For the best experience, open
https://m.suddione.com
on your mobile browser.
Advertisement

ಟೀಂ ಇಂಡಿಯಾ ಬಗ್ಗೆ ಬೇಸರ ಮಾಡಿಕೊಂಡ ಕ್ರಿಕೆಟ್ ದೇವರು ಟ್ವೀಟ್ ಮಾಡಿ ಹೇಳಿದ್ದೇನು..?

01:20 PM Jun 12, 2023 IST | suddionenews
ಟೀಂ ಇಂಡಿಯಾ ಬಗ್ಗೆ ಬೇಸರ ಮಾಡಿಕೊಂಡ ಕ್ರಿಕೆಟ್ ದೇವರು ಟ್ವೀಟ್ ಮಾಡಿ ಹೇಳಿದ್ದೇನು
Advertisement

Advertisement
Advertisement

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡು ಮತ್ತಷ್ಟು ಜನರ ಆಸೆಗೆ ತಣ್ಣೀರು ಎರಚಿದ್ದಾರೆ. ಇದೀಗ ಈ ವಿಚಾರಕ್ಕೆ ಕ್ರಿಕೆಟ್ ದೇವರು ಬೇಸರ ಹೊರ ಹಾಕಿ, ಟ್ವೀಟ್ ಮಾಡಿದ್ದಾರೆ. ಅಶ್ವಿನ್ ವಿಶ್ವ ಟೆಸ್ಟ್ ರ್ಯಾಂಕಿಂಗ್ ನಲ್ಲಿ ನಂಬರ್ ಒನ್ ಬೌಲರ್ ಆಗಿದ್ದಾರೆ. ಅಶ್ವಿನ್ ನಂತಹ ಸ್ಪಿನ್ನರ್ ಗೆ ಅವಕಾಶ ನೀಡದಿರುವುದು ದೊಡ್ಡ ತಪ್ಪಾಗಿದೆ. ಆಸ್ಟ್ರೇಲಿಯಾದ ಬ್ಯಾಟಿಂಗ್ ನಲ್ಲಿ 5 ಎಡಗೈ ಆಟಗಾರರಿದ್ದರು. ಈ ವಿಚಾರವನ್ನು ಟೀಂ ಇಂಡಿಯಾ ಮರೆತಂತೆ ಇದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Advertisement

Advertisement
Advertisement

444 ರನ್ ಗಳ ಗುರಿ ಬೆನ್ನಟ್ಟುವುದು ಸುಲಭದ ಮಾತಲ್ಲ. ಆದರೆ ಭಾರತದ ಎರಡನೇ ಇನ್ನಿಂಗ್ಸ್ ಅನ್ನು ಅದ್ಭುತವಾಗಿ ಆರಂಭಿಸಿತ್ತು. ಕೊನೆ ದಿನ 280 ರನ್ ಗಳಿಸಬೇಕಿತ್ತು. ಕೊಹ್ಲಿ, ರಹಾನೆ, ಜಡೇಜಾ ಅವರಂತಹ ಬ್ಯಾಟ್ಸ್ ಮನ್ ಗಳಿದ್ದರೆ ಭಾರತ ಗೆದ್ದು ಇತಿಹಾಸ ಬರೆಯಲಿದೆ ಎಂದು ಎಲ್ಲರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅದೆಲ್ಲವೂ ಉಲ್ಟಾ ಆಗಿತ್ತು.

ವಿಶ್ವ ಟೆಸ್ಟ್ ಚಾಂಪಿಯನ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋತಿದ್ದಕ್ಕೆ ಎಲ್ಲರೂ ಬೇಸರ ಪಟ್ಟುಕೊಂಡಿದ್ದಾರೆ. 2021ರಲ್ಲಿ ಮೊದಲ ಬಾರಿಗೆ ನಡೆದ ವಿಶ್ವ ಟೆಸ್ಟ್ ಚಾಂಪೊಯನ್ ಶಿಪ್ ನ ಫೈನಲ್‌ನಲ್ಲಿ ಭಾರತ ಕಿವೀಸ್ ವಿರುದ್ಧ ಸೋತಿತ್ತು.

Advertisement
Tags :
Advertisement