For the best experience, open
https://m.suddione.com
on your mobile browser.
Advertisement

ಶಸ್ತ್ರ ಚಿಕಿತ್ಸೆ ಯಶಸ್ವಿ.. ವಿಶ್ರಾಂತಿಯಲ್ಲಿ ಆಲ್ ರೌಂಡರ್ ಜಡೇಜಾ

02:18 PM Sep 07, 2022 IST | suddionenews
ಶಸ್ತ್ರ ಚಿಕಿತ್ಸೆ ಯಶಸ್ವಿ   ವಿಶ್ರಾಂತಿಯಲ್ಲಿ ಆಲ್ ರೌಂಡರ್ ಜಡೇಜಾ
Advertisement

Advertisement
Advertisement

ಟೀಂ ಇಂಡಿಯಾ ಆಲ್ ರೌಂಡರ್ ಜಡೇಜಾ ಅವರು ಸದ್ಯ ಆಸ್ಪತ್ರೆಯಲ್ಲಿದ್ದಾರೆ. ಮೊಣಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ರವೀಂದ್ರ ಜಡೇಜಾ ಇದೀಗ ಚಿಕಿತ್ಸೆ ಪಡೆದು, ವಿಶ್ರಾಂತಿ ಪಡೆಯುತ್ತಿದ್ದಾರೆ.

Advertisement

ರವಿಂದ್ರ ಜಡೇಜಾ ಅವರಿಗೆ ಮೊಣಕಾಲು ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ವಿಶ್ರಾಂತಿ ಪಡೆಯುಲು ವೈದ್ಯರು ಸೂಚನೆ ನೀಡಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಬಿಸಿಸಿಐ, ವೈದ್ಯರು, ಸಪೋರ್ಟ್ ಸ್ಟಾಫ್ ಮತ್ತು ಫ್ಯಾನ್ಸ್ಗೆ ಧನ್ಯವಾದ. ಹಾಗೂ ಸಾಕಷ್ಟು ಜನ ನನಗೆ ಸಹಾಯ ಮಾಡಿದ್ದಾರೆ ಅವರೆಲ್ಲರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ. ಇನ್ನು ಸದ್ಯದಲ್ಲಿಯೇ ನಾನು ರಿಹ್ಯಾಬ್ ಗೆ ಒಳಗಾಗಿ ಮತ್ತೆ ಕಮ್ ಬ್ಯಾಕ್ ಮಾಡುತ್ತೇನೆ ಎಂದು ಫ್ಯಾನ್ಸ್ ಹ್ಯಾಪಿ ನ್ಯೂಸ್ ಕೊಟ್ಟಿದ್ದಾರೆ.

Advertisement

ಆಲ್ ರೌಂಡರ್ ಜಡೇಜಾ ಏಷ್ಯಾ ಕಪ್ ಟೂರ್ನಿಯಲ್ಲಿ ಗಾಯಮಾಡಿಕೊಂಡಿದ್ದರು. ಈಗ ಅದರ ಚಿಕಿತ್ಸೆಗೆ ಒಳಗಾಗಿದೆ. ಪಾಕಿಸ್ತಾನದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 35 ರನ್ ಬಾರಿಸಿದ್ದರು. ಆದ್ರೆ ರವೀಂದ್ರ ಜಡೇಜಾ ಅವರು ಅನಾರೋಗ್ಯಕ್ಕೆ ತುತ್ತಾದಾಗ ಅಭಿಮಾನಿಗಳಂತು ಬೇಸರ ಮಾಡಿಕೊಂಡಿದ್ದರು. ಇದೀಗ ಅವರ ಅಪ್ಡೇಟ್ ನೋಡಿ ಖುಷಿಯಾಗಿದ್ದಾರೆ.

Advertisement
Tags :
Advertisement