For the best experience, open
https://m.suddione.com
on your mobile browser.
Advertisement

IND Vs NZ 3 ನೇ ODI : ಟೀಂ ಇಂಡಿಯಾಗೆ ಶಾಕಿಂಗ್ ನ್ಯೂಸ್..!

07:29 PM Nov 29, 2022 IST | suddionenews
ind vs nz 3 ನೇ odi   ಟೀಂ ಇಂಡಿಯಾಗೆ ಶಾಕಿಂಗ್ ನ್ಯೂಸ್
Advertisement

Advertisement

Advertisement

ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

Advertisement

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಪಾರ್ಕ್‌ನಲ್ಲಿ ನಾಳೆ (ನವೆಂಬರ್ 30) ನಡೆಯಲಿರುವ ಪಂದ್ಯವು ಮಳೆಯಿಂದಾಗಿ ರದ್ದಾಗುವ  ಸಾಧ್ಯತೆಯಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಿದೆ.

Advertisement
Advertisement

ನಾಳೆ ಬೆಳಗ್ಗೆಯಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ಮೋಡ ಕವಿದ ವಾತಾವರಣವಿದ್ದು, ಪಂದ್ಯದ ವೇಳೆಗೆ (ಬೆಳಿಗ್ಗೆ 7 ಗಂಟೆಗೆ)  ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ.

ಈ ಸುದ್ದಿ ತಿಳಿದ ನಂತರ ಭಾರತೀಯ ಕ್ರಿಕೆಟಿಗರು ಮತ್ತು ಅಭಿಮಾನಿಗಳು ತೀವ್ರ ನಿರಾಶೆಗೊಂಡಿದ್ದಾರೆ. ಒಂದು ವೇಳೆ ಈ ಪಂದ್ಯ ನಡೆಯದೇ ಇದ್ದರೆ ಸರಣಿ ಕೈ ತಪ್ಪುವ ಸಾದ್ಯತೆಯಿದೆ. ಕನಿಷ್ಠ 10 ಓವರ್‌ಗಳ ಪಂದ್ಯ ನಡೆದರೆ ಸರಣಿ ಸಮಬಲಗೊಳಿಸಲು ಅವಕಾಶವಿದೆ.

ಏತನ್ಮಧ್ಯೆ, ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾ ಟಿ20 ಸರಣಿಯನ್ನು ಗೆದ್ದುಕೊಂಡಿರುವುದು ಗೊತ್ತೇ ಇದೆ. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದರೆ, ಮೂರನೇ ಪಂದ್ಯ ಡಕ್ವರ್ತ್ ಲೂಯಿಸ್ ವಿಧಾನದ ಪ್ರಕಾರ ಟೈನಲ್ಲಿ ಕೊನೆಗೊಂಡಿತು. ಮಧ್ಯದಲ್ಲಿ ಎರಡನೇ ಪಂದ್ಯ ಗೆದ್ದ ಹಾರ್ದಿಕ್ ಪಡೆ 3 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿತ್ತು.

Tags :
Advertisement