For the best experience, open
https://m.suddione.com
on your mobile browser.
Advertisement

ನಾಳೆ IPL 2023ಕ್ಕೆ ಅದ್ದೂರಿ ತೆರೆ : ಹೇಗಿದೆ ತಯಾರಿ..?

01:10 PM May 27, 2023 IST | suddionenews
ನಾಳೆ ipl 2023ಕ್ಕೆ ಅದ್ದೂರಿ ತೆರೆ   ಹೇಗಿದೆ ತಯಾರಿ
Advertisement

Advertisement

Advertisement

ಈ ಬಾರಿಯಾದರೂ ಕಪ್ ನಮ್ಮದೆ ಅಂತ ಆರ್ಸಿಬಿ ಅಭಿಮಾನಿಗಳು ಸಾಕಷ್ಟು ಕನಸು ಕಂಡಿದ್ದರು. ಆದರೆ ಅದು ನನಸಾಗಲಿಲ್ಲ. 16ನೇ ಆವೃತ್ತಿ ಮುಕ್ತಾಯವಾಗುತ್ತಿದೆ. ನಾಳೆ ಕಡೆಯ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ. ಅದಕ್ಕೂ ಮುನ್ನ ಸಮಾರೋಪ ಸಮಾರಂಭ ಅದ್ದೂರಿಯಾಗಿ ನೆರವೇರಲಿದೆ.

Advertisement

ಐಪಿಎಲ್ ಮುಕ್ತಾಯಕ್ಕೆ ಇನ್ನು ಉಳಿದಿರುವುದು ಒಂದೇ ಪಂದ್ಯ. ಮೇ 28 ಅಂದ್ರೆ ನಾಳೆ ಭಾನುವಾರ ಕೊನೆಯ ಮ್ಯಾಚ್ ನಡೆಯಲಿದೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಹಾಗೂ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. ಈ ರೋಚಕ ಪಂದ್ಯ ನೋಡಲು ಇಡೀ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ‌.

Advertisement
Advertisement

ಫೈನಲ್ ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭ ನೆರವೇರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತೀರ್ಮಾನ ಮಾಡಿದೆ. ಅದ್ದೂರಿಯಾಗಿ ಸಮಾರೋಪ ಸಮಾರಂಭ ಮಾಡಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ ಖ್ಯಾತ ರ್ಯಾಪರ್ ಗಳು ಪ್ರದರ್ಶನ ನೀಡಲಿದ್ದಾರೆ. ಕಿಂಗ್ ಮತ್ತು ಡಿಜೆ ನ್ಯೂಕ್ಲೀಯಾ ಶೋ ನೀಡಲಿದ್ದಾರೆ. ಜೊತೆಗೆ ಡಿವೈನ್ ಅಂಡ್ ಜೋನಿತಾ ಗಾಂಧಿ ಮಿಡ್ ಟೈಮ್ ಶೋನಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

Tags :
Advertisement