For the best experience, open
https://m.suddione.com
on your mobile browser.
Advertisement

ಮುಂಬೈ ಇಂಡಿಯನ್ಸ್ ಟೀಂಗೆ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಎಂಟ್ರಿ..!

08:09 PM Apr 05, 2024 IST | suddionenews
ಮುಂಬೈ ಇಂಡಿಯನ್ಸ್ ಟೀಂಗೆ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಎಂಟ್ರಿ
Advertisement

ಈ ಬಾರಿಯ ಐಪಿಎಲ್ ಆರಂಭವಾದಾಗಿನಿಂದ ಮೂರು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಹೀನಾಯವಾಗಿ ಸೋಲು ಕಂಡಿದೆ. ಈ ಭಾನುವಾರ ತನ್ನ ನೆಲದಲ್ಲಿಯೇ ಮ್ಯಾಚ್ ಎದುರಿಸಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ ಎದುರು ಸೆಣೆಸಾಡಲಿವೆ. ಈ ಪಂದ್ಯವನ್ನಾದರೂ ಗೆಲ್ಲಲೇಬೇಕೆಂದು ಸಖತ್ ಪ್ರಾಕ್ಟೀಸ್ ಮಾಡುತ್ತಿದೆ ಮುಂಬೈ ಇಂಡಿಯನ್ಸ್ ತಂಡ. ಇದೀಗ ತಂಡಕ್ಕೆ ಸ್ಟಾರ್ ಬ್ಯಾಟರ್ ಎಂಟ್ರಿಯಾಗಿದೆ ಎನ್ನುತ್ತಿವೆ ಮೂಲಗಳು.

Advertisement
Advertisement

ಮುಂಬೈ ಇಂಡಿಯನ್ಸ್ ತಂಡಕ್ಕೆ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬಂದಿದ್ದಾರೆ ಎನ್ನಲಾಗಿದೆ‌. ಸ್ಟಾರ್ ಬ್ಯಾಟರ್ ಎಂಟ್ರಿಯಿಂದ ಮುಂಬೈ ಇಂಡಿಯನ್ಸ್ ಟೀಂ ನಾಯಕ ಹಾರ್ದಿಕ್ ಪಾಂಡ್ಯಾಗೆ ಬಲ ಬಂದಂತೆ ಆಗಿದೆ. ಮುಂಬೈ ಇಂಡಿಯನ್ಸ್ ಸದ್ಯ ಸೋತಿರುವ ಮೂರು ಪಂದ್ಯದಲ್ಲೂ ಸೂರ್ಯಕುಮಾರ್ ಆಡಿರಲಿಲ್ಲ. ಈಗ ಡೆಲ್ಲಿ ವಿರುದ್ಧ ಆಡಲು ಬರುತ್ತಿದ್ದು, ಈ ಬಾರಿ ಗೆಲುವು ಖಂಡಿತ ಸಿಗಲಿದೆ ಎಂಬ ವಿಶ್ವಾದಲ್ಲಿದೆ ಎಂಐ.

ಸದ್ಯ ಡೆಲ್ಲಿ ವಿರುದ್ಧ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಗೆ ಆರು ದಿನಗಳ ಬಿಡುವು ದೊರೆತಿದ್ದು, ಇಡೀ ತಂಡ ಗುಜರಾತ್​ನ ಜಾಮ್‌ನಗರಕ್ಕೆ ಸಣ್ಣ ಪ್ರವಾಸ ತೆರಳಿದೆ. ಪ್ರವಾಸದ ಸಂದರ್ಭ ನಾಯಕ ಹಾರ್ದಿಕ್ ಪಾಂಡ್ಯ, ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಇತರ ಆಟಗಾರರು ಮೋಜು ಮಸ್ತಿ ನಡೆಸುತ್ತಿರುವ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಅದೀಗ ವೈರಲ್ ಆಗುತ್ತಿದೆ.

Advertisement
Advertisement

Advertisement
Tags :
Advertisement