For the best experience, open
https://m.suddione.com
on your mobile browser.
Advertisement

RCBಗೆ ಬಂತು ಆನೆ ಬಲ : ಆಲ್ ರೌಂಡರ್ ಮ್ಯಾಕ್ಸಿ ಕಮ್ ಬ್ಯಾಕ್

06:33 PM Apr 25, 2024 IST | suddionenews
rcbಗೆ ಬಂತು ಆನೆ ಬಲ   ಆಲ್ ರೌಂಡರ್ ಮ್ಯಾಕ್ಸಿ ಕಮ್ ಬ್ಯಾಕ್
Advertisement

Advertisement
Advertisement

ಆರ್ಸಿಬಿ ಫ್ಯಾನ್ಸ್ ಗೆ ಇಂದು ಸಿಕ್ಕಾಪಟ್ಟೆ ಖುಷಿಯ ದಿನವಾಗಿದೆ. ಆಡಿರುವ ಎಂಟು ಮ್ಯಾಚ್ ನಲ್ಲಿ ಏಳು ಮ್ಯಾಚ್ ಸೋತಿದ್ದರು, ಇಂದಿನ ವಿಚಾರ ಕೊಂಚ ಸಮಾಧಾನ ತಂದಿದೆ. ಫ್ಲೇಆಫ್ ಕನಸನ್ನು ಹಾಗೇ ಇಟ್ಟುಕೊಳ್ಳುವಂತೆ ಮಾಡಿದೆ. ಇಂದು ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂಸನ್ ರೈಸರ್ಸ್ ಹೈದ್ರಾಬಾದ್ ತಂಡ ಮುಖಾ ಮುಖಿಯಾಗಲಿವೆ. ಈ ಮ್ಯಾಚ್ ಅನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕಾದ ಅನಿವಾರ್ಯತೆ ಆರ್ಸಿಬಿಗಿದೆ. ಅಭಿಮಾನಿಗಳು ಹಾರೈಸುತ್ತಿದ್ದಾರೆ. ಈ ಬೆನ್ನಲ್ಲೇ ಖುಷಿ ಸುದ್ದಿ ಸಿಕ್ಕಿದೆ.

Advertisement

Advertisement
Advertisement

ಫಾಫ್ ಡುಪ್ಲೆಸಿಸ್ ಕ್ಯಾಪ್ಟೆನ್ಸಿಯಲ್ಲಿ ಗೆದ್ದಿರುವುದು ಒಂದೇ‌ ಮ್ಯಾಚ್. ಈ ಮೂಲಕ ಎರಡು ಅಂಕದೊಂದಿಗೆ ಟೇಬಲ್ ನಲ್ಲಿ ಕೊನೆಯ ಸ್ಥಾನದಲ್ಲಿದೆ. ಇಂದಿನ ಪಂದ್ಯಕ್ಕೆ ಹೊಸ ಹುಮ್ಮಸ್ಸು ತುಂಬಿದ್ದೇ, ಮ್ಯಾಕ್ಸಿ. ಎಸ್ ಆಲ್ ರೌಂಡರ್ ಮ್ಯಾಕ್ಸಿ ಮತ್ತೆ ಟೀಂಗೆ ಬಂದಿದ್ದು, ಫ್ಯಾನ್ಸ್ ದಿಲ್ ಖುಷ್ ಆಗಿದೆ. ಒಂದಷ್ಟು ಭರವಸೆಯೂ ಮೂಡಿದೆ.

ಇಂದು ನಡೆಯುವ ಮ್ಯಾಚ್ ನಲ್ಲಿ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಏಳು ಮ್ಯಾಚ್ ಸೋತರು ಅಭಿಮಾನಿಗಳ ಅಭಿಮಾನದ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಸೋತರು ನಮ್ಮ ಆರ್ಸಿಬಿ ಅಂತಾನೆ ಅಂತಾರೆ. ಹೀಗಾಗಿ ಇಂದಿನ ಮ್ಯಾಚ್ ಗೆಲ್ಲಬೇಕಾದ ಅನಿವಾರ್ಯತೆ ಆರ್ಸಿಬಿಗಿದೆ. ಗೆದ್ದರೆ ಅಭಿಮಾನಿಗಳು ಫುಲ್ ಖುಷಿಯಾಗ್ತಾರೆ. ಫ್ಲೇ ಆಫ್ ಕನಸು ಕೂಡ ಜೀವಂತವಾಗಿಯೇ ಇರಲಿದೆ.

Advertisement
Tags :
Advertisement