For the best experience, open
https://m.suddione.com
on your mobile browser.
Advertisement

IPL 2023 :16ನೇ ಸೀಸನ್ ವೇಳಾಪಟ್ಟಿ ಬಿಡುಗಡೆ ; ಮಾರ್ಚ್ 31 ರಿಂದ ಪ್ರಾರಂಭ

08:03 PM Feb 17, 2023 IST | suddionenews
ipl 2023  16ನೇ ಸೀಸನ್ ವೇಳಾಪಟ್ಟಿ ಬಿಡುಗಡೆ   ಮಾರ್ಚ್ 31 ರಿಂದ ಪ್ರಾರಂಭ
Advertisement

Advertisement

ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ. ಈಗಾಗಲೇ 15 ಸೀಸನ್ ಗಳಲ್ಲಿ ಯಶಸ್ಸು ಕಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಸೀಸನ್ ವೇಳಾಪಟ್ಟಿ ಬಿಡುಗಡೆಯಾಗಿದೆ.

Advertisement

ಶುಕ್ರವಾರ ಸಂಜೆ ಐಪಿಎಲ್ 16ನೇ ಸೀಸನ್‌ನ ವೇಳಾಪಟ್ಟಿ ಮತ್ತು ಪಂದ್ಯದ ವಿವರಗಳನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

Advertisement

IPL 2023 ಆವೃತ್ತಿಯು ಮಾರ್ಚ್ 31 ರಂದು ಪ್ರಾರಂಭವಾಗಲಿದೆ. ಐಪಿಎಲ್ 16ನೇ ಸೀಸನ್ ನ ಉದ್ಘಾಟನಾ ಸಮಾರಂಭ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಮೊದಲ ಪಂದ್ಯದಲ್ಲಿ ಸಿಎಸ್ ಕೆ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. ಐಪಿಎಲ್ 16ನೇ ಸೀಸನ್ ಮಾರ್ಚ್ 31ರಿಂದ ಮೇ 28ರವರೆಗೆ ನಡೆಯಲಿದ್ದು, ಮೇ 21ರವರೆಗೆ ಲೀಗ್ ಪಂದ್ಯಗಳು ನಡೆಯಲಿವೆ. ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ.

Advertisement
Tags :
Advertisement