For the best experience, open
https://m.suddione.com
on your mobile browser.
Advertisement

ನೋವಿನಿಂದಾನೇ IPL ನಲ್ಲಿ ಗೆದ್ದ ಧೋನಿ ಈಗ ಶಸ್ತ್ರ ಚಿಕಿತ್ಸೆಗೆ ಮುಂದಾಗಿದ್ದಾರೆ..!

12:54 PM Jun 01, 2023 IST | suddionenews
ನೋವಿನಿಂದಾನೇ ipl ನಲ್ಲಿ ಗೆದ್ದ ಧೋನಿ ಈಗ ಶಸ್ತ್ರ ಚಿಕಿತ್ಸೆಗೆ ಮುಂದಾಗಿದ್ದಾರೆ
Advertisement

Advertisement
Advertisement

Advertisement

16 ನೇ ಆವೃತ್ತಿಯ ಐಪಿಎಲ್ ಗೆ ಬ್ರೇಕ್ ಬಿದ್ದಿದೆ. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ ಕಪ್ ತಮ್ಮದಾಗಿಸಿಕೊಂಡಿದೆ. ಆಟ ಮುಗಿದು ಎರಡು ದಿನವಾದರೂ ಇನ್ನು ಅದರ ಕ್ರೇಜ್, ಖುಷಿ‌ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ಇನ್ನು ಸಂಭ್ರಮಿಸುತ್ತಲೇ ಇದ್ದಾರೆ. ಇದರ ನಡುವೆ ಧೋನಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.

Advertisement

ಎಂ ಎಸ್ ಧೋನಿಯದ್ದು ಇದು ಕಡೆಯ‌ ಐಪಿಎಲ್ ಎಂದೇ‌ ಹೇಳಲಾಗುತ್ತಿತ್ತು. ಆದರೆ ಧೋನಿಯ ನಡೆ ಮುಂದಿನ ಐಪಿಎಲ್ ಗೆ ಇಂದಿನಿಂದಾನೇ ಪ್ಲ್ಯಾನ್ ನಡೆಸುತ್ತಿದ್ದಾರೆ ಎಂಬುದು ತಿಳಿಯುತ್ತಿದೆ. ಮುಂಬೈನ ಧೀರೂಬಾಯ್ ಅಂಬಾನಿ ಆಸ್ಪತ್ರೆಯಲ್ಲಿ ಧೋನಿ ನೀ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರ ಚಿಕಿತ್ಸೆಯ ಬಳಿಮ ಮುಂದಿನ ಐಪಿಎಲ್ ಒಳಗೆ ಸಖತ್ ಫಿಟ್ನೆಸ್ ಕಾಪಾಡುವ ನಿರ್ಧಾರ ಅವರದ್ದಾಗಿದೆ.

ಧೋನಿಗೆ ಮೊಣಕಾಲು ನೋವಿತ್ತು. ಆದರೂ ಈ ಬಾರಿಯ ಐಪಿಎಲ್ ನಲ್ಲಿ ಆ ನೋವನ್ನು ಲೆಕ್ಕಿಸದೇ ಆಟವಾಡಿದ್ದಾರೆ. ಅದರ ಪರಿಣಾಮ ನೋವು ಉಲ್ಬಣಗೊಂಡಿದೆ‌. ಶಸ್ತ್ರಚಿಕಿತ್ಸೆಯ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದಾರೆ. ಕ್ರಿಕೆಟ್ ಆಟಕ್ಕೆ ಫಿಟ್ನೆಸ್ ನ ಅಗತ್ಯ ಹೆಚ್ಚಾಗಿರುವ ಕಾರಣ ಧೋನಿ ಕೂಡ ಫಿಟ್ನೆಸ್ ಕಡೆ ಹೆಚ್ಚು ಗಮನ ಹರಿಸಲಿದ್ದಾರೆ.

Advertisement
Tags :
Advertisement