6 ರನ್ ಗಳಿಂದ ಕೊಹ್ಲಿ ದಾಖಲೆ ಬ್ರೇಕ್ ಮಾಡುವಲ್ಲಿ ವಿಫಲರಾದ್ರು ರೋಹಿತ್ ಶರ್ಮಾ..!
ಡೆಲ್ಲಿ ಹಾಗೂ ಮುಂಬೈ ತಂಡದ ಪಂದ್ಯ ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಬಾರಿಯ ಐಪಿಎಲ್ ಮ್ಯಾಚ್ ನಲ್ಲಿ ಮೂರು ಪಂದ್ಯಗಳನ್ನು ಸೋತ ಮುಂಬೈ ತಂಡ ಈ ಬಾರಿ ಗೆಲ್ಲುವ ಕಾತುರದಲ್ಲಿದೆ. ಈ ತವಕದಲ್ಲಿರುವಾಗಲೇ ರೋಹಿತ್ ಶರ್ಮಾ, ಕೊಹ್ಲಿ ದಾಖಲೆ ಮುರಿಯುವುದನ್ನು ಜಸ್ಟ್ ಮಿಸ್ ಮಾಡಿಕೊಂಡಿದ್ದಾರೆ.
ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ತಂಡ ಒಳ್ಳೆಯ ಆರಂಭವನ್ನೇ ಪಡೆದುಕೊಂಡಿದೆ. ಅದರಲ್ಲೂ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡುತ್ತಿರುವಾಗಲೇ ಎಡವಿದ್ದಾರೆ. 27 ಬಾಲ್ ಗಳಿಗೆ 3 ಸಿಕ್ಸ್, 6 ಫೋರ್ ಗಳನ್ನು ಬಾರಿಸುವ ಮೂಲಕ 49 ರನ್ ಗಳಿಸಿದರು ರೋಹಿತ್ ಶರ್ಮಾ. ಆದರೆ ಇನ್ನು ನಾಲ್ಕೇ ನಾಲ್ಕು ರನ್ ಗಳಿಸಿದ್ದರು ಕೊಹ್ಲಿ ದಾಖಲೆಯನ್ನು ಬ್ರೇಕ್ ಮಾಡುತ್ತಿದ್ದರು. ಇದು ಸಾಧ್ಯವಾಗಲೇ ಇಲ್ಲ. ಶತಕದ ಸನಿಹದಲ್ಲಿದ್ದ ರೋಹಿತ್ ಶರ್ಮಾ ಔಟ್ ಆಗಿದ್ದಕ್ಕೆ ಅಭಿಮಾನಿಗಳು ಕೂಡ ಬೇಸರ ವ್ಯಕ್ತಪಡಿಸಿದರು.
ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರಾಟ್ ಕೊಹ್ಲಿ 1030 ರನ್ ಪೇರಿಸಿದ್ದಾರೆ. ಇಂದು 49 ರನ್ ಸಿಡಿಸಿದ ರೋಹಿತ್ ಶರ್ಮಾ ಅವರು 1026 ರನ್ ಗಳಿಸಿ ಕೇವಲ 4 ರನ್‌ಗಳಿಂದ ವಿರಾಟ್ ಕೊಹ್ಲಿ ಅವರ ರೆಕಾರ್ಡ್ ಬ್ರೇಕ್ ಮಾಡುವಲ್ಲಿ ವಿಫಲರಾಗಿದ್ದಾರೆ. ರೋಹಿತ್ ಶರ್ಮಾಗೆ ಇದೊಂದು ಉತ್ತಮ ಅವಕಾಶವಾಗಿತ್ತು. ಕೊಹ್ಲಿ ರೆಕಾರ್ಡ್ ಬ್ರೇಕ್ ಮಾಡುವುದಕ್ಕೆ ಸಿಕ್ಕ ಅವಕಾಶವನ್ನು ರೋಹಿತ್ ಶರ್ಮಾ ಮಿಸ್ ಮಾಡಿಕೊಂಡಿದ್ದಾರೆ.