For the best experience, open
https://m.suddione.com
on your mobile browser.
Advertisement

RCB ಸೋಲಿಗೆ ಕಾರಣ ಯಾರೆಂದು ತಿಳಿಸಿದ ನಾಯಕ ಫಾಫ್..!

07:05 PM May 22, 2023 IST | suddionenews
rcb ಸೋಲಿಗೆ ಕಾರಣ ಯಾರೆಂದು ತಿಳಿಸಿದ ನಾಯಕ ಫಾಫ್
Advertisement

ಈ ಬಾರಿ ಕಪ್ ನಮ್ಮದೆ ಆಗಬಹುದು ಎಂಬ ಆಸೆಯಲ್ಲಿದ್ದರು ಆರ್ಸಿಬಿ ಫ್ಯಾನ್ಸ್. ನಿನ್ನೆಯ ಮ್ಯಾಚ್ ಒಂದನ್ನು ಗೆಲ್ಲಲೇಬೇಕಾಗಿತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆದ್ರೆ ಮಾಡು ಇಲ್ಲವೇ ಮಡಿ ಎಂಬ ಮ್ಯಾಚ್ ನಲ್ಲೂ ಆರ್ಸಿಬಿ ಹೀನಾಯವಾಗಿ ಸೋಲು ಅನುಭವಿಸಿತ್ತು. ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಅನುಭವಿಸಿ, ಪ್ಲೇ ಆಫ್ ಕನಸಿನಿಂದ ಹೊರ ಬಂದಿದೆ.

Advertisement

ತಮ್ಮ ಸೋಲಿನ ಬಗ್ಗೆ ಪರಮಾರ್ಶೆ ಮಾಡಿಕೊಂಡ ನಾಯಕ ಫಾಫ್, "ನಾವೂ ಉತ್ತಮ ತಂಡದೊಂದಿಗೆ ಕಣಕ್ಕೆ ಇಳಿದಿದ್ದೆವು. ಸೋಲು ನೋಡಿದ್ದಕ್ಕೆ ತುಂಬಾ ಬೇಸರವಾಗುತ್ತಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಒದ್ದೆ ಇತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಗ್ರಿಪ್ ಇರಲಿಲ್ಲ. ಹೀಗಾಗಿ ಪದೇ ಪದೇ ಬಾಲ್ ಚೇಂಜ್ ಮಾಡಬೇಕಾಯ್ತು.

Advertisement

ಆದರೆ ಕೊಹ್ಲಿ ಮಾತ್ರ ನಂಬಲು ಅಸಾಧ್ಯವಾದ ರೀತಿಯಲ್ಲಿ ಬ್ಯಾಟ್ ಮಾಡಲು ಶುರು ಮಾಡಿದರು. ಕೊಹ್ಲಿ ಬ್ಯಾಟಿಂಗ್ ನಿಂದೇನೋ ಉತ್ತಮ ಮೊತ್ತ ಕಲೆ ಹಾಕಿದೆವು. ಆದರೆ ಶುಭ್ಮನ್ ಗಿಲ್ ಬ್ಯಾಟ್ ನಿಂದಾಗಿ ನಾವೂ ಸೋತೆವು" ಎಂದಿದ್ದಾರೆ.

Advertisement

Advertisement
Advertisement
Tags :
Advertisement