For the best experience, open
https://m.suddione.com
on your mobile browser.
Advertisement

IND VS NZ 1st ODI : ಇತಿಹಾಸದಲ್ಲಿಯೇ  ಮೊದಲ ಬಾರಿಗೆ ; ಭಾರತ ತಂಡದ ಕಳಪೆ ಸಾಧನೆ...!

07:16 PM Nov 25, 2022 IST | suddionenews
ind vs nz 1st odi   ಇತಿಹಾಸದಲ್ಲಿಯೇ  ಮೊದಲ ಬಾರಿಗೆ   ಭಾರತ ತಂಡದ ಕಳಪೆ ಸಾಧನೆ
Advertisement

Advertisement

ಸುದ್ದಿಒನ್ ವೆಬ್ ಡೆಸ್ಕ್ 

Advertisement

ಆಕ್ಲೆಂಡ್ ಮೈದಾನದಲ್ಲಿ ಇಂದು ನಡೆದ (ನವೆಂಬರ್ 25) ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ.

Advertisement

ನ್ಯೂಜಿಲೆಂಡ್ ನೆಲದಲ್ಲಿ ಸತತವಾಗಿ 4 ನೇ ಬಾರಿಗೆ ಏಕದಿನ ಪಂದ್ಯಗಳಲ್ಲಿ ಸೋತಿದ್ದು, ಇದು ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಕೆಟ್ಟ ಸಾಧನೆಯಾಗಿದೆ. ಭಾರತ ತಂಡವು 2020 ರಲ್ಲಿ ಸರಣಿಯನ್ನು 0-3 ಅಂತರದಿಂದ ಸರಣಿಯನ್ನು ಕಳೆದುಕೊಂಡಿತ್ತು. ಇಂದು ನಡೆದ ಪಂದ್ಯದಲ್ಲಿ ಸೋಲಿನೊಂದಿಗೆ ಮತ್ತೆ ನ್ಯೂಜಿಲೆಂಡ್ ನೆಲದಲ್ಲಿ ಸತತ ನಾಲ್ಕನೇ ಸೋಲನ್ನು ದಾಖಲಿಸಿದೆ.

Advertisement

ಕಳೆದ ಬಾರಿಯ ಪ್ರವಾಸದಲ್ಲಿ ಭಾರತ ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್, ಎರಡನೇ ಏಕದಿನದಲ್ಲಿ 22 ರನ್‌ಗಳ ಅಂತರದಿಂದ ಮತ್ತು ಮೂರನೇ ಏಕದಿನ ಪಂದ್ಯದಲ್ಲಿದಲ್ಲಿ 5 ವಿಕೆಟ್ ಗಳಿಂದ ಸೋತಿತ್ತು.

2022ರ ಪ್ರವಾಸದ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಅಂತರದಿಂದ ಸೋತು ನ್ಯೂಜಿಲೆಂಡ್ ನೆಲದಲ್ಲಿ ಏಕದಿನ ಪಂದ್ಯಗಳಲ್ಲಿ ಅತ್ಯಂತ ಕಳಪೆ ಸಾಧನೆಯನ್ನು ತೋರಿದೆ. (ಒಟ್ಟು ಪಂದ್ಯಗಳಲ್ಲಿ ನ್ಯೂಜಿಲೆಂಡ್ 25 ಪಂದ್ಯ ಗೆದ್ದರೆ, ಭಾರತ ಕೇವಲ 14 ಪಂದ್ಯಗಳನ್ನು ಗೆದ್ದಿದೆ)

ಏತನ್ಮಧ್ಯೆ ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಶ್ರೇಯಸ್ ಅಯ್ಯರ್ (80), ಶಿಖರ್ ಧವನ್ (72) ಹಾಗೂ ಶುಭಮನ್ ಗಿಲ್ (50) ಅರ್ಧಶತಕ ಸಿಡಿಸಿ ಮಿಂಚಿದರು.

ನ್ಯೂಜಿಲೆಂಡ್ ತಂಡ ಇನ್ನು 17 ಎಸೆತಗಳು ಬಾಕಿ ಇರುವಂತೆಯೇ ಆಟ ಮುಗಿಸುವ ಮೂಲಕ ಗೆಲುವು ಸಾಧಿಸಿದರು.

ಟಾಮ್ ಲ್ಯಾಥಮ್ (104 ಎಸೆತಗಳಲ್ಲಿ 145 (19 ಬೌಂಡರಿ, 5 ಸಿಕ್ಸರ್) ಅಜೇಯ ಶತಕ ಹಾಗೂ ನಾಯಕ ಕೇನ್ ವಿಲಿಯಮ್ಸನ್ (98 ಎಸೆತಗಳಲ್ಲಿ ಔಟಾಗದೆ 94, 7 ಬೌಂಡರಿ, ಸಿಕ್ಸರ್) ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Advertisement
Tags :
Advertisement