Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ | ಕಪ್ ಗೆದ್ದು ಕನ್ನಡಿಗರ ಕನಸು ನನಸು ಮಾಡಿದ RCB ಮಹಿಳಾ ತಂಡ

08:27 AM Mar 18, 2024 IST | suddionenews
Advertisement

Advertisement

 

ಸುದ್ದಿಒನ್ : 2008ರಿಂದ ಈ ಸಲದ ಕಪ್ ನಮ್ಮದೇ ಎಂದು ಹೇಳುತ್ತಿದ್ದ 'ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ' ಕೊನೆಗೂ ಪ್ರಶಸ್ತಿ ಗೆದ್ದುಕೊಂಡಿದೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇತಿಹಾಸ ನಿರ್ಮಿಸಿದೆ. 

Advertisement

WPL 2024 ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದರು. ಈ ಪಂದ್ಯದಲ್ಲಿ ಡೆಲ್ಲಿ ತಂಡವನ್ನು 113 ರನ್‌ಗಳಿಗೆ ಸೀಮಿತಗೊಳಿಸಿದ ಬೆಂಗಳೂರು ನಂತರ ಗುರಿಯನ್ನು ತಲುಪಿತು. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖಾತೆಗೆ ಮೊದಲ ಪ್ರಶಸ್ತಿ ಸೇರ್ಪಡೆಗೊಂಡಿತು.

ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಒಂದು ಹಂತದಲ್ಲಿ ಆರಂಭದಲ್ಲಿ 64/0. ಆದರೆ ಬೃಹತ್ ಸ್ಕೋರ್ ಮಾಡುವ ನಿರೀಕ್ಷೆಯಲ್ಲಿದ್ದ ಡೆಲ್ಲಿ ಅನಿರೀಕ್ಷಿತವಾಗಿ RCB ಆಟಗಾರರ ಬೌಲಿಂಗ್ ದಾಳಿಗೆ ತತ್ತರಿಸಿತು. ಸತತ ವಿಕೆಟ್‌ಗಳನ್ನು ಕಳೆದುಕೊಂಡ ಅವರಿಗೆ ಕನಿಷ್ಠ ಪೂರ್ಣ ಪ್ರಮಾಣದ ಬ್ಯಾಟಿಂಗ್‌ ಮಾಡಲು ಸಾಧ್ಯವಾಗಲಿಲ್ಲ. 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು.
ಆರ್‌ಸಿಬಿ ಬೌಲರ್‌ಗಳ ಪೈಕಿ ಮೊಲಿನೆಕ್ಸ್, ಶ್ರೇಯಾಂಕಾ ಪಾಟೀಲ್ 3 ವಿಕೆಟ್ ಹಾಗೂ ಆಶಾ ಶೋಭನಾ 2 ವಿಕೆಟ್ ಪಡೆದರು.

ಆ ಬಳಿಕ ಅಲ್ಪ ಗುರಿಯೊಂದಿಗೆ ಕಣಕ್ಕೆ ಇಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರೀಕ್ಷೆಯಂತೆಯೇ ಬ್ಯಾಟಿಂಗ್ ಮಾಡಿತು. ಅಗತ್ಯವಿರುವ ರನ್‌ಗಳು ಕಡಿಮೆಯಾಗಿದ್ದರಿಂದ, ಬ್ಯಾಟ್ಸ್‌ಮನ್‌ಗಳು ನಿಗಧಿತ ಗುರಿಯನ್ನು ಅಂತಿಮವಾಗಿ 19.3 ಓವರ್ ಗಳಲ್ಲಿ ಆರ್ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳಾದ ಸ್ಮೃತಿ ಮಂಧಾನ (31), ಸೋಫಿ ಡಿವೈನ್ (32), ಎಲಿಸ್ ಪೆರ್ರಿ 35 ಮತ್ತು ರಿಚಾ ಘೋಷ್ ಔಟಾಗದೆ 17 ರನ್ ಗಳಿಸಿ ಮಿಂಚಿದರು.

ಏತನ್ಮಧ್ಯೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಇದು ಮೊದಲ ಪ್ರಶಸ್ತಿಯಾಗಿದೆ ಎಂಬುದು ಗಮನಾರ್ಹ. 2008ರಿಂದ ಐಪಿಎಲ್‌ನಲ್ಲಿ ಆಡುತ್ತಿದ್ದರೂ ಒಮ್ಮೆಯೂ ತಂಡ ಟ್ರೋಫಿ ಗೆದ್ದಿಲ್ಲ. ಮೂರು ಬಾರಿ ಫೈನಲ್‌ನಲ್ಲಿ ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟರು. ಕಳೆದ ವರ್ಷವೇ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಿತ್ತು.. ಆರ್‌ಸಿಬಿ ಪ್ಲೇ-ಆಫ್ ತಲುಪದೆ ನಿರ್ಗಮಿಸಿತು. ಆದರೆ ಈ ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಕನ್ನಡಿಗರ ಬಹುದಿನಗಳ ಕನಸನ್ನು ನನಸು ಮಾಡಿದ್ದಾರೆ.

Advertisement
Tags :
bengaluruchitradurgacupDreamrcbsuddionesuddione newsteamwinningwomenWomen's Premier Leagueಕನಸುಕಪ್ಚಿತ್ರದುರ್ಗಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ನನಸುಬೆಂಗಳೂರುಮಹಿಳಾ ತಂಡಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article