ಬೆಂಗಳೂರಿನಲ್ಲಿ ಬಾರೀ ಮಳೆ : ಆರ್‌ಸಿಬಿ ಅಭಿಮಾನಿಗಳಿಗೆ ಆತಂಕ...!
ಸುದ್ದಿಒನ್, ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಆತಂಕ ಶುರುವಾಗಿದೆ. ಭಾನುವಾರ ಮಧ್ಯಾಹ್ನದಿಂದಲೆ ಬೆಂಗಳೂರು ನಗರದಲ್ಲಿ
ಮಳೆ ಆರಂಭವಾಗಿದೆ. ರಾತ್ರಿಯೂ ಮಳೆ ಸುರಿದರೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಮೇಲೆ ಪರಿಣಾಮ ಬೀರಲಿದೆ.
ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಬೆಂಗಳೂರಿನ ಪ್ಲೇಆಫ್ ಅವಕಾಶದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇದರಿಂದಾಗಿ ಆರ್‌ಸಿಬಿ ಆಟಗಾರರು ಹಾಗೂ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ. ಬೆಂಗಳೂರು ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಳೆಯ ವಿಡಿಯೋಗಳು ಹರಿದಾಡುತ್ತಿವೆ.
ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ತೀವ್ರ ಗಾಳಿ ಬೀಸುತ್ತಿದ್ದು, ಉತ್ತರ ಮತ್ತು ಪೂರ್ವ ಬೆಂಗಳೂರಿನ ಕಡೆಗೆ ಚಲಿಸುತ್ತಿದೆ ಎಂದು ಕರ್ನಾಟಕ ಹವಾಮಾನ ತಜ್ಞರು ತಿಳಿಸಿದ್ದಾರೆ. ಮುಂದಿನ ಒಂದು ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ ಗುಡುಗು, ಮಿಂಚು, ಆಲಿಕಲ್ಲು ಮಳೆಯಾಗಲಿದೆ. ಬೆಂಗಳೂರಿನ ಕೆಲವೆಡೆ ಭಾರೀ ಗಾಳಿ ಬೀಸಲಿದೆ. ಕೆಆರ್ ಪುರ ಮತ್ತು ವೈಟ್ ಫೀಲ್ಡ್ ಭಾಗದಲ್ಲಿ ಮೊದಲು ಮಳೆ ಆರಂಭವಾಗಲಿದೆ. ಬೆಂಗಳೂರು ನಗರದಲ್ಲಿ ಭಾನುವಾರ ಸಂಜೆಯಿಂದ ರಾತ್ರಿಯವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯವರು ಮೊದಲೇ ಎಚ್ಚರಿಕೆ ನೀಡಿದ್ದರು.
ಬೆಂಗಳೂರು-ಗುಜರಾತ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾದರೆ ಪ್ರತಿ ತಂಡಕ್ಕೆ ಒಂದೊಂದು ಅಂಕ ನೀಡಲಾಗುತ್ತದೆ. ಆಗ ಆರ್‌ಸಿಬಿ ಗೆ 15 ಅಂಕಗಳಾಗುತ್ತದೆ.
ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಗೆದ್ದರೆ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯವೂ ರದ್ದುಗೊಳಿಸಿದರೆ. ರೋಹಿತ್ ಪಡೆ ಪ್ಲೇಆಫ್ ತಲುಪಲಿದೆ. ಹಾಗಾಗಿ ಡಕ್‌ವರ್ತ್ ಲೂಯಿಸ್ ವಿಧಾನದ ಪ್ರಕಾರ ಪಂದ್ಯ ಕೆಲವು ಓವರ್‌ಗಳವರೆಗಾದರೂ ನಡೆಯಬೇಕೆಂದು ಆರ್‌ಸಿಬಿ ಅಭಿಮಾನಿಗಳು ಬಯಸುತ್ತಿದ್ದಾರೆ.