For the best experience, open
https://m.suddione.com
on your mobile browser.
Advertisement

ಚಾಂಪಿಯನ್ ಟ್ರೋಫಿ-2025 : ಪಾಕಿಸ್ತಾನಕ್ಕೆ ಹೋಗ್ತಾರಾ ಇಲ್ವಾ ನಮ್ಮ ಟೀಂ ಇಂಡಿಯಾ ಆಟಗಾರರು..? ಇಲ್ಲಿದೆ ಮಾಹಿತಿ...!

01:11 PM Jul 11, 2024 IST | suddionenews
ಚಾಂಪಿಯನ್ ಟ್ರೋಫಿ 2025   ಪಾಕಿಸ್ತಾನಕ್ಕೆ ಹೋಗ್ತಾರಾ ಇಲ್ವಾ ನಮ್ಮ ಟೀಂ ಇಂಡಿಯಾ ಆಟಗಾರರು    ಇಲ್ಲಿದೆ ಮಾಹಿತಿ
Advertisement

Advertisement

ಚಾಂಪಿಯನ್ಸ್ 2025 ಟ್ರೋಫಿಯನ್ನು ಪಾಕಿಸ್ತಾನ ಆಯೋಜನೆ ಮಾಡಲಾಗಿದೆ. ಈ ಟೂರ್ನಿಯನ್ನು ಪಾಕಿಸ್ತಾನದಲ್ಲಿಯೇ ಆಯೋಜನೆ ಮಾಡಿದ್ದು, ಭಾರತೀಯ ತಂಡ ಪಾಕಿಸ್ತಾನಕ್ಕೆ ಹೋಗುತ್ತಾರಾ ಇಲ್ವಾ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಆದರೆ ವರದಿಯ ಪ್ರಕಾರ ಟೀಂ ಇಂಡಿಯಾ, ಪಾಕಿಸ್ತಾನಕ್ಕೆ ಹೋಗುತ್ತಿಲ್ಲ ಎನ್ನಲಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ಬಗ್ಗೆ ಐಸಿಸಿ ಜೊತೆಗೆ ಚರ್ಚೆ ಮಾಡಲಿದೆ‌. ಟೀಂ ಇಂಡಿಯಾದ ಮ್ಯಾಚ್ ಗಳು ದುಬೈ ಅಥವಾ ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆ ಇದೆ. ರಾಷ್ಟ್ರೀಯ ಮಾಧ್ಯಮಗಳ ಪ್ರಕಾರ ಭಾರತೀಯ ಆಟಗಾರರು ಪಾಕಿಸ್ತಾನಕ್ಕೆ ಹೋಗುವುದಕ್ಕೆ ಸಿದ್ದರಿಲ್ಲ ಎಂದು ವರದಿಯಾಗಿದೆ. ಆದರೂ ಈ ಬಗ್ಗೆ ಇನ್ನು ಮಾತುಕತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

Advertisement
Advertisement

ಕಳೆದ ವರ್ಷ ಏಕದಿನ ವಿಶ್ವಕಪ್ ಪಂದ್ಯಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಬಂದಿತ್ತು. ಹೀಗಾಗಿ ಭಾರತವೂ ಪಾಕಿಸ್ತಾನಕ್ಕೆ ಬರಬೇಕು ಎಂಬ ಮಾತುಗಳು ಚರ್ಚೆಯಲ್ಲಿವೆ. ಇದರ ನಡುವೆ ಪಾಕಿಸ್ತಾನ ಇತ್ತಿಚೆಗೆ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯನ್ನು ಐಸಿಸಿಗೆ ತಿಳಿಸಿತ್ತು. ಲಾಹೋರ್ ನಲ್ಲಿಯೇ ಪಂದ್ಯವನ್ನು ಆಯೋಜಿಸುವುದಕ್ಕೆ ಮುಂದಾಗಿತ್ತು. ಆ ಪಂದ್ಯ ಮಾರ್ಚ್ ನಲ್ಲೇ ನಡೆಯಬೇಕಿತ್ತು. ಆದರೆ ಭಾರತ ತಂಡ ಹೋಗದೆ ಇದ್ದ ಕಾರಣ ಪಂದ್ಯ ನಡೆಯಲಿಲ್ಲ.

ಈಗ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ. ಮೈದಾನದ ದುರಸ್ತಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದೆ. ಹಲವು ಟೀಂಗಳು ಈ ಚಾಂಪಿಯನ್ಸ್ ನಲ್ಲಿ ಸೆಣೆಸಾಡಲಿವೆ. ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ಎ ಗುಂಪಿನಲ್ಲಿವೆ. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಿ ಆಡುವುದು ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ. ಸದ್ಯದ ವರದಿಯ ಪ್ರಕಾರ ಅದು ಅಸಾಧ್ಯ ಎನ್ನಲಾಗಿದೆ.

Tags :
Advertisement