Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿಂದ IPL ರದ್ದಾಗುತ್ತಾ ?

09:31 PM Mar 10, 2024 IST | suddionenews
Advertisement

 

Advertisement

ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಇಂಡಿಯನ್ ಪ್ರಿಮಿಯರ್ ಲೀಗ್ 2024 ಗೆ ದಿನಗಣನೆ ಶುರುವಾಗಿದೆ. ಮಾರ್ಚ್ 22ಕ್ಕೆ ಅದ್ದೂರಿಯಾಗಿ ಐಪಿಎಲ್ ಗೆ ಚಾಲನೆ ಸಿಗಲಿದೆ. ಆರಂಭದಲ್ಲಿಯೇ ಆರ್ಸಿಬಿ ಹಾಗೂ ಸಿಎಸ್ ಕೆ ನಡುವೆ ಪಂದ್ಯಗಳು ಆರಂಭವಾಗಲಿವೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾದ ಅಭಿಯಾನ ನೋಡಿದರೆ ಬೆಂಗಳೂರಿನಲ್ಲಿ ಮ್ಯಾಚ್ ಗಳು ನಡೆಯುವುದು ಅನುಮಾನವಾಗಿದೆ.

ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ಜೋರಾಗಿಯೆರ ಸುಡುತ್ತಿದೆ. ಅದರಲ್ಲೂ ನಗರದ ಕೆಲವೆಡೆ ನೀರಿಗೆ ಹಾಹಾಕಾರ ಶುರುವಾಗಿದೆ. ಈಗಾಗಲೇ ಟ್ಯಾಂಕರ್ ಗಳ ಮೂಲಕ ಕುಡಿಯಲು ನೀರು ಸರಬರಾಜು ಮಾಡಲಾಗುತ್ತಿದೆ. ಈ ನೀರಿನ ಸಮಸ್ಯೆಯಿಂದಾನೇ ಬೆಂಗಳೂರಿನಲ್ಲಿ ಮ್ಯಾಚ್ ಗಳು ರದ್ದಾಗುವ ಸಾಧ್ಯತೆ ಇದೆ.

Advertisement

ಐಪಿಎಲ್ ಪಂದ್ಯದ ವೇಳೆ ಬಾರೀ ಪ್ರಮಾಣದ ನೀರಿನ ಬಳಕೆ ಮಾಡಲಾಗುತ್ತದೆ. ಈಗಲೇ ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ಹೀಗಿರುವಾಗ ಪಂದ್ಯಕ್ಕೆ ಹೆಚ್ಚು ನೀರನ್ನು ಒದಗಿಸುವುದಾದರೂ ಹೇಗೆ ಎಂಬುದನ್ನು ಅರಿತ ನಾಗರಿಕರು, ಸ್ಥಳಿಯರು ಟ್ವಿಟ್ಟರ್ ನಲ್ಲಿ ಅಭಿಯಾನ ಶುರು ಮಾಡಿದ್ದಾರೆ. #cancelipl ಎಂದು ಟ್ವಿಟ್ಟರ್ ನಲ್ಲಿ ಹ್ಯಾಶ್ ಟ್ಯಾಗದ ಬಳಕೆ ಮಾಡಿ ಪೋಸ್ಟ್ ಗಳನ್ನು ಹಾಕಲಾಗುತ್ತಿದೆ. ಟ್ವಿಟ್ಟರ್ ನಲ್ಲಿ ಈ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿ ಇದೆ.

ಮಾರ್ಚ್ 29ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2024ರ ಐಪಿಎಲ್‌ನ ಮೊದಲ ಪಂದ್ಯ ನಡೆಯಲಿದ್ದು, ಬಿಸಿಸಿಐ ತಮ್ಮ ಮನವಿಗೆ ಮಣಿದು ನೀರಿನ ಕೊರತೆಯಿಲ್ಲದ ರಾಜ್ಯಕ್ಕೆ ಪಂದ್ಯಗಳನ್ನು ಸ್ಥಳಾಂತರಿಸಬೇಕೆಂದು ನಾಗರಿಕರು ಮತ್ತು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ನೀರಿನ ಬಿಕ್ಕಟ್ಟನಿಂದಾಗಿ ಈ ಬಾರಿ ಬೆಂಗಳೂರಿನಲ್ಲಿ ಐಪಿಎಲ್ ನಡೆಯುವುದಿಲ್ಲ ಎಂಬ ಬೇಸರ ಕ್ರಿಕೆಟ್ ಪ್ರಿಯರಲ್ಲಿ ಕಾಡುತ್ತಿದೆ.

Advertisement
Tags :
bengalurucanceledchitradurgaIplsuddionesuddione newswater problemಚಿತ್ರದುರ್ಗನೀರಿನ ಸಮಸ್ಯೆಬೆಂಗಳೂರುರದ್ದುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article