For the best experience, open
https://m.suddione.com
on your mobile browser.
Advertisement

RCB ಅನ್ ಬಾಕ್ಸ್ ಗೆ ಕ್ಷಣ ಗಣನೆ : ಯಾರೆಲ್ಲಾ ಗೆಸ್ಟ್ ಗಳು ಬರ್ತಿದ್ದಾರೆ..?

06:08 PM Mar 19, 2024 IST | suddionenews
rcb ಅನ್ ಬಾಕ್ಸ್ ಗೆ ಕ್ಷಣ ಗಣನೆ   ಯಾರೆಲ್ಲಾ ಗೆಸ್ಟ್ ಗಳು ಬರ್ತಿದ್ದಾರೆ
Advertisement

ಬೆಂಗಳೂರು: ಈ ಸಲ ಕಪ್ ಗೆಲ್ಲು ಉತ್ಸಾಹದಲ್ಲಿದ್ದಾರೆ ಆರ್ಸಿಬಿ ಅಭಿಮಾನಿಗಳು. ಈಗಾಗಲೇ ಮಹಿಳಾ ಅಭಿಮಾನಿಗಳು ಕಪ್ ಗೆದ್ದು ಸಂಭ್ರಮಿಸಿದ್ದಾರೆ. ಐಪಿಎಲ್ ನಲ್ಲೂ ಆರ್ಸಿಬಿ ಕಪ್ ಗೆಲ್ಲುವು ಭರವಸೆ ಇದೆ. ಅದಕ್ಕೆ ಮುನ್ನವಾಗಿ ಮೊದಲು ಹೆಸರು ಬದಲಾವಣೆ ಮಾಡಲಿದ್ದಾರೆ. RCB ಅನ್ ಬಾಕ್ಸ್ ಗೆ ಕ್ಷಣಗಣನೆ ಶುರುವಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ಸವ ಶುರುವಾಗಿದೆ. ಈ ಅನ್ ಬಾಕ್ಸ್ ಮಾಡಲು ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳು ಕೂಡ ಬರ್ತಿದ್ದಾರೆ.

Advertisement
Advertisement

ಅನ್ ಬಾಕ್ಸ್ ಈವೆಂಟ್ ಈಗಾಗಲೇ ಶುರುವಾಗಿದ್ದು, ಜನರ ದಂಡು ಹರಿದು ಬರುತ್ತಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿದ್ದು, ಅಭಿಮಾನಿಗಳಿಂದಾನೇ ಚಿನ್ನಸ್ವಾಮಿ ಕ್ರೀಡಾಂಗಣ ತುಂಬಿ ತುಳುಕುತ್ತಿದೆ. ಅನ್ ಬಾಕ್ಸ್ ಈವೆಂಟ್ ನಲ್ಲಿ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.

Advertisement

ಇಂದಿನ ಈವೆಂಟ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರ್ ಹೆಸರು ಕೂಡ ಬದಲಾಗಲಿದೆ. ಬೆಂಗಳೂರ್ ಹೋಗಿ ಬೆಂಗಳೂರು ಆಗುವ ಸಾಧ್ಯತೆ ಇದೆ. ಆರ್ಸಿಬಿ ಪ್ರಾಂಚೈಸಿಯ ಜೆರ್ಸಿ ಕೂಡ ಬದಲಾವಣೆಯಾಗಲಿದೆ. ಅಲನ್ ವಾಕರ್, ರಘು ದೀಕ್ಷಿತ್, ನೀತಿ ಮೋಹನ್ ಬ್ರೋಧಾ, ವಿ. ಜೋರ್ಡಿಂಡಿಯನ್, ಬರ್ಫಿ ಕಚ್ಚೇರಿ ಅವರ ಕಾರ್ಯಕ್ರಮ ನಡೆಯಲಿದೆ. ನಟ ರಿಷಬ್ ಶೆಟ್ಟಿ, ಶಿವರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರು ಭಾಗಿಯಾಗಲಿದ್ದಾರೆ.

Advertisement
Advertisement

ಈ ಮೊದಲೇ ಅಶ್ವಿನಿ ಪುನೀತ್ ರಾಜ್‍ಕುಮಾರ್, ರಿಷಭ್ ಶೆಟ್ಟಿ, ಶಿವಣ್ಣ ಎಲ್ಲರೂ ಆರ್ಸಿಬಿ ಹೆಸರು ಬದಲಾವಣೆಯ ಬಗ್ಗೆ ಮಾತನಾಡಿದ್ದರು. ಯಾವ ರೀತಿ ಬದಲಾಗಬಹುದು ಎಂಬ ಪ್ರಶ್ನೆವೆ ಇಂದು ಉತ್ತರ ಸಿಗಲಿದೆ.

Advertisement
Tags :
Advertisement