For the best experience, open
https://m.suddione.com
on your mobile browser.
Advertisement

ಪೋಷಕರು ತಮ್ಮ ಮಕ್ಕಳು ಕ್ರೀಡಾಪಟುವಾಗಲಿ ಎಂದು ಯಾರೂ ಆಶಿಸುವುದಿಲ್ಲ, ಇದು ದುರಂತ : ಎನ್.ಡಿ. ಕುಮಾರ್

11:14 AM Aug 11, 2024 IST | suddionenews
ಪೋಷಕರು ತಮ್ಮ ಮಕ್ಕಳು ಕ್ರೀಡಾಪಟುವಾಗಲಿ ಎಂದು ಯಾರೂ ಆಶಿಸುವುದಿಲ್ಲ  ಇದು ದುರಂತ   ಎನ್ ಡಿ  ಕುಮಾರ್
Advertisement

Advertisement
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ, ಆ.10 :  ಇಂದಿನ ದಿನಮಾನದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಐ.ಟಿ., ಬಿ.ಟಿ. ಇಂಜಿನಿಯರ್, ಡಾಕ್ಟರ್ ನ್ಯಾಯಾವಾದಿ, ಸೇರಿದಂತೆ ಇತರೆ ಉದ್ಯೋಗದಲ್ಲಿ ನೋಡಲು ಇಚ್ಚೆ ಪಡುತ್ತಾರೆ ಹೊರೆತು ಯಾರು ಸಹಾ ತಮ್ಮ ಮಕ್ಕಳು ಕ್ರೀಡಾಪಟುವಾಗಲಿ ಎಂದು ಆಶಿಸುವುದಿಲ್ಲ. ಇದು ನಮ್ಮ ದುರಂತ ಇದರಿಂದ ಭಾರತ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಹಿಂದೆ ಉಳಿಯಲು ಕಾರಣವಾದ ಪ್ರಮುಖ ಅಂಶಗಳಲ್ಲಿ ಇದು ಕೂಡ ಒಂದು. ಎಂದು ಅಂತರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟು ಎನ್.ಡಿ. ಕುಮಾರ್ ತಿಳಿಸಿದ್ದಾರೆ.

ದಾವಣಗೆರೆ ವಿಶ್ವ ವಿದ್ಯಾಲಯದ ಅಡಿಯಲ್ಲಿ ಜಿ.ಆರ್.ಹಳ್ಳಿಯಲ್ಲಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ  ಶನಿವಾರ ಜಿಮ್‍ಖಾನ ಅಡಿಯಲ್ಲಿ ನಡೆದ ಜ್ಞಾನ ಗಂಗೋತ್ರಿ ಕ್ರೀಡಾಕೂಟ ಅಂತರ ವಿಭಾಗ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮಲ್ಲಿ ಇತ್ತೀಚೆಗೆ ನಡೆದ ಒಲಂಪಿಕ್ ಕ್ರೀಡಾಕೂಟದಲ್ಲಿ ನಮ್ಮವರ ಸಾಧನೆ ಕಡಿಮೆಯಾಗಿದೆ ಇಂದು ಒಂದು ಕಡೆಯಾದರೆ ಮ್ತತೊಂದು ಕಡೆಯಲ್ಲಿ ನಮ್ಮವರಿಗೆ ಕ್ರೀಡೆಯಲ್ಲಿ ಸಿಗಬೇಕಾದ ಸೌಲಭ್ಯ ಸರಿಯಾದಚ ರೀತಿಯಲ್ಲಿ ಸಹಾಯ ಮತ್ತು ಸಹಕಾರ ಸಿಗುತ್ತಿಲ್ಲ, ನಮ್ಮವರು ಒಲಂಪಿಕ್ ನಲ್ಲಿ ಇಷ್ಟು ಪದಕಗಳನ್ನು ಗೆದ್ದಿರುವುದೇ ಒಮದು ದೊಡ್ಡವ ಸಾಧನೆಯಾಗಿದೆ ಎಂದರು.

ಇತ್ತೀಚಿನ ದಿನಮಾನದಲ್ಲಿ ಬಹುತೇಕ ಪೋಷಕರು ತಮ್ಮ ಮಕ್ಕಳು ಉತ್ತಮವಾದ ಅಂಕಗಳನ್ನು ಪಡೆದು ಇಂಜಿನಿಯರ್, ಡಾಕ್ಟರ್, ನ್ಯಾಯವಾದಿ, ಇಲ್ಲವೆ ಸರ್ಕಾರದಲ್ಲಿ ಉತ್ತಮವಾದ ಅಧಿಕಾರಿಯಾಗಲಿ ಎದು ಆಶಿಸುತ್ತಾ ಉತ್ತಮವಾದ ಸಂಬಳವನ್ನು ತರಲಿ ಎನ್ನುತ್ತಾರೆ ಆದರೆ ಯಾರೂ ಸಹಾ ಕ್ರೀಡಾಪಟುಗಳಾಲಿ ಎಂದು ಆಶಿಸುವುದಿಲ್ಲ ಇದು ನಮ್ಮ ದೇಶದ ದುರಂತವಾಗಿದೆ. ಸರ್ಕಾರದಿಂದ ಕ್ರೀಡೆಗೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಸಿಗುತ್ತಿಲ್ಲ, ಇದರಿಂದ ಹಲವಾರು ಕ್ರೀಡಾಪಟುಗಳು ಉತ್ತಮವಾಧ ಪ್ರತಿಭೆಯನ್ನು ಹೊಂದಿದ್ದರು ಸಹಾ ಅದಕ್ಕೆ ಪ್ರೋತ್ಸಾಹ ಇಲ್ಲದೆ ಕಮರಿ ಹೋಗುತ್ತಿವೆ. ಎಂದು ಕುಮಾರ್ ವಿಷಾಧಿಸಿದರು.

ಕ್ರೀಡಾ ಸಂಯೋಜಕರಾದ ಡಾ. ರಾಜೇಂದ್ರ ಪ್ರಸಾದ್ ಮಾತನಾಡಿ ಇತ್ತೀಚಿನ ದಿನಮಾನದಲ್ಲಿ ಯುವ ಜನತೆ ಕ್ರೀಡೆಯಲ್ಲಿ ಭಾಗವಹಿಸುವುದು ಕಡಿಮೆಯಾಗಿದೆ. ಬಹುತೇಕ ಯುವ ಜನಾಂಗ ಮೋಬೈಲ್‍ನಲ್ಲಿ ಮುಳುಗಿರುತ್ತಾರೆ ಇದರಿಂದ ಪ್ರಪಂಚವನ್ನೇ ಮರೆಯುತ್ತಾರೆ. ಕ್ರಿಡೆ ಮಾನವನಿಗೆ ಅತಿ ಮುಖ್ಯವಾಗಿದೆ ಇದರಿಂದ ಮಾನಸಿಕವಾಗಿ ಸದೃಢವಾಗಲು ಸಹಾಯವಾಗುತ್ತದೆ, ಆದರೆ ಇದರ ಬಗ್ಗೆ ಯಾರಿಗೂ ಸಹಾ ಅರಿವಿಲ್ಲದೆ ಕ್ರೀಡೆಯನ್ನು ನಿರ್ಲಕ್ಷ ಮಾಡುತ್ತಿದ್ದಾರೆ. ಸರ್ಕಾರ ಕ್ರೀಡೆಗಾಗಿ ಸಹಾಯವನ್ನು ಮಾಡುತ್ತಿದೆ ಇದರ ಪ್ರಯೋಜನವನ್ನು ಪಡೆಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ.ವಿಜಯ್‍ಕುಮಾರ್, ಡಾ. ಸತೀಶ್,ಡಾ. ಸುಂದರಂ,ಡಾ.ಶಶಿಧರ್,ಡಾ.ಅರುಣ್ ಕುಮಾರ್, ಡಾ.ಗಿರೀಶ್, ಡಾ.ಕುಮಾರ್, ಡಾ. ಕೀರ್ತಿ ಕುಮಾರ್  ಡಾ.ಜೋಶಿ, ಸೂಪರ್ಡೆಂಟ್ ಗಿರಿಜಮ್ಮ ನಿವೇದಿತಾ, ಹಾಗೂ ಬೋಧನಾ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Tags :
Advertisement