For the best experience, open
https://m.suddione.com
on your mobile browser.
Advertisement

ಏಷ್ಯನ್ ಗೇಮ್ಸ್‌ 2023 : ನೀರಜ್ ಚೋಪ್ರಾಗೆ ಸ್ವರ್ಣ, 81 ಪದಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೇರಿದ ಭಾರತ

09:05 PM Oct 04, 2023 IST | suddionenews
ಏಷ್ಯನ್ ಗೇಮ್ಸ್‌ 2023   ನೀರಜ್ ಚೋಪ್ರಾಗೆ ಸ್ವರ್ಣ  81 ಪದಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೇರಿದ ಭಾರತ
Advertisement

Advertisement

ಸುದ್ದಿಒನ್ : ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತದ ಖಾತೆಗೆ ಮತ್ತೊಂದು ಚಿನ್ನದ ಪದಕ ಸೇರ್ಪಡೆಯಾಗಿದೆ. ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದರೆ, ಇದೇ ಸ್ಪರ್ಧೆಯಲ್ಲಿ ಕಿಶೋರ್ ಜೆನಾ ಬೆಳ್ಳಿ ಪದಕವನ್ನು ಪಡೆದಿದ್ದಾರೆ.

ಕಳೆದ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಈ ಬಾರಿ 88.88 ಮೀಟರ್ ಜಾವೆಲಿನ್ ಎಸೆದು ಮತ್ತೊಮ್ಮೆ ಚಿನ್ನದ ಪದಕ ಗೆದ್ದರು. ಬೆಳ್ಳಿ ಗೆದ್ದ ಕಿಶೋರ್ 87.54 ಮೀಟರ್ ಜಾವೆಲಿನ್ ಎಸೆದು ನೀರಜ್ ಗೆ ಕಠಿಣ ಪೈಪೋಟಿ ನೀಡಿದರು. ಈ ಪ್ರದರ್ಶನದೊಂದಿಗೆ ನೀರಜ್ ಮತ್ತು ಕಿಶೋರ್ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.

Advertisement

ಜಾವೆಲಿನ್ ಎಸೆತದಲ್ಲಿ ಎರಡು ಪದಕಗಳೊಂದಿಗೆ (ಚಿನ್ನ, ಬೆಳ್ಳಿ) ಭಾರತದ ಪದಕಗಳ ಸಂಖ್ಯೆ 81 ಕ್ಕೆ ತಲುಪಿದೆ.
(18 ಚಿನ್ನ, 31 ಬೆಳ್ಳಿ, 32 ಕಂಚು) ಭಾರತ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಚೀನಾ 312 (168 ಚಿನ್ನ, 93 ಬೆಳ್ಳಿ, 51 ಕಂಚು) ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಜಪಾನ್ 144 ಪದಕಗಳೊಂದಿಗೆ (36, 51, 57) ಎರಡನೇ ಸ್ಥಾನದಲ್ಲಿದೆ ಮತ್ತು 145 ಪದಕಗಳೊಂದಿಗೆ (33, 44, 68) ರಿಪಬ್ಲಿಕ್ ಆಫ್ ಕೊರಿಯಾ ಮೂರನೇ ಸ್ಥಾನದಲ್ಲಿದೆ.

ಯಾವ ದೇಶಕ್ಕೆ ಎಷ್ಟು ಪದಕಗಳು : ಇಲ್ಲಿದೆ ಮಾಹಿತಿ

Tags :
Advertisement