ಮೂವರು ಆಟಗಾರರು ಆಟ ಶುರು ಮಾಡಿದ್ರೆ RCB ಟಚ್ ಮಾಡೋದು ಕಷ್ಟ ಕಷ್ಟ..!
ಪಂಜಾಬ್ ಕಿಂಗ್ಸ್ ಮಣಿಸಿದ ಆರ್ಸಿಬಿ ಇಂದು ಮತ್ತೊಂದು ಆಟಕ್ಕೆ ಸಜ್ಜಾಗಿದೆ. ಕೆಕೆಆರ್ ವಿರುದ್ದ ಜಯ ಗಳಿಸುವ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕೆ ಇಳಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಆರ್ಸಿಬಿ ಎರಡನೇ ಪಂದ್ಯವನ್ನಾಡಲಿದೆ. ಆದರೆ ಈ ಬಾರಿ ಆರ್ಸಿಬಿಯನ್ನು ಸೋಲಿಸುವುದು ಅಷ್ಟು ಸುಲಭವಲ್ಲ.
ವಿರಾಟ್ ಕೊಹ್ಲಿ ಈಗಾಗಲೇ ಫಾರ್ಮ್ ಕಂಡುಕೊಂಡಿದ್ದಾರೆ. ದಿನೇಶ್ ಕಾರ್ತಿಕ್ ಕೂಡ ಆಕ್ಟೀವ್ ಆಗಿದ್ದಾರೆ. ಆದರೆ ಮ್ಯಾಕ್ಸ್ ವೆಲ್ ಇನ್ನು ತನ್ನ ಆಟವನ್ನೇ ತೋರಿಸದೆ ಸೈಲೆಂಟ್ ಆಗಿದ್ದಾರೆ. ಹೀಗಾಗಿ ಇಂದಿನ ಮ್ಯಾಚ್ ನಲ್ಲಿ ಮ್ಯಾಕ್ಸ್ ತನ್ನ ಆಟವನ್ನು ತೋರಿಸಲೇಬೇಕಿದೆ. ಇತ್ತ ಕ್ಯಾಮರೂನ್ ಗ್ರೀನ್ ಗೆ 17.5 ಕೋಟಿ ನೀಡಲಾಗಿದೆ. ಆದರೂ ತನ್ನ ಆಟ ತೋರಿಸುತ್ತಿಲ್ಲ.
ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್ ಹಾಗೂ ರಜತ್ ಪಟೀದಾರ್ ಅಸಲಿ ಆಟ ಆಡುವಲ್ಲಿ ಸೋತಿದ್ದಾರೆ. ಇವರ ಕಮ್ಬ್ಯಾಕ್ ತಂಡಕ್ಕೆ ಅತ್ಯಗತ್ಯ. ಈಗಿನ್ನೂ ಎರಡು ಪಂದ್ಯ ಮುಗಿದಿದ್ದು, ತಪ್ಪನ್ನ ತಿದ್ದಿಕೊಳ್ಳುವತ್ತ ಮೂವರು ಗಮನ ಹರಿಸಬೇಕಿದೆ. ಹಾಗೊಂದು ವೇಳೆ ತ್ರಿಮೂರ್ತಿಗಳು ಇಂದು ಫಾರ್ಮ್ ಕಂಡುಕೊಂಡಿದ್ದೆ ಆದ್ರೆ ಆರ್ಸಿಬಿಯನ್ನ ಟಚ್ ಮಾಡೋದೆ ಕಷ್ಟ. ಅಭಿಮಾನಿಗಳು ಸಹ ಇಂಥದ್ದೇ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದಷ್ಟು ಎಲ್ಲರೂ ಕೂಡ ತಮ್ಮ ಫಾರ್ಮ್ ಗೆ ಮರಳಬೇಕಿದೆ. ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್ ಅಸಲಿ ಆಟ ಶುರು ಮಾಡಿದಂತೆ ಎಲ್ಲರೂ ತಮ್ಮ ತಮ್ಮ ನಿಜವಾದ ಆಟ ಶುರು ಮಾಡಿದರೆ ಅಲ್ಲಿಗೆ ಆರ್ದಿಬಿಯನ್ನು ಟಚ್ ಮಾಡಲು ಸಾಧ್ಯವಿರುವುದಿಲ್ಲ. ಹಾಗೇ ಈ ಸಲ ಕಪ್ ನಮ್ದೆ ಆಗಲಿದೆ ಏನಂತೀರಾ.