Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮದುವೆ : ಹುಡುಗ ಯಾರು, ಐಪಿಎಲ್ ನಂಟೇಗೆ ಗೊತ್ತಾ..?

01:08 PM Dec 03, 2024 IST | suddionenews
Advertisement

 

Advertisement

 

ಒಲಂಪಿಕ್ ಪದಕ ವಿಜೇತೆ, ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ಹಿಸ ಬಾಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ಹೌ್ಉ ಅವರ ಮದುವೆ ಗೊತ್ತಾಗಿದೆ. ಇದೇ ತಿಂಗಳು ಅಂದ್ರೆ ಡಿಸೆಂಬರ್ 22ಕ್ಕೆ ಪಿವಿ ಸಿಂಧು ಮದುವೆಯಾಗುತ್ತಿದ್ದಾರೆ. ಹೈದ್ರಾಬಾದ್ ಮೂಲದ ಹುಡುಗನ ಜೊತೆಗೆ ಪಿವಿ ಸಿಂಧು ಹೊಸ ಬಾಳಿಗೆ ನಾಂದಿ ಹಾಡುತ್ತಿದ್ದಾರೆ. ಎರಡು ಕುಟುಂಬಸ್ಥರು ಒಪ್ಪಿ ಈ ಮದುವೆಯನ್ನು ಮಾಡುತ್ತಿದ್ದಾರೆ.

Advertisement

ಉದಯಪುರದಲ್ಲಿ ಈ ಮದುವೆ ನಡೆಯಲಿದೆ. ಐದು ದಿನಗಳ ಕಾಲ ಶಾಸ್ತ್ರ ಸಂಪ್ರದಾಯದಂತೆ ಮದುವೆಯ ನಡೆಯಲಿದೆ. ಬಳಿಕ ಹೈದ್ರಾಬಾದ್ ನಲ್ಲಿ ಆರತಕ್ಷತೆ ಏರ್ಪಡಿಸಿದ್ದಾರೆ. ಡಿಸೆಂಬರ್ 20 ರಿಂದ ಮದುವೆ ಕಾರ್ಯಕ್ರಮಗಳು ಶುರುವಾಗಲಿವೆ. ಸದ್ಯ ಪಿವಿ ಸಿಂಧು ಮದುವೆಯಾಗುತ್ತಿರುವ ಹುಡುಗನ ಮನೆಯವರಿಗೂ ಹಾಗೂ ಪಿವಿ ಸಿಂಧು ಮನೆಯವರಿಗೂ ಮೊದಲಿನಿಂದಲೂ ಪರಿಚಯವಿತ್ತಂತೆ. ಆದರೆ ಮದುವೆ ಮಾತುಕತೆ ನಡೆದಿರುವುದು ಒಂದು ತಿಂಗಳ ಹಿಂದಷ್ಟೇ. ಜನವರಿಯಲ್ಲಿ ಪಿ ವಿ ಸಿಂಧು ಹೆಚ್ಚಿನ ಟೂರ್ನಿಯಲ್ಲಿ ಭಾಗವಹಿಸಲಿರುವ ಕಾರಣ, ಡಿಸೆಂಬರ್ ನಲ್ಲಿಯೇ ಮದುವೆ ಮಾಡುತ್ತಿದ್ದಾರೆ.

ಇನ್ನು ಪಿವಿ ಸಿಂಧು ಮದುವೆಯಾಗುತ್ತಿರುವ ಹುಡುಗನ ಹೆಸರು ವೆಂಟಕದತ್ತ ಸಾಯಿ. ಹೈದ್ರಾಬಾದ್ ಮೂಲದವರು. ಜೈಪುರದಲ್ಲಿ ನೆಲೆಸಿದ್ದಾರೆ. ಪೊಸಿಡೆಕ್ಸ್ ಟೆಕ್ನಾಲಜೀಸ್ ನಲ್ಲು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಪೂರ್ಣವಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲೀಕತ್ವ ಹೊಂದಿರುವ ಜೆಎಸ್ಡಬ್ಲ್ಯೂನಲ್ಲಿ ಇಂಟರ್ನ್ ಮತ್ತು ಆಂತರಿಕ ಸಲಹೆಗಾರನಾಗಿ ಕೆಲಸ ಮಾಡಿದ್ದಾರೆ. ಇನ್ನು 2019ರಿಂದಾನೂ ಪೊಸಿಡೆಕ್ಸ್ ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿಯೇ ಕೆಲಸ ಮಾಡುತ್ತಿದ್ದಾರೆ. ಇದೇ ತಿಂಗಳು ಮದುವೆ ಕೂಡ ಆಗುತ್ತಿದ್ದು, ನವಜೋಡಿಗೆ ಅಭಿಮಾನಿಗಳು ಹಾರೈಸಿದ್ದಾರೆ.

Advertisement
Tags :
Badminton starbengaluruchitradurgaIplkannadaKannadaNewsmarriagePV Sindhusuddionesuddionenewsಐಪಿಎಲ್ಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗತಾರೆಪಿವಿ ಸಿಂಧುಬೆಂಗಳೂರುಬ್ಯಾಡ್ಮಿಂಟನ್ಮದುವೆಸುದ್ದಿಒನ್ಸುದ್ದಿಒನ್ ನ್ಯೂಸ್ಹುಡುಗ
Advertisement
Next Article