For the best experience, open
https://m.suddione.com
on your mobile browser.
Advertisement

ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಜಯ : ವಿಶ್ವಕಪ್‌ನಲ್ಲಿ ಮುಂದುವರೆದ ಗೆಲುವಿನ ನಾಗಾಲೋಟ

08:45 PM Oct 14, 2023 IST | suddionenews
ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಜಯ   ವಿಶ್ವಕಪ್‌ನಲ್ಲಿ ಮುಂದುವರೆದ ಗೆಲುವಿನ ನಾಗಾಲೋಟ
Advertisement

ಸುದ್ದಿಒನ್ : ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾದ ಜೈತ್ರ ಯಾತ್ರೆ ಮುಂದುವರೆದಿದೆ. ಇಂದಿನ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಆಡಿದ 7 ಏಕದಿನ ವಿಶ್ವಕಪ್ ಪಂದ್ಯಗಳನ್ನು ಭಾರತ ಗೆದ್ದುಕೊಂಡಿದೆ.ಇಂದು ಕೂಡ ಅದೇ ಫಲಿತಾಂಶವನ್ನು ಪುನರಾವರ್ತನೆಯಾಗಿದೆ.

Advertisement

8-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಲ್ ರೌಂಡ್ ಪ್ರದರ್ಶನ ನೀಡಿ ಪಾಕಿಸ್ತಾನವನ್ನು ಮಣಿಸಿತು. ಮೊದಲಿಗೆ ಬೌಲಿಂಗ್ ನಲ್ಲಿ ಬಿಗಿಯಾಗಿದ್ದ ಟೀಂ ಇಂಡಿಯಾ ಟಿ20 ಶೈಲಿಯ ಆಟದೊಂದಿಗೆ ಬ್ಯಾಟಿಂಗ್ ನಲ್ಲಿ ಸಿಡಿದೆದ್ದಿತು. ಈ ಮೂಲಕ 2023 ರ ODI ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಜಯಗಳನ್ನು ದಾಖಲಿಸಿದೆ.
ನಾಯಕ ರೋಹಿತ್ ಶರ್ಮಾ (86) ಮತ್ತೊಮ್ಮೆ ಅಬ್ಬರದ ಆಟವಾಡಿದ ಪಾಕಿಸ್ತಾನ 30.3 ಓವರ್ ಗಳಲ್ಲಿ 192 ರನ್ ಗಳ ಗುರಿ ಬೆನ್ನಟ್ಟಿತು. ಭಾರತದ ವೇಗಿ ಜಸ್ಪ್ರೀತ್ ಬುಮ್ರಾ 'ಪಂದ್ಯದ ಆಟಗಾರ' ಪ್ರಶಸ್ತಿ ಪಡೆದರು.

Advertisement

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನಕ್ಕೆ ಕನಿಷ್ಠ 50 ಓವರ್‌ಗಳನ್ನು ಸಂಪೂರ್ಣವಾಗಿ ಆಡಲು ಸಾಧ್ಯವಾಗಲಿಲ್ಲ. ಭಾರತದ ಬೌಲರ್‌ಗಳು 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಕುಸಿದರು. ಒಂದು ಹಂತದಲ್ಲಿ ಬಲಿಷ್ಠ ಸ್ಥಿತಿಯಲ್ಲಿದ್ದ ಪಾಕಿಸ್ತಾನ ಒತ್ತಡಕ್ಕೆ ಮಣಿದು ಮೇಲಿಂದ ಮೇಲೆ ವಿಕೆಟ್ ಒಪ್ಪಿಸಿತು. ಕೇವಲ 36 ರನ್ ಸೇರಿಸುವಷ್ಟರಲ್ಲಿ ಕೊನೆಯ 8 ವಿಕೆಟ್ ಕಳೆದುಕೊಂಡಿತು.  ತಂಡದ ಬ್ಯಾಟ್ಸ್‌ಮನ್‌ಗಳ ಪೈಕಿ ಬಾಬರ್ ಅಜಮ್ ಮಾತ್ರ ಅರ್ಧಶತಕ ಗಳಿಸಿದರು. ಐದು ಬ್ಯಾಟರ್‌ಗಳನ್ನು ಒಂದೇ ಅಂಕೆಗೆ ಸೀಮಿತಗೊಳಿಸಲಾಯಿತು. ಇದರಿಂದಾಗಿ ಪಾಕಿಸ್ತಾನ 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಆಲೌಟಾಯಿತು. ಟೀಂ ಇಂಡಿಯಾದ ಬೌಲರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರು.

Advertisement

ಬಳಿಕ ನಿಗಧಿತ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ಪಾಕ್ ಬೌಲರ್ ಗಳನ್ನು ಚೆಂಡಾಡಿದರು. ಆರಂಭಿಕ ಆಟಗಾರ ಶುಭಮನ್ ಗಿಲ್ ಜ್ವರದಿಂದಾಗಿ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಆದರೆ ಈ ಪಂದ್ಯದಲ್ಲಿ ದೊಡ್ಡ ಸ್ಕೋರ್ ಮಾಡಲು ‌ಅವರಿಗೆ ಸಾಧ್ಯವಾಗಲಿಲ್ಲ. 16 ರನ್ ಗಳಿಸಿ ಔಟಾದರು. ನಂತರ ವಿರಾಟ್ ಕೊಹ್ಲಿ (16) ಕೂಡ ಬೇಗನೆ ಔಟಾದರು.

Advertisement

ಆದರೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲೂ ತಮ್ಮ ಅಬ್ಬರ ಮುಂದುವರಿಸಿದ್ದರು. ಟಿ20ಯಂತೆ ಬ್ಯಾಟಿಂಗ್ ಮಾಡಿದ ಅವರು ಎಲ್ಲೆಂದರಲ್ಲಿ ಬೌಂಡರಿ, ಸಿಕ್ಸರ್ ಬಾರಿಸಿದರು. ಆದರೆ ಅದಾಗಲೇ 6 ಸಿಕ್ಸರ್ ಹಾಗೂ 6 ಬೌಂಡರಿ ಬಾರಿಸಿದ್ದ ರೋಹಿತ್ ಶರ್ಮಾ ಶಾಟ್ ಆಡುವಾಗ ಕ್ಯಾಚ್ ಔಟ್ ಆದರು. ಇದರೊಂದಿಗೆ ಶತಕಕ್ಕೆ ಇನ್ನೂ 14 ರನ್ ಗಳಿಸುವ ಮುನ್ನವೇ ಹತಾಶರಾಗಿ ಪೆವಿಲಿಯನ್ ತಲುಪಿದರು. ಆದರೆ ಶ್ರೇಯಸ್ ಅಯ್ಯರ್ (53) ಮತ್ತು ಕೆಎಲ್ ರಾಹುಲ್ (19) ರನ್ ಗಳಿಸುವ ಮೂಲಕ ಆಟವನ್ನು ಪೂರ್ಣಗೊಳಿಸಿದರು.

ಈ ಪಂದ್ಯದ ಗೆಲುವಿನೊಂದಿಗೆ ಭಾರತ ಏಕದಿನ ವಿಶ್ವಕಪ್ 2023 ರಲ್ಲಿ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ. ಇದರೊಂದಿಗೆ ಈ ಮೆಗಾ ಟೂರ್ನಿಯಲ್ಲಿ ಆಡಿದ ಎಲ್ಲ 3 ಪಂದ್ಯಗಳನ್ನು ಗೆದ್ದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ನ್ಯೂಜಿಲೆಂಡ್ ತಂಡ ಈಗಾಗಲೇ ಸತತ 3 ಪಂದ್ಯಗಳನ್ನು ಗೆದ್ದಿದೆ.

ಭಾರತ ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಅಕ್ಟೋಬರ್ 19 ರಂದು ಎದುರಿಸಲಿದೆ. ಈ ಪಂದ್ಯ ಪುಣೆಯಲ್ಲಿ ನಡೆಯಲಿದೆ.

Advertisement
Tags :
Advertisement