For the best experience, open
https://m.suddione.com
on your mobile browser.
Advertisement

David Warner : ಐಪಿಎಲ್ ನಲ್ಲಿ ಇತಿಹಾಸ ಸೃಷ್ಟಿಸಿದ ವಾರ್ನರ್...!

11:59 AM Apr 21, 2023 IST | suddionenews
david warner   ಐಪಿಎಲ್ ನಲ್ಲಿ ಇತಿಹಾಸ ಸೃಷ್ಟಿಸಿದ ವಾರ್ನರ್
Advertisement

Advertisement
Advertisement

ಸುದ್ದಿಒನ್ ಡೆಸ್ಕ್

Advertisement

IPL 2023 ರಲ್ಲಿ ದೆಹಲಿ ಕ್ಯಾಪಿಟಲ್ಸ್ ಖಾತೆ ತೆರೆದಿದೆ. ಅನುಭವಿ ಆಟಗಾರರಾದ ಇಶಾಂತ್ ಶರ್ಮಾ ಮತ್ತು ಡೇವಿಡ್ ವಾರ್ನರ್ ಮಿಂಚುವುದರೊಂದಿಗೆ ಅವರು ಕೋಲ್ಕತ್ತಾ ವಿರುದ್ಧ ಗೆದ್ದಿದ್ದಾರೆ.

Advertisement
Advertisement

ಸತತ ಐದು ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ಈ ಗೆಲುವಿನೊಂದಿಗೆ ಐಪಿಎಲ್ ಪಾಯಿಂಟ್ಸ್ ಪಟ್ಟಿಯಲ್ಲಿ ಖಾತೆ ತೆರೆದಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಡೆಲ್ಲಿ ಬೌಲರ್‌ಗಳು ಕೋಲ್ಕತ್ತಾ ತಂಡವನ್ನು 127 ರನ್‌ಗಳಿಗೆ ಸೀಮಿತಗೊಳಿಸಿದರು. ಇಶಾಂತ್ ಶರ್ಮಾ 4 ಓವರ್‌ಗಳಲ್ಲಿ ಕೇವಲ 19 ರನ್ ನೀಡಿ 2 ವಿಕೆಟ್ ಪಡೆದರು. ನೋಕಿಯಾ, ಅಕ್ಷರ್ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು.

ಕೋಲ್ಕತ್ತಾ ಪರ ಬ್ಯಾಟಿಂಗ್ ಮಾಡಿದ ಜೇಸನ್ ರಾಯ್ 43 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.ಆಂಡ್ರೆ ರಸೆಲ್ 38 ರನ್ ಗಳಿಸಿ ಅಜೇಯರಾಗಿ ಉಳಿದರು.
ಇವರಿಬ್ಬರನ್ನು ಹೊರತುಪಡಿಸಿ ಉಳಿದವರು ಕಡಿಮೆ ಸ್ಕೋರ್ ಗೇ ಸೀಮಿತರಾದರು.ಈ ಮೂಲಕ ಕೋಲ್ಕತ್ತಾ ಈ ಆವೃತ್ತಿಯಲ್ಲಿ ಅತಿ ಕಡಿಮೆ ಸ್ಕೋರ್ ಗಳಿಸಿದ ತಂಡವಾಯಿತು.

ಅಲ್ಪ ಗುರಿಯೊಂದಿಗೆ ಕಣಕ್ಕೆ ಇಳಿದ ಡೆಲ್ಲಿ 19.2 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ನಾಯಕ ಡೇವಿಡ್ ವಾರ್ನರ್ (41 ಎಸೆತಗಳಲ್ಲಿ 57) ಡೆಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಆವೃತ್ತಿಯಲ್ಲಿ ಇದು ವಾರ್ನರ್ ಅವರ ನಾಲ್ಕನೇ ಅರ್ಧಶತಕ ಎಂಬುದು ಗಮನಾರ್ಹ.  ಮೊದಲ ಐದು ಪಂದ್ಯಗಳಲ್ಲಿ ನಿಧಾನಗತಿಯಲ್ಲಿ ಆಡಿದ ವಾರ್ನರ್ ಈ ಪಂದ್ಯದಲ್ಲಿ ತಮ್ಮದೇ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು. ಕೋಲ್ಕತ್ತಾ ಬೌಲರ್‌ಗಳ ಬೆವರಿಳಿಸಿದರು.  ಡೇವಿಡ್ 33 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದರು. ಈ ಪಂದ್ಯದಲ್ಲಿ 11 ಬೌಂಡರಿ ಬಾರಿಸಿದ್ದು ಗಮನಾರ್ಹ. ಕೆಳ ಕ್ರಮಾಂಕದ ವೈಫಲ್ಯದ ನಡುವೆಯೂ ವಾರ್ನರ್ ಅರ್ಧಶತಕ ಗಳಿಸಿ ಡೆಲ್ಲಿ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು. ಕಳೆದ ಆವೃತ್ತಿಯಲ್ಲಿ 432 ರನ್ ಗಳಿಸಿದ್ದ ವಾರ್ನರ್ ಈ ಆವೃತ್ತಿಯಲ್ಲಿ ಈಗಾಗಲೇ 285 ರನ್ ಗಳಿಸಿದ್ದಾರೆ. ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಾರ್ನರ್ ಡುಪ್ಲೆಸಿಸ್ (343 ರನ್) ಹಿಂದೆ ಇದ್ದಾರೆ.

ಈ ಪಂದ್ಯವನ್ನು ಗೆದ್ದಿದ್ದಲ್ಲದೆ, ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರನ್ನು ಹಿಂದಕ್ಕೆ ತಳ್ಳುವ ಮೂಲಕ ವಾರ್ನರ್ ಹೊಸ ದಾಖಲೆ ನಿರ್ಮಿಸಿದರು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 1075 ರನ್ ಗಳಿಸುವ ಮೂಲಕ ವಾರ್ನರ್ ಐಪಿಎಲ್‌ನಲ್ಲಿ ತಂಡವೊಂದರ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

ಕೋಲ್ಕತ್ತಾ ವಿರುದ್ಧ ರೋಹಿತ್ ಶರ್ಮಾ (1040 ರನ್) ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶಿಖರ್ ಧವನ್ (1029 ರನ್) ನಿರ್ಮಿಸಿದ ದಾಖಲೆಗಳನ್ನು ಮುರಿದರು.
ಪಂಜಾಬ್ ಕಿಂಗ್ಸ್ ವಿರುದ್ಧ ವಾರ್ನರ್ (1005) ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವುದು ಗಮನಾರ್ಹ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 985 ರನ್ ಗಳಿಸಿದ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

Advertisement
Tags :
Advertisement