For the best experience, open
https://m.suddione.com
on your mobile browser.
Advertisement

ತೆಂಡೂಲ್ಕರ್ ಫೋಟೋ ನೋಡಿ ತಿಂಡಿಪೋತ ಅಂತಿದ್ದಾರೆ ಅಭಿಮಾನಿಗಳು

08:26 PM Dec 01, 2022 IST | suddionenews
ತೆಂಡೂಲ್ಕರ್ ಫೋಟೋ ನೋಡಿ ತಿಂಡಿಪೋತ ಅಂತಿದ್ದಾರೆ ಅಭಿಮಾನಿಗಳು
Advertisement

Advertisement
Advertisement

Advertisement

ಕ್ರಿಕೆಟ್ ಪ್ರೇಮಿಗಳ ಆರಾಧ್ಯದೈವ ಸಚಿನ್ ತೆಂಡೂಲ್ಕರ್. ಅವರು ಫೀಲ್ಡ್ ಗೆ ಇಳಿದ್ರು ಅಂದ್ರೆ ಅದೆಷ್ಟೋ ಬೌಲರ್ ಗಳ ನಿದ್ದೆ ಕೆಡುತ್ತಿತ್ತು. ಕ್ರಿಕೆಟ್ ಗೆ ವಿದಾಯ ಘೋಷಿಸಿ 9 ವರ್ಷಗಳೇ ಕಳೆದಿದೆ. ಆದರೂ ಅವರ ಚಾರ್ಮಿಂಗ್ ಮಾತ್ರ ಕಡಿಮೆಯಾಗಿಲ್ಲ. ಸಚಿನ್ ಎಂದರೆ ಈಗಲೂ ಯುವ ಆಟಗಾರರಂತೆಯೇ ಕಾಣುತ್ತಾರೆ.

Advertisement

ಸಚಿನ್ ತೆಂಡೂಲ್ಕರ್ ಮಾಸ್ಟರ್ ಬ್ಲಾಸ್ಟರ್ ದಾಖಲೆಗಳ ಸರದಾರರಾಗಿದ್ದಾರೆ. ಹಲವು ಹೆಸರುಗಳಿಂದಾನೇ ಕರೆಸಲ್ಪಡುವ ಸಚಿನ್ ತೆಂಡೂಲ್ಕರ್ ಅವರನ್ನು ಅಭಿಮಾನಿಗಳು ತಿಂಡಿಪೋತ ಎಂದು ರೇಗಿಸುತ್ತಿದ್ದಾರೆ. ಅದಕ್ಕೆ ಆದಂತ ಸ್ಪೆಷಲ್ ಕಾರಣ ಇದೆ.

ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಮೈದಾನದಿಂದ ದೂರ ಉಳಿದ ಬಳಿಕ ಜನರ ನಡುವೆ ಓಡಾಡುತ್ತಾ, ಅಲ್ಲಿ ಇಲ್ಲಿ ರೋಡ್ ಸೈಡ್ ನಲ್ಲೂ ತಿನ್ನುತ್ತಾ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಇದೀಗ ಹೊಸ ಅವತಾರವೆತ್ತಿದ್ದುಯ, ಚೆಫ್ ಆಗಿ ಕಾಣಿಸಿಕೊಂಡಿದ್ದಾರೆ. ಅಡುಗೆ ಮನೆಗೆ ಎಂಟ್ರಿ ಕೊಟ್ಟು ಅಡುಗೆಯನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.

ಹಾಗಂತ ಸಚಿನ್ ಅವರು ಬರೀ ಅಡುಗೆ ಮನೆಯಲ್ಲಿಯ ಮಾತ್ರ ಅಡುಗೆ ಮಾಡುತ್ತಾರೆ ಎಂದುಕೊಳ್ಳಬೇಡ. ಜಾಗ ಯಾವುದೇ ಇರಲಿ, ಅಡುಗೆ ಇಷ್ಟವಾಗಿಲ್ಲ ಅಂದ್ರೆ ಅಲ್ಲಿಯೂ ಹೋಗಿ ಅಡುಗೆ ಮಾಡಿ ತಿನ್ನುತ್ತಾರೆ. ತನಗಿಷ್ಟವಾದದ್ದನ್ನು ತಿನ್ನುತ್ತಾ ಇರುತ್ತಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ತಿಂಡಿಪೋತ ಎನ್ನುತ್ತಿದ್ದಾರೆ.

Advertisement
Tags :
Advertisement