For the best experience, open
https://m.suddione.com
on your mobile browser.
Advertisement

ಟೀಂ ಇಂಡಿಯಾ ಪರ ಆಡುವುದಕ್ಕೆ ಅನಾರೋಗ್ಯ.. ಆದ್ರೆ ಗುಜರಾತ್ ಚುನಾವಣೆ ಪ್ರಚಾರಕ್ಕೆ ನೋ ಪ್ರಾಬ್ಲಮ್ : ಏನಿದು ರವೀಂದ್ರ ಜಡೇಜಾ ನಡೆ..?

02:08 PM Nov 26, 2022 IST | suddionenews
ಟೀಂ ಇಂಡಿಯಾ ಪರ ಆಡುವುದಕ್ಕೆ ಅನಾರೋಗ್ಯ   ಆದ್ರೆ ಗುಜರಾತ್ ಚುನಾವಣೆ ಪ್ರಚಾರಕ್ಕೆ ನೋ ಪ್ರಾಬ್ಲಮ್   ಏನಿದು ರವೀಂದ್ರ ಜಡೇಜಾ ನಡೆ
Advertisement

Advertisement
Advertisement

ಗುಜರಾತ್ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಮೂರು ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿವೆ. ಕಾಂಗ್ರೆಸ್ ಮತ್ತು ಬಿಜೆಪಿಯ ಜಿದ್ದಾಜಿದ್ದಿನ ನಡುವೆ ಈ ಬಾರಿ ಎಎಪಿ ಪಕ್ಷ ಕೂಡ ನಾನು ಇದ್ದೀನಿ, ನಾನೇ ಗೆಲ್ತೀನಿ ಅಂತ ಪಣ ತೊಟ್ಟು ನಿಂತಿದೆ. ಹೀಗಾಗಿ ಮೂರು ಪಕ್ಷಗಳಿಂದ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ.

Advertisement

ಈ ಮಧ್ಯೆ ಸ್ಟಾರ್ ಪ್ರಚಾರಕರ ವಿಚಾರವೂ ಸಾಕಷ್ಟು ಗಮನ ಸೆಳೆಯುತ್ತದೆ. ಬಿಜೆಪಿಯಲ್ಲಿ ಈಗಾಗಲೇ ಟಿಕೆಟ್ ಗಿಟ್ಟಿಸಿಕೊಂಡಿರುವ ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಅವರ ಪತ್ನಿ ಪರವಾಗಿ ರವೀಂದ್ರ ಜಡೇಜಾ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇನ್ನು ಕಾಂಗ್ರೆಸ್ ನಲ್ಲಿ ರವೀಂದ್ರ ಜಡೇಜಾ ಅವರ ತಂಗಿಯೂ ಇದ್ದಾರೆ.

Advertisement
Advertisement

ರವೀಂದ್ರ ಜಡೇಜಾ ಅವರು ಅಮಿತ್ ಶಾ ಜೊತೆಗೆ ಗುಜರಾತ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣಕ್ಕೆ ಕಾರಣವಾಗಿದೆ. ಗಾಯಾಳುವಾಗಿ ಟೀಂ ಇಂಡಿಯಾದಿಂದ ದೂರ ಉಳಿದಿದ್ದಾರೆ. ಆಲ್ ರೌಂಡರ್ ಅನ್ ಫಿಟ್ ಕಾರಣ ಹೇಳಿ ಹೊರಗುಳಿದಿದ್ದಾರೆ. ಆದ್ರೆ ಗುಜರಾತ್ ಚುನಾವಣೆಯ ಬಿಜೆಪಿ ಪಕ್ಷದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ರವೀಂದ್ರ ಜಡೇಜಾ ಏಷ್ಯಾಕಪ್ ನಲ್ಲಿ ಗಾಯಗೊಂಡಿದ್ದರು. ಹೀಗಾಗಿ ಠದಿಂದ ದೂರ ಉಳಿದಿದ್ದರು. ಬಳಿಕ ಚೇತರಿಕೆ ಕಂಡಿದ್ದ ಜಡೇಜಾ ಅವರನ್ನು ಬಾಂಗ್ಲಾದೇಶ ಸರಣಿಗೆ ಆಯ್ಕೆಯಾಗಿದ್ದರು. ಆದ್ರೆ ಅನ್ ಫಿಟ್ ಕಾರಣ ಹೇಳಿ ಜಡೇಜಾ ಅವರು ಆಟದಿಂದ ದೂರವೇ ಉಳಿದಿದ್ದರು. ಇದೀಗ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಕ್ರಿಕೆಟ್ ಪ್ರೇಮಿಗಳ ಕೋಪಕ್ಕೆ ಕಾರಣವಾಗಿದೆ.

Advertisement
Tags :
Advertisement