಸರ್ ಮತ್ತು 10 ಬೌಂಡರಿ ಸೇರಿದಂತೆ 220 ರನ್ ಗಳಿಸಿ ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ 50 ಓವರ್‌ಗಳಲ್ಲಿ 330/5 ತಲುಪಲು ಸಹಾಯ ಮಾಡಿದರು. 25 ರ ಹರೆಯದ ಗಾಯಕ್ವಾಡ್ ಒಂದೇ ಓವರ್‌ನಲ್ಲಿ 42 ರನ್ ಗಳಿಸಿದ ದಾಖಲೆ ಬರೆದಿದ್ದಾರೆ.