For the best experience, open
https://m.suddione.com
on your mobile browser.
Advertisement

ರೋಚಕ ಪಂದ್ಯದಲ್ಲಿ ಭಾರತೀಯರಿಗೆ ದೀಪಾವಳಿ ಉಡುಗೊರೆ ನೀಡಿದ ಕೊಹ್ಲಿ : ಪಾಕ್ ವಿರುದ್ಧ ಭಾರತಕ್ಕೆ ಗೆಲುವು

06:30 PM Oct 23, 2022 IST | suddionenews
ರೋಚಕ ಪಂದ್ಯದಲ್ಲಿ ಭಾರತೀಯರಿಗೆ ದೀಪಾವಳಿ ಉಡುಗೊರೆ ನೀಡಿದ ಕೊಹ್ಲಿ   ಪಾಕ್ ವಿರುದ್ಧ ಭಾರತಕ್ಕೆ ಗೆಲುವು
Advertisement

ಸುದ್ದಿಒನ್ ವೆಬ್ ಡೆಸ್ಕ್ 

Advertisement
Advertisement

ಪಾಕ್ ವಿರುದ್ಧ ಭಾರತಕ್ಕೆ ಜಯತಂದುಕೊಡುವ ಮೂಲಕ ವಿರಾಟ್ ಕೊಹ್ಲಿ ಭಾರತೀಯರಿಗೆ ದೀಪಾವಳಿ ಉಡುಗೊರೆ ನೀಡಿದರು.

Advertisement

ಮೆಲ್ಬೋರ್ನ್ ನಲ್ಲಿ ನಡೆದ ಗ್ರೂಪ್ 2 ಹಂತದ ಪಂದ್ಯದಲ್ಲಿ ಕೊನೆಯವರೆಗೂ ರೋಚಕವಾಗಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 4 ವಿಕೆಟ್ ಗಳ ಜಯ ಸಾಧಿಸಿತು. ಕೊಹ್ಲಿ ಅದ್ಭುತವಾದ ಆಟದೊಂದಿಗೆ ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

Advertisement
Advertisement

ಈ ಪಂದ್ಯದಲ್ಲಿ ಕೊಹ್ಲಿ 53 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 82 ರನ್ ಗಳಿಸಿದರು. ಕೊಹ್ಲಿ ಜೊತೆಗೆ ಹಾರ್ದಿಕ್ ಪಾಂಡ್ಯ (37 ಎಸೆತಗಳಲ್ಲಿ 40) ನಿರ್ಣಾಯಕ ಪಂದ್ಯ ಆಡಿದರು. ಪಾಕ್ ಬೌಲರ್ ಗಳ ಪೈಕಿ ರೌಫ್ ಮತ್ತು ನವಾಜ್ ಎರಡು ವಿಕೆಟ್ ಪಡೆದರು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. ನಿಗದಿತ ಗುರಿಯನ್ನು ಮುಟ್ಟುವಲ್ಲಿ ಭಾರತ ತಂಡವು ಯಶಸ್ವಿಯಾಯಿತು.

Advertisement
Tags :
Advertisement