For the best experience, open
https://m.suddione.com
on your mobile browser.
Advertisement

ಮೈಸೂರು ದಸರಾ : ಚಿತ್ರದುರ್ಗದ ಮಂಜುನಾಥ್ ಬಳೆಗಾರ್ ಗೆ ದೇಹ ದಾರ್ಢ್ಯ ಸ್ಪರ್ಧೆಯಲ್ಲಿ ಬೆಳ್ಳಿ ಪದಕ

04:26 PM Oct 04, 2022 IST | suddionenews
ಮೈಸೂರು ದಸರಾ   ಚಿತ್ರದುರ್ಗದ ಮಂಜುನಾಥ್ ಬಳೆಗಾರ್ ಗೆ ದೇಹ ದಾರ್ಢ್ಯ ಸ್ಪರ್ಧೆಯಲ್ಲಿ ಬೆಳ್ಳಿ ಪದಕ
Advertisement

ಚಿತ್ರದುರ್ಗ, ಸುದ್ದಿಒನ್ : ಮೈಸೂರು ದಸರಾ ಉತ್ಸವದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ದೇಹ ದಾರ್ಢ್ಯ ಸ್ಪರ್ಧೆಯಲ್ಲಿ ಕೋಟೆ ನಾಡಿನ ಮಂಜುನಾಥ್ ಬಳೆಗಾರ್ ಬೆಳ್ಳಿ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಕೋಟೆನಾಡಿಗೆ ಕೀರ್ತಿ ತಂದಿದ್ದಾರೆ.

Advertisement
Advertisement

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ  ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

Advertisement
Advertisement

ಚಿತ್ರದುರ್ಗವೆಂದರೆ ಹಾಗೆ ಗಂಡು ಮೆಟ್ಟಿನ ನಾಡು, ಸಾಂಸ್ಕೃತಿಕ ತವರು, ಕವಿ ,ಸಾಹಿತಿಗಳ ಬೀಡು ಎಂದೆಲ್ಲ ಕರೆಯುವುದು ಒಂದೆಡೆಯಾದರೆ ಸದ್ದಿಲ್ಲದೇ ಸಾಧಕನೊಬ್ಬ ಪ್ರಶಸ್ತಿ ತಂದು ಚಿತ್ರದುರ್ಗಕ್ಕೆ  ಶೋಭಾಯಮಾನವಾಗಿದ್ದಾರೆ.

ಮಂಜುನಾಥ್ ರವರಿಗೆ ಈ ಪ್ರಶಸ್ತಿಗಳು ಹೊಸದೇನಲ್ಲ. ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ 70 kg ವಿಭಾಗದಲ್ಲಿ ಕ್ರಮವಾಗಿ 5 ಮತ್ತು 2 ನೇಸ್ಥಾನವನ್ನು ಪಡೆದಿರುತ್ತಾರೆ. ಮೊದಲಿಗೆ ವ್ಯಾಯಾಮಕ್ಕಾಗಿ ಜಿಮ್ ಗೆ ಸೇರಿದ್ದಾರೆ. ಇವರ ದೇಹದ ರಚನೆ, ಶಿಸ್ತು, ಸಮಯ ಪಾಲನೆ ಅರಿತ ಇವರ ತರಬೇತುದಾರರಾದ ರಾಕೇಶ್ ಅವರು ದೇಹ ದಾರ್ಢ್ಯ  ಸ್ಪರ್ಧೆಗಳಲ್ಲಿ ಭಾಗವಹಿಸಲು ಸಲಹೆ ಕೊಡುವುದರ ಮೂಲಕ ಪ್ರೇರೇಪಿಸಿದ್ದಾರೆ.

ಇವರ ಧರ್ಮಪತ್ನಿ ಜೋತ್ಸ್ನ ಅವರು ಸರಿಯಾದ ಸಮಯಕ್ಕೆ ತಿಂಡಿ,ಊಟ, ಪೋಷಕಾಂಶಗಳ ಆಹಾರದ ತಯಾರು ಮಾಡಿಕೊಡುವುದರ ಮೂಲಕ ಮಾದರಿ ಪತ್ನಿಯಾಗಿದ್ದಾರೆ. ಎರಡು ಮುದ್ದಾದ ಮಕ್ಕಳು ವಿರಾಟ್ ರಾಜ್,ವಿಸ್ಮಿತಾ ರಾಜ್ ರೊಂದಿಗಿರುವ ಇವರು ರಂಗಯ್ಯನ ಬಾಗಿಲಬಳಿ ಫೋಟೋ ಸ್ಟುಡಿಯೋವನ್ನು ಹೊಂದಿದ್ದಾರೆ.

ಸೈನಿಕರ ಮೇಲೆ ಬಾಂಬ್ ದಾಳಿಯಾದಾಗ ಅವರ ನೆನಪಿಗಾಗಿ ಕೈ ಮೇಲೆ ಟ್ಯಾಟು ಹಾಕಿಸುವುದರ ಮೂಲಕ ದೇಶ ಪ್ರೇಮ ಮೆರೆದಿದ್ದಾರೆ. ಮಹಾರಾಷ್ಟ್ರದ ದೇಹ ದಾರ್ಢ್ಯ ಪಟು ಸಂಗ್ರಾಮ್ ಚೌಗಲೆ ಅವರನ್ನು ಮಾನಸಿಕ ಗುರುವಾಗಿ ಸ್ವೀಕರಿಸಿರುವ ಮಂಜುನಾಥ್ ಏಕಲವ್ಯನ ರೀತಿಯಲ್ಲಿ ದುರ್ಗದಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಮಿಸ್ಟರ್ ಕರ್ನಾಟಕ ಮತ್ತು ಮಿಸ್ಟರ್ ಇಂಡಿಯಾ ಪ್ರಶಸ್ತಿ ಗೆದ್ದು ಚಿತ್ರದುರ್ಗಕ್ಕೆ ಹೆಸರು ತರಬೇಕು ಎನ್ನುತ್ತಾರೆ ಮಂಜುನಾಥ್. ಯಾರಾದರೂ ಕ್ರೀಡಾ ಪ್ರೇಮಿಗಳು ಪ್ರಾಯೋಜಕರಾಗಿ ಬಂದರೆ ನನ್ನ ಕನಸು ನನಸಾಗುವುದು ನಿಜವೆಂದು ಸುದ್ದಿಒನ್ ಗೆ ತಿಳಿಸಿದ್ದಾರೆ.

ವರದಿ : ಅರ್ಜಿತ್ ಗೋವಿಂಧನ್, ಮೊ : 9741738979

Advertisement
Tags :
Advertisement