For the best experience, open
https://m.suddione.com
on your mobile browser.
Advertisement

ಒಂದು Instagram ಪೋಸ್ಟ್ ಗೆ ಕೊಹ್ಲಿ ಗಳಿಸೋದು 11 ಕೋಟಿ : ವೈರಲ್ ಆದ ವಿಚಾರಕ್ಕೆ ಬೇಸರ ಹೊರ ಹಾಕಿದ ವಿರಾಟ್..!

04:34 PM Aug 13, 2023 IST | suddionenews
ಒಂದು instagram ಪೋಸ್ಟ್ ಗೆ ಕೊಹ್ಲಿ ಗಳಿಸೋದು 11 ಕೋಟಿ   ವೈರಲ್ ಆದ ವಿಚಾರಕ್ಕೆ ಬೇಸರ ಹೊರ ಹಾಕಿದ ವಿರಾಟ್
Advertisement

Advertisement

ಸೆಲೆಬ್ರೆಟಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ರು ಒಳ್ಳೆ ದುಡಿಮೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾವುದಾದರೊಂದು ಪ್ರಾಡೆಕ್ಟ್ ನ ಪ್ರಚಾರ ಮಾಡ್ತಾರೆ ಅಂದ್ರೆ ಅದಕ್ಕೂ ಹಣ ಬರುತ್ತೆ. ಇದೆಲ್ಲಾ ಎಲ್ಲರಿಗೂ ಗೊತ್ತು. ಆದ್ರೆ‌ ಒಂದೊಂದು ಪೋಸ್ಟ್ ಗೆ ಎಷ್ಟು ಹಣ ಬರುತ್ತೆ ಅನ್ನೋದು ಮಾತ್ರ ಯಾರಿಗೂ ಕ್ಲಾರಿಟಿ ಇಲ್ಲ. ಇತ್ತಿಚೆಗೆ ಕಿಂಗ್ ವಿರಾಟ್ ಕೊಹ್ಲಿ Instagram ವಿಚಾರಕ್ಕೆ ಸಾಕಷ್ಟು ಸುದ್ದಿಯಾಗ್ತಾ ಇದೆ. ಅದುವೆ ಒಂದು ಪೋಸ್ಟ್ ಗೆ ಕೊಹ್ಲಿ 11.45 ಕೋಟಿ ಹಣ ಪಡೀತಾರೆ ಎಂಬ ವಿಚಾರ.

Advertisement

Advertisement

ಇಷ್ಟು ದಿನ ಸುಮ್ಮನೆ ಇದ್ದ ಕೊಹ್ಲಿ ಈ ಬಗ್ಗೆ ಟ್ವೀಟ್ ಮೂಲಕ ಕ್ಲಾರಿಟಿ ಕೊಟ್ಟಿದ್ದಾರೆ. ಜೀವನದಲ್ಲಿ ನನಗೆ ಸಿಕ್ಕಿರುವ ಎಲ್ಲದಕ್ಕೂ ನಾನು ಕೃತಜ್ಞನಾಗಿದ್ದೇನೆ. ನನ್ನ ಸಾಮಾಜಿಕ ಮಾಧ್ಯಮದ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ಅವರ ಸೋಷಿಯಲ್ ಮೀಡಿಯಾ ಸಂಭಾವನೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ಕಳೆದ ವರ್ಷ ಒಂದು ಪೋಸ್ಟ್ ಗೆ 8.9 ಕೋಟಿ ಸಂಭಾವನೆ ಇತ್ತು. ಈ ವರ್ಷ ಇನಷ್ಟು ದುಬಾರಿಯಾಗಿದೆ. ಒಂದು ಪೋಸ್ಟ್ ಗೆ 11.45 ಕೋಟಿ ತರಗೆದುಕೊಳ್ಳಲಿದ್ದಾರೆ ಎನ್ನುವ ವದಂತಿ ತೀವ್ರವಾಗಿ ಹಬ್ಬಿತ್ತು. ಆದರೆ ಈ ವಿಚಾರವನ್ನು ಸ್ವತಃ ಕೊಹ್ಲಿಯೇ ತಳ್ಳಿ ಹಾಕಿದ್ದಾರೆ.

Tags :
Advertisement